Advertisement

ಮೋದಿ ಅವಧಿಯಲ್ಲಿ ಪಾಕ್‌ಗೆ ಏಟು ಖಚಿತ! ಚೀನಾ ಜತೆಗೂ ಸಶಸ್ತ್ರ ಸಂಘರ್ಷ ಸಾಧ್ಯತೆ

12:30 AM Mar 10, 2023 | Team Udayavani |

ವಾಷಿಂಗ್ಟನ್‌: “ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಾಕಿಸ್ತಾನ ಸೇನೆ ಕೈಗೊಳ್ಳುವ ದುಷ್ಕೃತ್ಯಗಳಿಗೆ ಮತ್ತಷ್ಟು ಪ್ರಬಲ ಪ್ರತಿಕ್ರಿಯೆ ನೀಡುವುದು ಖಚಿತ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಇದ್ದುದ್ದಕ್ಕಿಂತ ತೀವ್ರ ರೀತಿಯಲ್ಲಿ ಇರಲಿದೆ.’

Advertisement

– ಹೀಗೆಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಆ ದೇಶ ಸಂಸತ್‌ಗೆ ಸಲ್ಲಿಕೆ ಮಾಡಿರುವ ಮೌಲ್ಯಮಾಪನ ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಇದರ ಜತೆಗೆ 2020ರ ಗಾಲ್ವಾನ್‌ ದಾಳಿಯ ಬಳಿಕ ಭಾರತ ಹಾಗೂ ಚೀನಾ ನಡುವಿನ ಬಾಂಧವ್ಯದಲ್ಲಿ ಸುಧಾರಣೆಯಾಗಿಲ್ಲ. ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಯಾದ್ಯಂತ ಎರಡೂ ದೇಶಗಳ ಸೇನೆಗಳು ಜಮಾವಣೆಯಾಗಿವೆ. ಈ ಎಲ್ಲಾ ಪ್ರತಿಕೂಲ ಅಂಶಗಳ ಹೊರತಾಗಿಯೂ ಎರಡೂ ದೇಶಗಳ ನಡುವೆ ಮಾತುಕತೆಗಳು ನಡೆದಿದ್ದರೂ, ಅದರಲ್ಲೇನೂ ಧನಾತ್ಮಕ ಪರಿಣಾಮ ಬೀರಿಲ್ಲ ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ.

ಜಗತ್ತಿನ ವಿವಿಧ ಭಾಗಗಳಲ್ಲಿ ಭದ್ರತೆಗೆ ಇರುವ ಸಂಭಾವ್ಯ ಬೆದರಿಕೆಗಳನ್ನು ಪರಿ  ಶೀಲಿಸಿ, ಅಮೆರಿಕದ ಗುಪ್ತಚರ ಸಂಸ್ಥೆಗಳ ಒಕ್ಕೂಟ ನಡೆಸಿರುವ ಮೌಲ್ಯಮಾಪನದಲ್ಲಿ ಈ ಅಂಶಗಳನ್ನು ಉಲ್ಲೇಖೀಸಲಾಗಿದೆ.

ಮೋದಿ ಅವಧಿಯಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಬಾಂಧವ್ಯ ಸುಧಾರಣೆಯಾಗಿಲ್ಲ. ಲಾಗಾಯ್ತಿನಿಂದ ಪಾಕಿಸ್ತಾನ, ಭಾರತ ವಿರೋಧಿ ಧೋರಣೆ ಗಳನ್ನು ಹೊಂದಿದೆ. ಭಾರತದಲ್ಲಿ ಸದ್ಯ ಅಧಿಕಾರದಲ್ಲಿ ಇರುವ ನರೇಂದ್ರ ಮೋದಿ ಸರ್ಕಾರ ಪಾಕ್‌ನ ಕುತ್ಸಿತ ದುಷ್ಕೃತ್ಯಗಳಿಗೆ ಸೇನಾ ಮಾಧ್ಯಮದ ಮೂಲಕ ಹಿಂದಿನ ಸರ್ಕಾರಗಳಿಗೆ ಹೋಲಿಕೆ ಮಾಡಿದರೆ ಪ್ರಬಲ ಪ್ರತ್ಯುತ್ತರ ನೀಡಲಿದೆ. ಕಾಶ್ಮೀರ ವಿಚಾರ, ಗಡಿಯಾಚೆಯಿಂದ ಭಯೋತ್ಪಾದನೆ ವಿಚಾರದಿಂದಾಗಿ ಬಾಂಧವ್ಯ ಮುರಿದು ಬಿದ್ದಿದೆ ಎಂದು ವರದಿಯಲ್ಲಿ ಅಭಿ ಪ್ರಾಯಪಡಲಾಗಿದೆ. ಭಯೋ ತ್ಪಾದ ನೆಗೆ ಪೂರ್ಣವಿರಾಮ ಬೀಳುವ ವರೆಗೆ ಮಾತುಕತೆ ಸಾಧ್ಯವೇ ಇಲ್ಲ ಎಂದು ಭಾರತ ಸರ್ಕಾರ ಪ್ರತಿಪಾದಿಸುತ್ತಿದೆ ಎಂದು ಗುಪ್ತಚರ ಸಂಸ್ಥೆಯ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಸಶಸ್ತ್ರ ಸಂಘರ್ಷ: ಭಾರತ ಮತ್ತು ಚೀನಾ ಸಂಘರ್ಷದ ಬಗ್ಗೆ ವರದಿಯಲ್ಲಿ ಉಲ್ಲೇಖೀ ಸಿರುವ ಪ್ರಕಾರ, “ಎಲ್‌ಎಸಿಯಾದ್ಯಂತ 2 ದೇಶಗಳ ಯೋಧರು ಜಮಾವಣೆಗೊಂಡಿ ದ್ದಾರೆ.

Advertisement

ಇದರಿಂದಾಗಿ ಮುಂದಿನ ದಿನಗಳಲ್ಲಿ ಸಶಸ್ತ್ರ ಸಂಘರ್ಷ ನಡೆಯುವ ಸಾಧ್ಯತೆ ಯನ್ನೂ ತಳ್ಳಿ ಹಾಕುವಂತೆ ಇಲ್ಲ. ಇದು ಅಮೆರಿಕ ಸರ್ಕಾರಕ್ಕೆ ಮತ್ತು ಅದರ ಪ್ರಜೆಗಳಿಗೆ ನೇರ ಬೆದರಿಕೆಯನ್ನು ತಂದೊಡ್ಡುವ ಸಾಧ್ಯತೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರದ ಮಧ್ಯಪ್ರವೇಶ ಮಾಡಿ ಬಿಗುವು ತಣಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ಅಭಿಪ್ರಾಯಪಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next