Advertisement

ಪ್ರಧಾನಿ ಮೋದಿಯವರ ಎರಡು ದಿನಗಳ ರಾಜ್ಯ ಪ್ರವಾಸದ ವಿವರ ಹೀಗಿದೆ

12:54 AM Jun 20, 2022 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ರಾಜ್ಯ ಪ್ರವಾಸ ಸೋಮವಾರ ಆರಂಭವಾಗಲಿದೆ. ಭೇಟಿಯ ವೇಳೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದ್ದು, ರಾಜ್ಯದಲ್ಲಿ “ಅಭಿವೃದ್ಧಿ ಪಥ’ಕ್ಕೆ ಮತ್ತಷ್ಟು ವೇಗ ದೊರೆಯಲಿದೆ.

Advertisement

ಸುಮಾರು ಎರಡು ವರ್ಷಗಳ ಅನಂತರ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ಎರಡು ದಿನಗಳ ಅವಧಿಯಲ್ಲಿ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ ದ್ದಾರೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇದೆ, ಬಿಬಿಎಂಪಿ ಚುನಾ ವಣೆ ಹೊಸ್ತಿಲಲ್ಲಿ ಇರುವುದರಿಂದ ರಾಜ ಕೀಯವಾಗಿಯೂ ಪ್ರಧಾನಿಯವರ ಈ ಭೇಟಿ ಮಹತ್ವದ್ದಾಗಿದೆ.

ಹಳೇ ಮೈಸೂರು ಭಾಗದಲ್ಲಿ ಬಲ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿಕೊಳ್ಳುತ್ತಿರುವ ಬಿಜೆಪಿಗೆ ಮೋದಿ ಭೇಟಿಯಿಂದ ಪ್ರಯೋಜನವಾಗುವ ಸಾಧ್ಯತೆ ಇದೆ.

ವಿಧಾನಸಭೆ ಚುನಾವಣೆಗೆ ಸಿದ್ಧತೆ
ಪಂಚರಾಜ್ಯಗಳ ಚುನಾವಣೆಯ ಅನಂತರ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಮರಳಿ ಪಡೆಯಲು ಈಗಿ ನಿಂದಲೇ ವೇದಿಕೆ ಸಿದ್ಧಪಡಿಸುತ್ತಿದ್ದು, ಅದರ ಮೊದಲ ಭಾಗವಾಗಿ ಪ್ರಧಾನಿ ಮೋದಿ ರಾಜ್ಯ ಭೇಟಿ, ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಧಾನಸಭೆ ಚುನಾವಣೆಗೆ ಮುನ್ನ ಬಿಬಿಎಂಪಿ ಹಾಗೂ ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳ ಚುನಾ ವಣೆ ನಡೆಯುವ ಸಾಧ್ಯತೆ ಇದ್ದು, ರಾಜ್ಯಕ್ಕೆ ಪ್ರಧಾನಿಯವರ ಆಗಮನ ಚುನಾವಣೆಗಳಿಗೆ ಬಿಜೆಪಿ ಸಿದ್ಧವಾಗು ತ್ತಿರುವುದನ್ನು ಸೂಚಿಸುತ್ತಿದೆ.

Advertisement

ಕೇಂದ್ರ ಸರಕಾರ 8 ವರ್ಷಗಳಲ್ಲಿ ಬೆಂಗಳೂರು ಮತ್ತು ರಾಜ್ಯಕ್ಕೆ ನೀಡಿ ರುವ ಯೋಜನೆಗಳನ್ನು ಜನರಿಗೆ ಮನ ವರಿಕೆ ಮಾಡಿಕೊಡುವುದಕ್ಕಾಗಿ ಪ್ರಧಾನಿ ಯವರ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎನ್ನಲಾಗುತ್ತಿದೆ.

ಬಿಬಿಎಂಪಿಗೆ ಬೂಸ್ಟ್‌
ಬಿಬಿಎಂಪಿಯಲ್ಲಿ ಒಂದೂವರೆ ವರ್ಷದಿಂದ ಜನಪ್ರತಿನಿಧಿಗಳಿಲ್ಲದೆ ಜನರು ಬೇಸತ್ತಿದ್ದಾರೆ. ಸರಕಾರ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣ ಆಯೋಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಸುಪ್ರೀಂ ಕೋರ್ಟ್‌ ಶೀಘ್ರದಲ್ಲೇ ಚುನಾವಣೆ ನಡೆಸಲು ಸೂಚಿಸಿದೆ.

ಅದಕ್ಕೆ ಪೂರಕವಾಗಿ ನಗರದಲ್ಲಿ ಮೋದಿಯವರಿಂದ ಹಲವಾರು ಯೋಜನೆಗಳಿಗೆ ಚಾಲನೆ ಕೊಡಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಹಾನಗರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ.

ರಸ್ತೆಗಳಿಗೆ ಡಾಮರೀಕರಣ
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಪ್ರಧಾನಿ ಭೇಟಿ ನೀಡುವ ಸ್ಥಳಗಳು ಮತ್ತು ಅವುಗಳನ್ನು ಕೂಡುವ ರಸ್ತೆಗಳ ಡಾಮರೀಕರಣ, ಸುಣ್ಣಬಣ್ಣ, ಸ್ವತ್ಛತೆ ಕೈಗೊಂಡಿದೆ. ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಮುಖ್ಯಮಂತ್ರಿಯಿಂದಲೇ ಪರಿಶೀಲನೆ
ಪ್ರಧಾನಿಯವರ ಭೇಟಿ ಹಿನ್ನೆಲೆಯಲ್ಲಿ ಸರಕಾರ ಸಿದ್ಧತೆಯಲ್ಲಿ ಮುಳುಗಿದೆ. ಬೆಂಗಳೂರು ಉಸ್ತುವಾರಿಯೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ವಾರ ಮುಂಚಿತವಾಗಿಯೇ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ. ವಿವಿಧ ಸಚಿವರು ತಮ್ಮ ಖಾತೆಗೆ ಸಂಬಂಧಪಟ್ಟ ಕೆಲಸಗಳ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ
ಪ್ರಧಾನಿ ಕಾರ್ಯಕ್ರಮಗಳು
– 315 ಕೋ.ರೂ. ವೆಚ್ಚದಲ್ಲಿ ತಲೆಯೆತ್ತಿದ ದೇಶದ ಮೊದಲ ಹವಾನಿಯಂತ್ರಿತ ನಿಲ್ದಾಣ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಉದ್ಘಾಟನೆ.
– 1,280 ಕೋ.ರೂ. ಮೊತ್ತದಲ್ಲಿ ಸಂಪೂರ್ಣ ವಿದ್ಯುದೀಕರಣಗೊಂಡ 740 ಕಿ.ಮೀ. ಉದ್ದದ ಕೊಂಕಣ ರೈಲ್ವೇ ಮಾರ್ಗ ಲೋಕಾರ್ಪಣೆ.
– ಎರಡು ರೈಲ್ವೇ ಜೋಡಿ ಮಾರ್ಗಗಳ ಲೋಕಾರ್ಪಣೆ, ಬೆಂಗಳೂರು ಕಂಟೋ ನ್ಮೆಂಟ್‌ ರೈಲು ನಿಲ್ದಾಣ ನವೀಕರಣ ಯೋಜನೆಗೆ ಚಾಲನೆ.
-2,280 ಕೋ.ರೂ. ವೆಚ್ಚದ ಎರಡು ವರ್ತುಲ ರಸ್ತೆಗಳಿಗೆ ಶಂಕುಸ್ಥಾಪನೆ.
– ಐಐಎಸ್‌ಸಿಯಲ್ಲಿ ಮೆದುಳು ಸಂಶೋಧನ ಕೇಂದ್ರದ ಉದ್ಘಾಟನೆ ಮತ್ತು ಬಾಗಿc ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ.
– 4,600 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ವಿಶ್ವವಿದ್ಯಾಲಯ ಉದ್ಘಾಟನೆ, 150 ಟೆಕ್ನಾಲಜಿ ಹಬ್‌ಗಳ ಲೋಕಾರ್ಪಣೆ
– 15,700 ಕೋ.ರೂ. ಮೊತ್ತದ 148 ಕಿ.ಮೀ. ಉದ್ದದ ಬೆಂಗಳೂರು ಉಪ ನಗರ ರೈಲು ಯೋಜನೆಗೆ ಶಂಕುಸ್ಥಾಪನೆ ಮತ್ತು ಸಾರ್ವಜನಿಕ ಸಭೆ.

ಇಂದು ಪ್ರಧಾನಿ ಕಾರ್ಯಕ್ರಮ
11.55ಕ್ಕೆ ಯಲಹಂಕ ಐಎಎಫ್ ನೆಲೆಗೆ ಆಗಮನ
12.25ಕ್ಕೆ ಯಲಹಂಕದಿಂದ ಐಐಎಸ್‌ಸಿಗೆ ಪಯಣ
12.30ಕ್ಕೆ ಐಐಎಸ್‌ಸಿಗೆ ಆಗಮನ
12.55ಕ್ಕೆ ಐಐಎಸ್‌ಸಿಯಿಂದ ನಿರ್ಗಮನ
ಮಧ್ಯಾಹ್ನ 1.05ಕ್ಕೆ ಕೊಮ್ಮಘಟ್ಟ ಹೆಲಿಪ್ಯಾಡ್‌ಗೆ ಆಗಮನ
1.30ಕ್ಕೆ ಡಾ| ಬಿ.ಆರ್‌. ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ಗೆ ಆಗಮನ
1.45- 2.25ರ ವರೆಗೆ ವೇದಿಕೆ ಕಾರ್ಯಕ್ರಮ
ಅಪರಾಹ್ನ 2.30ಕ್ಕೆ ಕೊಮ್ಮಘಟ್ಟದ ಕಡೆಗೆ ಪಯಣ
2.45- 4ರ ವರೆಗೆ ಸಾರ್ವಜನಿಕ ಸಭೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
4.30ಕ್ಕೆ ಕೊಮ್ಮಘಟ್ಟದಿಂದ ಮೈಸೂರು ಕಡೆಗೆ ಪಯಣ
5.20ಕ್ಕೆ ಮೈಸೂರು ಹೆಲಿಪ್ಯಾಡ್‌ಗೆ ಆಗಮನ

ನಾಳೆಯ ಕಾರ್ಯಕ್ರಮ
ಬೆ. 6.30 ಯೋಗ ದಿನ ಕಾರ್ಯಕ್ರಮದಲ್ಲಿ ಭಾಗಿ
ಬೆ. 8.10 ವಸ್ತು ಪ್ರದರ್ಶನ ಸ್ಥಳಕ್ಕೆ ಭೇಟಿ
ಬೆ. 9.20 ಅರಮನೆ ಆವರಣದಿಂದ ನಿರ್ಗಮನ
ಬೆ. 9.45 ಮೈಸೂರಿನಿಂದ ಹೊಸದಿಲ್ಲಿಗೆ ಪ್ರಯಾಣ

ಇಂದು ಫ‌ಲಾನುಭವಿಗಳ ಜತೆ ಪ್ರಧಾನಿ ಸಂವಾದ
ಮೈಸೂರು: ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಯೋಜನೆಗಳ ಫ‌ಲಾನುಭವಿಗಳಲ್ಲಿ ಆಯ್ದ 20 ಜನರೊಂದಿಗೆ ಪ್ರಧಾನಿ ಮೋದಿ ಜೂ. 20ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಸಂವಾದ ನಡೆಸಲಿದ್ದಾರೆ. ಪ್ರಧಾನಿ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲು ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳಿಂದ 20 ಜನರನ್ನು ಆಯ್ಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next