Advertisement

ತಂತ್ರಜ್ಞಾನ ವರ್ಗಾವಣೆ, ಶಸ್ತ್ರಾಸ್ತ್ರ ತಯಾರಿ; ರಷ್ಯಾದಲ್ಲಿ ಪ್ರಧಾನಿ ಮೋದಿ ಸಂದರ್ಶನ

09:45 AM Sep 05, 2019 | Team Udayavani |

ಮಾಸ್ಕೋ:ಮಿಲಿಟರಿ ಸಂಬಂಧಿ ಶಸ್ತ್ರಾಸ್ತ್ರಗಳ ತಂತ್ರಜ್ಞಾನದ ವರ್ಗಾವಣೆ ಜತೆಗೆ ರಷ್ಯಾ ಮತ್ತು ಭಾರತ ಜಂಟಿಯಾಗಿ ಸೇನಾ ಶಸ್ತ್ರಾಸ್ತ್ರಗಳನ್ನು ಉತ್ಪಾದನೆ ಮಾಡುವತ್ತ ಹೆಜ್ಜೆ ಇಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಎರಡು ದಿನಗಳ ರಷ್ಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಬುಧವಾರ ರಷ್ಯಾಕ್ಕೆ ಆಗಮಿಸಿದ್ದು ಈ ಸಂದರ್ಭದಲ್ಲಿ ರಷ್ಯಾ ಸರಕಾರದ ಟಿಎಎಸ್ ಎಸ್ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಉಭಯ ದೇಶಗಳ ನಡುವಿನ ತಂತ್ರಜ್ಞಾನ ವರ್ಗಾವಣೆ ಕುರಿತು ಮಾತನಾಡಿದ್ದಾರೆ.

“ ಒಂದು ವೇಳೆ ತಂತ್ರಜ್ಞಾನ ವರ್ಗಾವಣೆಗೊಂಡರೆ ಇದರಿಂದಾಗಿ ಭಾರತದಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ಇತರ ಸೇನಾ ಉಪಕರಣಗಳು ಅಗ್ಗದ ಬೆಲೆಯಲ್ಲಿ ದೊರಕಲಿದೆ ಎಂದರು.

ನಮ್ಮ ಯೋಜನೆ ಮುಂದೆ ಕಾರ್ಯಗತವಾದರೆ ಭಾರತ ಮತ್ತು ರಷ್ಯಾ ಅತೀ ಕಡಿಮೆ ಬೆಲೆಯಲ್ಲಿ ಮೂರನೇ ರಾಷ್ಟ್ರಗಳಿಗೆ ಈ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ನವದೆಹಲಿ ಮತ್ತು ರಷ್ಯಾ ಇಂತಹ ಅವಕಾಶವನ್ನು ಬಳಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.

ಭಾರತ ಮತ್ತು ರಷ್ಯಾ ಕೇವಲ ಗ್ರಾಹಕ ಮತ್ತು ಸೇನಾ ತಂತ್ರಜ್ಞಾನದ ಮಾರಾಟದ ಹಿತಾಸಕ್ತಿಯನ್ನು ಮಾತ್ರ ಹೊಂದಿಲ್ಲ. ಅದಕ್ಕಿಂತ ಹೆಚ್ಚಾಗಿ ಉಭಯ ದೇಶಗಳ ಸರಕಾರಗಳು ತಂತ್ರಜ್ಞಾನದ ಮಾದರಿಯ ವರ್ಗಾವಣೆಗೆ ಹೆಚ್ಚಿನ ಮಹತ್ವ ನೀಡಿದಂತಾಗುತ್ತದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next