Advertisement

ಪಾಕ್‌ನಿಂದ ನರಮೇಧ: ಪ್ರಧಾನಿ ವಿಷಾದ‌

12:29 AM Mar 27, 2021 | Team Udayavani |

ಢಾಕಾ: ಬಾಂಗ್ಲಾದೇಶವನ್ನು ಶತಾಯ ಗತಾಯ ವಶಕ್ಕೆ ಪಡೆಯಲು ಹವಣಿಸಿದ್ದ ಪಾಕಿಸ್ಥಾನ ಸೇನೆ, 1971ರಲ್ಲಿ ಬಾಂಗ್ಲಾದೇಶದಲ್ಲಿ ನರಮೇಧ, ಅತ್ಯಾಚಾರದಂಥ ಹೇಯ ಕೃತ್ಯಗಳನ್ನು ಮಾಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಬಾಂಗ್ಲಾದೇಶಕ್ಕೆ ಎರಡು ದಿನಗಳ ಭೇಟಿಗಾಗಿ ತೆರಳಿರುವ ಅವರು, ಢಾಕಾದಲ್ಲಿ ಶುಕ್ರವಾರ ಬಾಂಗ್ಲಾ ರಾಷ್ಟ್ರಪಿತ ಶೇಖ್‌ ಮುಜಿಬುರ್‌ ರಹಮಾನ್‌ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಬಾಂಗ್ಲಾದೇಶದಲ್ಲಿ ಪಾಕಿಸ್ಥಾನ ಸೇನೆ ನಡೆಸಿದ ವಿಧ್ವಂಸಕ ಹಾಗೂ ಹೇಯ ಕೃತ್ಯಗಳು ಭಾರತೀಯ ಮನಸ್ಸನ್ನು ತಲ್ಲಣಗೊಳಿಸಿದ್ದವು. ಅಂದು ಪಾಕಿಸ್ಥಾನ ಸೇನೆಯ ದೌರ್ಜನ್ಯವನ್ನು ಖಂಡಿಸಿ ಸತ್ಯಾಗ್ರಹಕ್ಕೆ ಇಳಿದ ಲಕ್ಷಾಂತರ ಭಾರತೀಯರಲ್ಲಿ ನಾನೂ ಒಬ್ಬ. ಆಗ ನನ್ನ ವಯಸ್ಸು 20-22 ಆಗಿದ್ದು, ಅದೇ ನಾನು ಸೇರಿದ ಮೊದಲ ಹೋರಾಟ. ಆಗ ನಾನು ಜೈಲಿಗೂ ಹೋಗಿದ್ದೆ ಎಂದು ಮೋದಿ ನೆನಪಿಸಿಕೊಂಡರು. ಬಾಂಗ್ಲಾವನ್ನು ಸ್ವತಂತ್ರ ವಾಗಿ ಸಲು ಸಹಾಯ ಮಾಡಿದ ಸಮಸ್ತ ಭಾರತೀಯ ಸೇನೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.

ಮಾಜಿಗಳ ಸ್ಮರಣೆ: ಬಾಂಗ್ಲಾ ವಿಮೋಚನೆಯಲ್ಲಿ ಇಂದಿರಾಗಾಂಧಿ ನೀಡಿದ ಬೆಂಬಲವನ್ನು ಬಾಂಗ್ಲಾ ದೇಶೀಯರು ಎಂದಿಗೂ ಮರೆಯಲಾರರು. ಬಾಂಗ್ಲಾದ ಅಭಿವೃದ್ಧಿಯಲ್ಲೂ ಇಂದಿರಾಜೀ ಅವರ ಕಾಣಿಕೆ ಮಹತ್ವದ್ದು ಎಂದ ಮೋದಿ, ಬಾಂಗ್ಲಾ ವಿಮೋಚನೆಗೆ ಬೆಂಬಲ ಸೂಚಿಸಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, “ನಮ್ಮ ಹೋರಾಟ ಕೇವಲ ಬಾಂಗ್ಲಾವನ್ನು ಸ್ವತಂತ್ರವಾಗಿಸುವುದಷ್ಟೇ ಅಲ್ಲ, ಇತಿಹಾಸಕ್ಕೆ ಹೊಸ ದಿಕ್ಕನ್ನೂ ತೋರಿಸುವ ಉದ್ದೇಶವೂ ಇದರ ಹಿಂದಿದೆ’ ಎಂದಿದ್ದನ್ನು ಸ್ಮರಿಸಿದರು.

ಇಂದಿನ ಕಾರ್ಯಕ್ರಮ
– ಶನಿವಾರ ಬೆಳಗ್ಗೆ ಢಾಕಾದಿಂದ ಸತ್ಕಿರಾಂಡ್‌ಗೆ ಪ್ರಧಾನಿ ಮೋದಿ ಭೇಟಿ.
– ಶ್ಯಾಮನಗರ್‌ನಲ್ಲಿರುವ ಜೆಶೋರೇಶ್ವರಿ ದೇಗುಲದಲ್ಲಿ ಕಾಳಿ ಮಾತೆಯ ದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next