Advertisement

ಕೋವಿಡ್ ವಿರುದ್ಧ ಗೆಲ್ಲಲು ಈಸ್ಟರ್‌ ಶಕ್ತಿ ನೀಡಲಿ: ಪ್ರಧಾನಿ ಮೋದಿ ಆಶಯ

09:21 AM Apr 13, 2020 | Hari Prasad |

ನವದೆಹಲಿ: ದೇಶದ ಜನತೆಗೆ ಕೋವಿಡ್ ವೈರಸ್‌ ಸೋಂಕಿನ ವಿರುದ್ಧ ವಿಜಯ ಸಾಧಿಸುವ ಶಕ್ತಿಯನ್ನು ಈಸ್ಟರ್‌ ನೀಡಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಿಸಿದ್ದಾರೆ. ಏಸು ಕ್ರಿಸ್ತನ ಪುನರುತ್ಥಾನದ ಸ್ಮರಣಾರ್ಥ ಕ್ರೈಸ್ತ ಸಮುದಾಯದವರು ಈಸ್ಟರ್‌ ಆಚರಿಸುತ್ತಾರೆ.

Advertisement

ಈ ಹಿನ್ನೆಲೆಯಲ್ಲಿ ಭಾನುವಾರ ಟ್ವೀಟ್‌ ಮಾಡಿರುವ ಪ್ರಧಾನಿ, ದೇಶದ ಜನತೆಗೆ ಈಸ್ಟರ್‌ ಶುಭಾಶಯ ಕೋರಿದ್ದಾರೆ. ಜತೆಗೆ, ಈ ಶುಭ ದಿನದಂದು ನಾವು ಏಸುಕ್ರಿಸ್ತರ ಉದಾತ್ತ ಗುಣಗಳನ್ನು, ಪ್ರಮುಖವಾಗಿ ಬಡವರು ಮತ್ತು ನಿರ್ಗತಿಕರ ಸಬಲೀಕರಣದ ಬಗ್ಗೆ ಅವರು ಹೊಂದಿದ್ದ ಬದ್ಧತೆಯನ್ನು ನೆನೆಯುತ್ತೇವೆ. ಹಾಗೆಯೇ, ಜಗತ್ತನ್ನು ವ್ಯಾಪಿಸಿರುವ ಮಾರಕ ವೈರಸ್‌ ವಿರುದ್ಧ ಗೆಲ್ಲುವ ಶಕ್ರಿಯನ್ನು ಏಸುಕ್ರಿಸ್ತ ಮತ್ತು ಈಸ್ಟರ್‌ ನಮಗೆಲ್ಲಾ ನೀಡಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next