Advertisement
ಜಗತ್ತಿನ ಎಲ್ಲಾ ರಾಷ್ಟ್ರಗಳು ಒಗ್ಗೂಡಿ ಮತ್ತು ಅತ್ಯಂತ ಯೋಚನೆಯಿಂದ ಅಫ್ಘಾನಿಸ್ತಾನದಲ್ಲಿ ಇರುವ ವ್ಯವಸ್ಥೆಯನ್ನು ಗುರುತಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿದೆ. ಏಕೆಂದರೆ ಆ ದೇಶದಲ್ಲಿ ಸದ್ಯ ಜಾರಿಯಲ್ಲಿರುವ ಆಡಳಿತ ವ್ಯವಸ್ಥೆ ಎಲ್ಲರನ್ನೂ ಒಳಗೊಂಡಿಲ್ಲ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಇದರ ಜತೆಗೆ ಹೆಚ್ಚುತ್ತಿರುವ ತೀವ್ರವಾದ ಮತ್ತು ಮೂಲಭೂತವಾದ ಜಗತ್ತಿನ ಶಾಂತಿ ಮತ್ತು ನೆಮ್ಮದಿಗೆ ಭಂಗತರುವಂಥದ್ದು ಎಂದು ಎಚ್ಚರಿಸಿದ್ದಾರೆ. ಶಾಂಘೈ ಸಹಕಾರ ಒಕ್ಕೂಟದ ಸದಸ್ಯರು ಅಫ್ಘಾನ್‌ನಲ್ಲಿ ತೀವ್ರವಾದ ಮತ್ತು ಮೂಲಭೂತವಾದ ನಿಯಂತ್ರಣದಲ್ಲಿ ಇರುವಂತೆ ಮಾಡಲೇಬೇಕಾಗಿದೆ.
Related Articles
ಪೂರ್ವ ಲಡಾಖ್‌ನಲ್ಲಿ ಉಂಟಾಗಿರುವ ಗಡಿ ತಂಟೆಯನ್ನು ಪರಿಹರಿಸಲು ಭಾರತ ಮತ್ತು ಚೀನಾ ಎರಡೂ ಜತೆಗೂಡಿ ಕೆಲಸ ಮಾಡಬೇಕು. ಬಿಕ್ಕಟ್ಟು ನಿವಾರಣೆ ವಿಚಾರವನ್ನು ಮೂರನೇ ರಾಷ್ಟ್ರದ ದೃಷ್ಟಿಕೋನದಿಂದ ನೋಡಲೇಬಾರದು ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ತಜಿಕಿಸ್ತಾನ ರಾಜಧಾನಿ ದುಶಾಂಬೆಯಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟದ ಸದಸ್ಯ ರಾಷ್ಟ್ರಗಳ ಸಭೆಯ ಚೀನಾ ವಿದೇಶಾಂಗ ಸಚಿವ ವಾಂಗ್ ಇ ಜತೆಗೆ ನಡೆದ ಮಾತುಕತೆ ವೇಳೆ ಈ ಅಂಶ ಪ್ರಸ್ತಾಪಿಸಿದ್ದಾರೆ ವಿದೇಶಾಂಗ ಸಚಿವ. ಎರಡೂ ರಾಷ್ಟ್ರಗಳು ಕುಳಿತು ಸಹಮತದಿಂದ ಎಲ್‌ಎಸಿ ವಿವಾದ ಬಗೆಹರಿಸುವ ಅಗತ್ಯವಿದೆ ಎಂದರು. ಇತ್ಯರ್ಥವಾಗದೇ ಉಳಿದಿರುವ ಗಡಿ ತಕರಾರುಗಳನ್ನು ಬಗೆಹರಿಸುವುದು ಎರಡೂ ರಾಷ್ಟ್ರಗಳಿಗೆ ಹಿತವಾಗಲಿರುವ ವಿಚಾರ. ಭಾರತದ ಇತಿಹಾಸ ನೋಡಿದರೆ ಮತ್ತೂಂದು ರಾಷ್ಟ್ರದ ವಿರುದ್ಧ ಕಾಲುಕೆರೆದುಕೊಂಡು ಜಗಳಕ್ಕೆ ಹೋದ ಅಥವಾ ದಾಳಿ ಮಾಡಿದ ಅಂಶಗಳೇ ಇಲ್ಲ. ಪರಸ್ಪರ ವಿಶ್ವಾಸ ಮತ್ತು ನಂಬಿಕೆಗಳಿಂದ ಕೂಡಿದ ಬಾಂಧವ್ಯ ಸ್ಥಾಪನೆ ಆದ್ಯತೆಯಾಗಬೇಕಾಗಿದೆ ಎಂದು ಸೂಚ್ಯವಾಗಿ ಚೀನಾ ವಿದೇಶಾಂಗ ಸಚಿವರಿಗೆ, ಜೈಶಂಕರ್ ವಿವರಿಸಿದ್ದಾರೆ.
Advertisement
ಮೋದಿಯವರ ನಾಲ್ಕು ಆತಂಕ1. ಸದ್ಯ ದೇಶದಲ್ಲಿರುವ ಅಧಿಕಾರ ಎಲ್ಲರನ್ನೂ ಒಳಗೊಂಡಿಲ್ಲ
2. ಅಸ್ಥಿರತೆ ಮತ್ತು ಮೂಲಭೂತವಾದ ಮುಂದುವರಿದರೆ ಉಗ್ರ ಸಿದ್ಧಾಂತಕ್ಕೆ ದಾರಿ.
3. ಅನಿಯಂತ್ರಿತವಾಗಿ ಮಾದಕ ವಸ್ತು, ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಮಾನವ ಕಳ್ಳಸಾಗಣೆ ಹೆಚ್ಚಬಹುದು.
4. ಅಫ್ಘಾನಿಸ್ಥಾನದಲ್ಲಿ ಮಾನವೀಯತೆಯ ಬಿಕ್ಕಟ್ಟು ಉಂಟಾಗಿದೆ.