Advertisement
ಎಷ್ಟೇ ದೊಡ್ಡ ಸಮಸ್ಯೆ ಇದ್ದರೂ ಮಾತುಕತೆ ಮೂಲಕ ಅದನ್ನು ಪರಿಹರಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಭಾರತ-ಚೀನಾ ನಡುವಿನ ಗಡಿ ವಿವಾದ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.
ಏತನ್ಮಧ್ಯೆ, ಡೋಕ್ಲಾಂ ಗಡಿಯಲ್ಲಿ ಬೀಡುಬಿಟ್ಟಿರುವ ಭಾರತೀಯ ಸೇನಾಪಡೆಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸಣ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ನಡೆಸಲು ಚೀನಾ ಸಿದ್ಧತೆ ನಡೆಸಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. “ಡೋಕ್ಲಾಂ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವಿನ ವಿಷಮ ಪರಿಸ್ಥಿತಿಯನ್ನು ಹೀಗೇ ಮುಂದುವರಿಸಲು ಚೀನಾ ಸಿದ್ಧವಿಲ್ಲ. ಹೀಗಾಗಿ ಭಾರತೀಯ ಸೈನಿಕರನ್ನು ಹಿಮ್ಮೆಟ್ಟಿಸುವ ಉದ್ದೇಶದಿಂದ ಮುಂದಿನ ಎರಡು ವಾರದೊಳಗೆ ಸಣ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ನಡೆಸಲಿದೆ’ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
Related Articles
ಚೀನಾ ಮೂಲದ ಎಸ್‌ಝೆಡ್ ಡಿಜೆಐ ಟೆಕ್ನಾಲಜಿ ಕಂಪನಿಯ ಸಾಫ್ಟ್ವೇರ್, ಬಿಡಿಭಾಗಗಳನ್ನು ಒಳಗೊಂಡಿರುವ ಡ್ರೋಣ್‌ಗಳು ಹಾಗೂ ಆ್ಯಪ್‌ಗ್ಳ ಬಳಕೆಯನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಅಮೆರಿಕ ಸೇನೆ ತನ್ನ ಸದಸ್ಯರಿಗೆ ಆದೇಶಿಸಿದೆ.
Advertisement
“ಸಂಸ್ಥೆಯ ಉತ್ಪನ್ನಗಳು ಸುಲಭವಾಗಿ ಸೈಬರ್ ದಾಳಿಗೆ ತುತ್ತಾಗುತ್ತವೆ’ ಎಂದು ಯುಎಸ್ ಆರ್ಮಿ ಲ್ಯಾಬೊರೆಟರಿ ವರದಿ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಬಳಸುತ್ತಿರುವ ಎಲ್ಲ ಡಿಜೆಐ ಡ್ರೋಣ್‌ಗಳನ್ನು ವಶಕ್ಕೆ ಪಡೆದು, ಅವುಗಳಲ್ಲಿರುವ ಬ್ಯಾಟರಿ, ಸ್ಟೋರೇಜ್ ಸಾಧನಗಳನ್ನು ತೆಗೆದು, ಎಲ್ಲ ಅಪ್ಲಿಕೇಷನ್, ಸಾಫ್ಟ್ವೇರ್‌ಗಳನ್ನು ಅನ್ ಇನ್‌ಸ್ಟಾಲ್ ಮಾಡಿ ಡ್ರೋಣ್‌ಗsಳನ್ನು ಸುರಕ್ಷಿತವಾಗಿರಿಸಬೇಕು,’ ಎಂದು ಸೇನೆ ಆದೇಶಿಸಿದೆ.