Advertisement
– ಇಂಥದ್ದೊಂದು ಪ್ರಶ್ನೆಯನ್ನು ಜನರ ಮುಂದಿಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ. ಉತ್ತರ ಪ್ರದೇಶದ ಖುಷಿ ನಗರ್, ದಿಯೋರಿಯಾ ಹಾಗೂ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದ ಮೂರು ಪ್ರತ್ಯೇಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಸೇನೆಯ ಕಾರ್ಯಾಚರಣೆಗಳನ್ನು ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತದೆ ಎಂಬ ವಿಪಕ್ಷಗಳ ಆರೋಪಗಳಿಗೆ ಮೊನಚಾದ ಉತ್ತರ ನೀಡಿದರು. ತಮ್ಮಿ ಮಾತಿಗೆ, ಕಾಶ್ಮೀರದ ಶೋಪಿಯಾನ್‌ನಲ್ಲಿ ರವಿವಾರ ಬೆಳಗ್ಗೆ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಪ್ರಕರಣ ವನ್ನು ಬಳಸಿಕೊಂಡ ಅವರು,””ಸಶಸ್ತ್ರಧಾರಿ ಭಯೋತ್ಪಾದಕರು ಸೇನೆಯ ಮುಂದೆ ಪ್ರತ್ಯಕ್ಷವಾದಾಗ, ನಮ್ಮ ಯೋಧರು ಅವರನ್ನು ಕೊಲ್ಲಬೇಕೋ ಬೇಡವೋ ಎಂದು ಚುನಾವಣಾ ಆಯೋಗವನ್ನು ಕೇಳುತ್ತಾ ಕೂರಬೇಕೇ?” ಎಂದು ಕೇಳಿದರು.
Related Articles
ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದ ರ‍್ಯಾಲಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ ಅವರು, “”ಹಿಂದೂ ಧರ್ಮಕ್ಕೆ ಭಯೋತ್ಪಾದನೆಯ ಕಳಂಕ (ಮಾಲೆಗಾಂವ್, ಅಜ್ಮಿàರ್ ಸ್ಫೋಟ ಪ್ರಕರಣ) ಹಚ್ಚುವ ಮೂಲಕ ಕಾಂಗ್ರೆಸ್ ಭಾರತದ ಧಾರ್ಮಿಕ ಪರಂಪರೆಗೆ ಕಪ್ಪು ಮಸಿ ಬಳಿಯಿತು. ಹಿಂದೂ ಧರ್ಮಕ್ಕೆ ಇಂಥ ಕಳಂಕ ಅಂಟಿಸಿದವರನ್ನು ಈ ದೇಶದ ಹಿಂದೂಗಳು ಎಂದಿಗೂ ಕ್ಷಮಿಸಲಾರರು” ಎಂದು ಹರಿಹಾಯ್ದರು. ಅಲ್ಲದೆ, ಭೋಪಾಲ್ ಅನಿಲ ದುರಂತ, ಸಿಕ್ಖ್ ದಂಗೆಯಂಥ ಘಟನೆ ಗಳನ್ನು ಆಗಿದ್ದಾಯ್ತು ಎನ್ನುವ ಮೂಲಕ ಉಡಾಫೆ ಮನೋಭಾವವನ್ನು ಕಾಂಗ್ರೆಸ್ ತೋರುತ್ತಿದೆ. ಇದು ವಿಪಕ್ಷಗಳ ಮನಸ್ಥಿತಿಗೆ ಸೂಕ್ತ ಉದಾಹರಣೆ ಎಂದರು.
Advertisement
ಅಲ್ಲದೆ, ಖಾಂಡ್ವಾದ ಹೆಮ್ಮೆಯಾದ ಬಾಲಿವುಡ್‌ನ ಅಮರ ಗಾಯಕ ಕಿಶೋರ್ ಕುಮಾರ್ ಅವರ ಹಾಡುಗಳನ್ನು ತುರ್ತು ಪರಿಸ್ಥಿತಿ ವೇಳೆ ನಿರ್ಬಂಧಿಸಲಾಗಿತ್ತೆಂದೂ ಹೇಳಿದರು.
ಜತೆಗೆ, ಅಲ್ಲದೆ, ಜಾತಿ ರಾಜಕಾರಣ ಮಾಡುವ ವಿಪಕ್ಷಗಳು, ಹಾಲಿ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಲಿದೆ ಎಂದರಲ್ಲದೆ, ತಾವು ಜಾತಿ ರಾಜಕಾರಣದಿಂದ ದೂರವಿರುವುದಾಗಿ ತಿಳಿಸಿದರು.