Advertisement
ಆದಿ ಶಂಕರಾಚಾರ್ಯ ಪ್ರತಿಮೆ ಲೋಕಾರ್ಪಣೆ :ಪ್ರಧಾನಿ ಮೋದಿ ಕೇದಾರನಾಥ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ, ಆದಿ ಶಂಕರಾಚಾರ್ಯರ ಪುನರುತ್ಥಾನಗೊಂಡ ಸಮಾಧಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಜೊತೆಗೆ, ಕೇದಾರನಾಥದಲ್ಲಿ ಸ್ಥಾಪಿಸಲಾಗಿರುವ ಶಂಕರಾಚಾರ್ಯರ ಪ್ರತಿ ಮೆಯನ್ನೂ ಅನಾವರಣಗೊಳಿಸಲಿದ್ದಾರೆ.
ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಿದ ಮಹಾನ್ ದಾರ್ಶನಿಕರಾದ ಶ್ರೀಮದ್ ಶಂಕರಾಚಾರ್ಯರ ಸಮಾಧಿಯು 2013ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ್ದ ಪ್ರವಾಹದಿಂದ ಧ್ವಂಸಗೊಂಡಿತ್ತು. ಈಗ ಅದ ನ್ನು ಪುನರುತ್ಥಾನಗೊಳಿಸಲಾಗಿದೆ. ಆ ಸಮಾಧಿಯನ್ನು ಹಾಗೂ ಅವರ ಪ್ರತಿಮೆಯನ್ನು ಅನಾವರಣಗೊಳಿಸುತ್ತಿರುವುದು ಐತಿಹಾಸಿಕ ಕಾರ್ಯಕ್ರಮಗಳಾಗಿವೆ. ದೇಶಾದ್ಯಂತ ಈ ಇದರ ರಂಗು ಪಸರಿಸಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಬಿಜೆಪಿ ಹೇಳಿದೆ. ಇದನ್ನೂ ಓದಿ : 60ರ ವಯಸ್ಸಿನಲ್ಲಿ ಸರಕಾರ ನಮ್ಮನ್ನು ಗುರುತಿಸಿತಲ್ಲ: ಪ್ರಾಣೇಶ್ ಸಂತಸ
Related Articles
ಶಂಕರಾಚಾರ್ಯರ ನವೀಕೃತ ಸಮಾಧಿ ಹಾಗೂ ಪುತ್ಥಳಿ ಲೋಕಾರ್ಪಣೆ ಹಿನ್ನೆಲೆಯಲ್ಲಿ, ಅವರು ಧರ್ಮಪ್ರಚಾರ ಹಾಗೂ ಧರ್ಮಪುನರುತ್ಥಾನಕ್ಕಾಗಿ ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಸಾಗಿ ಹೋಗುವಾಗ ಸಂದರ್ಶಸಿದ್ದರೆನ್ನಲಾದ 87 ಪ್ರಮುಖ ದೇಗುಲಗಳು, 12 ಜ್ಯೋತಿರ್ಲಿಂಗಗಳು, ಹಿಮಾಲಯದ ಸನ್ನಿಧಿಗಳಲ್ಲಿ ಹಾಗೂ ಹಿಮಾಲಯದ ವ್ಯಾಪ್ತಿಯಲ್ಲಿ ಬರುವ ಚಾರ್ ಧಾಮ್‌ಗಳಲ್ಲಿಯೂ ಧಾರ್ಮಿಕ ಪೂಜೆ ಹಾಗೂ ಸಂಭ್ರಮಾಚರಣೆ ಮಾಡಲಾಗುತ್ತದೆ. ಈ ಎಲ್ಲಾ ಸಮಾರಂಭಗಳಲ್ಲಿ ಮುಕ್ತವಾಗಿ ಭಾಗವಹಿಸಲು ಸಾಧುಗಳು, ಸನ್ಯಾಸಿಗಳಿಗೆ ಆಹ್ವಾನ ನೀಡಲಾಗುತ್ತದೆ. ಈ ಎಲ್ಲಾ ಕಾರ್ಯಕ್ರಮಗಳ ವೇಳೆ, ಕೇದಾರನಾಥದಲ್ಲಿ ನಡೆಯುವ ಮೋದಿಯವರ ಕಾರ್ಯಕ್ರಮಗಳನ್ನು ವಿಶಾಲವಾದ ಎಲ್‌ಇಡಿ ಪರದೆಗಳ ಮೂಲಕ ನೇರಪ್ರಸಾರ ಮಾಡಲಾಗುತ್ತದೆ.
Advertisement