ಮೈಸೂರು: ನಗರ ಪಾಲಿಕೆ ಪೌರಕಾರ್ಮಿಕರ ಪಾದಪೂಜೆ ಹಾಗೂ ಚಾಮುಂಡಿ ಬೆಟ್ಟ ದಲ್ಲಿ ಈಡುಗಾಯಿ ಒಡೆಯುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಿಸಲಾಯಿತು.
ಬಿಜೆಪಿ ನಗರ ಘಟಕದ ವತಿಯಿಂದ ಕುರುಬಾರಹಳ್ಳಿಯಲ್ಲಿ ಭಾನುವಾರ ಆಯೋ ಜಿ ಸಿದ್ದ ಪೌರಕಾರ್ಮಿಕರಿಗೆ ಗೌರವ ವಂದನೆ ಸಮಾರಂಭದಲ್ಲಿ ಸಂಸದ ಪ್ರತಾಪಸಿಂಹ, ಶಾಸಕ ಶ್ರೀವತ್ಸ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ ಪಾದಪೂಜೆ ಮಾಡಿದರು
.ನೀರು ಹಾಕಿ ಪಾದ ತೊಳೆದ ಜನಪ್ರತಿನಿಧಿಗಳು ತದನಂತರ ಬಟ್ಟೆಯಿಂದ ಒರೆಸಿದರು. ನಂತರ ಪೂಜೆ ಮಾಡಿದರು. ಬಳಿಕ ಹಾರ, ಶಾಲು, ಮೈಸೂರು ಪೇಟ ತೊಡಿಸಿ ಗೌರವಿಸಿದರು. ಈ ವೇಳೆ ಪೌರಕಾರ್ಮಿಕ ಬಂಧುಗಳಿಗೆ ಜೈಕಾರ ಕೂಗಲಾಯಿತು.
ಪ್ರೇರಣೆ: ಸಂಸದ ಪ್ರತಾಪಸಿಂಹ ಮಾತನಾಡಿ, ಮೈಸೂರು ನಗರವನ್ನು ಸ್ವತ್ಛ ಮಾಡುವ ಪೌರಕಾಮಿರ್ಕರ ಪಾದಪೂಜೆ ಮಾಡುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದೇವೆ. ಇದಕ್ಕೆ ಮೋದಿಯವರೇ ಪ್ರೇರಣೆ ಎಂದರು. ತೋರಿಕೆಗಾಗಿ ಪೌರಕಾರ್ಮಿಕರ ಪಾದ ಪೂಜೆ ಮಾಡಿಲ್ಲ. 2015 ಮತ್ತು 2016ರ ಸತತ 2 ವರ್ಷ ಮೈಸೂರು ದೇಶದ ಸ್ವತ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಲು ಪೌರಕಾರ್ಮಿಕರು ಕಾರಣರಾಗಿದ್ದಾರೆ. ಇವರಿಂದ ಮೈಸೂರಿಗೆ ಒಳ್ಳೆಯ ಹೆಸರು ಬಂದಿದೆ ಎಂದು ಹೇಳಿದರು.
ಚಾಮುಂಡಿಬೆಟ್ಟದಲ್ಲಿ ಪೂಜೆ: ಈ ಮುನ್ನ ಚಾಮುಂಡಿಬೆಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಯುಷ್ಯ ವೃದ್ಧಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಮೋದಿ ಅವರ ವಿವಿಧ ಭಾವಚಿತ್ರ ಪ್ರದರ್ಶಿಸಿದರು. ಈ ವೇಳೆ ಶಾಸಕ ಟಿ.ಎಸ್.ಶ್ರೀವತ್ಸ ನೇತೃ ತ್ವ ದಲ್ಲಿ ಈಡುಕಾಯಿ ಒಡೆಯಲಾ ಯಿತು. ರಕ್ತದಾನ ಶಿಬಿರ: ಮೈಸೂರು ಜಿಲ್ಲಾ ವೀರ ಮಡಿವಾಳರ ಜಾಗೃತಿ ಯುವ ಬಳಗ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. 50ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ಸಂಸದ ಪ್ರತಾಪಸಿಂಹ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಡಿವೇಲು, ಪಾಲಿಕೆ ಸದಸ್ಯ ಬಿ.ವಿ.ಮಂಜು ನಾಥ್, ಮುಖಂಡ ಗಿರಿಧರ್ ಮತ್ತಿತರರು ಉಪಸ್ಥಿತರಿದ್ದರು.