Advertisement

Kargil Vijay Diwas: ಪಾಕಿಸ್ತಾನ ಇತಿಹಾಸದಿಂದ ಯಾವ ಪಾಠವನ್ನೂ ಕಲಿತಿಲ್ಲ: ಪ್ರಧಾನಿ ಮೋದಿ

02:04 AM Jul 27, 2024 | Team Udayavani |

ಕಾರ್ಗಿಲ್:‌ ಹಿಂದಿನ ಇತಿಹಾಸದಿಂದ ಪಾಕಿಸ್ತಾನ(Pakistan) ಯಾವುದೇ ಪಾಠ ಕಲಿತಿಲ್ಲ, ಆ ದೇಶ ಇನ್ನೂ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ(PM Modi) ಶುಕ್ರವಾರ (ಜುಲೈ 26) 1999ರ ಕಾರ್ಗಿಲ್‌(Kargil War) ಯುದ್ದದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿ ಮಾತನಾಡಿದರು.

Advertisement

ಪಾಕಿಸ್ತಾನ ಯಾವಾಗೆಲ್ಲಾ ದುಸ್ಸಾಹಸ ನಡೆಸಿತ್ತೋ ಆವಾಗ ಸೋಲನ್ನೇ ಅನುಭವಿಸಿದೆ. ಆದರೂ ಕೂಡಾ ಪಾಕ್‌ ಇತಿಹಾಸದಿಂದ ಪಾಠ ಕಲಿತಿಲ್ಲ ಎಂದು ಕಾರ್ಗಿಲ್‌ ಯುದ್ಧ ಸ್ಮಾರಕದಲ್ಲಿ(Kargil War Memorial) ಪ್ರಧಾನಿ ಮೋದಿ ಹೇಳಿದರು.

ದೇಶಕ್ಕಾಗಿ ಹುತಾತ್ಮರಾದ ಸೈನಿಕರ ತ್ಯಾಗ ಅಮರ. ಅಷ್ಟೇ ಅಲ್ಲ ಕಾರ್ಗಿಲ್‌ ವಿಜಯ್‌ ದಿವಸದಂದು ಸದಾ ಸ್ಮರಿಸಿಕೊಳ್ಳುವುದಾಗಿ ತಿಳಿಸಿದರು.

ಕಾರ್ಗಿಲ್‌(Kargil)ನ ಲಡಾಖ್‌ ನ ಅತೀ ಎತ್ತರದ ಪ್ರದೇಶದಲ್ಲಿ ಸುಮಾರು 3ತಿಂಗಳ ಕಾಲ ಯುದ್ಧ ನಡೆದ ನಂತರ 1999ರ ಜುಲೈ 26ರಂದು ಭಾರತೀಯ ಸೇನೆ(Indian Army) ಪಾಕ್‌ ವಿರುದ್ಧದ ಆಪರೇಶನ್‌ ವಿಜಯ್‌ ನಲ್ಲಿ ಗೆಲುವು ಸಾಧಿಸಿರುವುದಾಗಿ ಘೋಷಿಸಿತ್ತು.

Advertisement

ಕಾರ್ಗಿಲ್‌ ಯುದ್ಧದಲ್ಲಿ ಪಾಕ್‌ ವಿರುದ್ಧ ಜಯ ಸಾಧಿಸಿರುವ ದಿನವನ್ನು ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್‌ ವಿಜಯ್‌ ದಿವಸ್‌ ಎಂದು ಆಚರಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಗಿಲ್‌ ವಿಜಯ್‌ ದಿವಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ಲಡಾಖ್‌ ನ ದ್ರಾಸ್‌ ನಲ್ಲಿ ಹಿಮಾಚಲ್‌ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶ ಲಡಾಖ್‌ ನಡುವಿನ ಸಂಪರ್ಕಕ್ಕಾಗಿ ಸುರಂಗ ಮಾರ್ಗ ಕಾಮಗಾರಿಗೆ ಚಾಲನೆ ನೀಡಿದ್ದರು.

ವಿಶ್ವದ ಎತ್ತರದ ಸುರಂಗಕ್ಕೆ ಚಾಲನೆ
ಬಂಡೆ ಸ್ಫೋಟಿಸುವ ಮೂಲಕ ಹಿಮಾಚಲ ಪ್ರದೇಶ ಹಾಗೂ ಲಡಾಖ್‌ ನಡುವೆ ಎಲ್ಲ ಋತುವಿನಲ್ಲೂ ಸಂಪರ್ಕ ಕಲ್ಪಿಸುವ ಸುರಂಗಕ್ಕೆ ಮೋದಿ ಚಾಲನೆ ನೀಡಿದ್ದಾರೆ. ಲಡಾಖ್‌ನ ದ್ರಾಸ್‌ನಲ್ಲಿ ಕಾರ್ಗಿಲ್‌ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ಇಲ್ಲಿಂದಲೇ ವರ್ಚುವಲ್‌ ಆಗಿ ಶಿನ್‌ ಕುನ್‌ ಲಾ ಸುರಂಗ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಈ ಸುರಂಗ 4.1 ಕಿ.ಮೀ ಉದ್ದವಿರಲಿದ್ದು, ನಿಮು ಪಡುಂ ದರ್ಚಾ ಹೆದ್ದಾರಿಯಲ್ಲಿ 15,800 ಅಡಿ ಎತ್ತರದಲ್ಲಿ ನಿರ್ಮಾಣವಾಗಲಿದೆ. ನಿರ್ಮಾಣದ ಬಳಿಕ ವಿಶ್ವದ ಅತೀ ಎತ್ತರದ ಸುರಂಗ ಎನಿಸಲಿದೆ. ಪ್ರಸ್ತುತ ಚೀನದ ಮಿ ಲಾ ಸುರಂಗವು 15,590 ಅಡಿ ಎತ್ತರ ಹೊಂದಿದ್ದು ವಿಶ್ವದ ಎತ್ತರದ ಸುರಂಗ ಎನಿಸಿಕೊಂಡಿದೆ. ಟ್ವಿನ್‌-ಟ್ಯೂಬ್‌ ದ್ವಿಪಥ ಸುರಂಗವಾಗಿರುವ ಶಿನ್‌ ಕುನ್‌ ಲಾದ ಮೇಲೆ ಫಿರಂಗಿ ಮತ್ತು ಕ್ಷಿಪಣಿ ದಾಳಿಯಾದರೂ ಯಾವುದೇ ಹಾನಿ ಆಗದು ಎಂಬುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next