ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ 73ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಬಿಜೆಪಿ, ಹಲವು ಎನ್‌ಜಿಒಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಿವೆ. ಕೇಂದ್ರ ಆರೋಗ್ಯ ಸಚಿವಾಲಯ ಸೆ.17ರಿಂದ ಅ.2ರ ವರೆಗೆ ಆಯುಷ್ಮಾನ್ ಭವ ಅಭಿಯಾನ ಆರಂಭಿಸಲಿದೆ.
Advertisement
ಏನಿದು ಆಯುಷ್ಮಾನ್ ಭವ?ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಆಯುಷ್ಮಾನ್ ಭಾರತ ಯೋಜನೆಯ ವ್ಯಾಪ್ತಿಯಲ್ಲಿ ಇರುವ ಆರೋಗ್ಯ ಯೋಜನೆಗಳ ಬಗ್ಗೆ ದೇಶವ್ಯಾಪಿ ಮಾಹಿತಿ ನೀಡುವ ಅಭಿಯಾನವಿದು. ಅದರಲ್ಲಿ ಅರ್ಹರಿಗೆ ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಬಗ್ಗೆ ಸೆ.17ರಿಂದ ಅ.2ರ ವರೆಗೆ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಆರೋಗ್ಯ ಕೇಂದ್ರಗಳು, ಸಾಮುದಾಯಿಕ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ಮಾನ್ ಮೇಳಗಳು, ಪ್ರತೀ ಹಳ್ಳಿಗಳಲ್ಲಿ ಆಯುಷ್ಮಾನ್ ಸಭಾಗಳು ನಡೆಯಲಿವೆ. ಇದಲ್ಲದೆ, ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತದೆ.
ಕೇಂದ್ರದ ವಿವಿಧ ಸಚಿವಾಲಯಗಳು ವಿಶೇಷ ಚಟುವಟಿಕೆಗಳನ್ನು ನಡೆಸಲಿವೆ. ಬಿಜೆಪಿ ಕೂಡ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಮೋದಿ ಜನ್ಮದಿನದ ಅಂಗವಾಗಿಯೇ ಸೆ.17ರಿಂದ ಅ.2ರವರೆಗೆ ಸೇವಾ ಕಾರ್ಯಕ್ರಮಗಳು ನಡೆಯಲಿವೆ. ಇವನ್ನು ಸೇವಾ ಪಖ್ವಾಡ ಎಂದೇ ಕರೆಯಲಾಗುತ್ತದೆ. ಇಲ್ಲಿ ಸೇವಾ ಚಟುವಟಿಕೆ ಜೊತೆಗೆ ಕೇಂದ್ರ ಸರ್ಕಾರಿ ಯೋಜನೆಗಳ ಪ್ರಚಾರವನ್ನೂ ನಡೆಸಲಾಗುತ್ತದೆ. ರಕ್ತದಾನ ಶಿಬಿರಗಳು, ಸ್ವತ್ಛತಾ ಅಭಿಯಾನ, ಗಿಡ ನೆಡುವುದನ್ನು ಮಾಡಲಾಗುತ್ತದೆ. “ಸೂರತ್ ಎನ್‌ಜಿಒದಿಂದ ಎದೆಹಾಲು ದಾನ”
ಗುಜರಾತ್‌ನ ಸೂರತ್‌ನಲ್ಲಿರುವ ಅಮೃತಮ್ ಎಂಬ ಎನ್‌ಜಿಒ ಭಾನುವಾರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಆಯ್ದ ಮಹಿಳೆಯರಿಂದ ಎದೆಹಾಲು ದಾನ ಕಾರ್ಯಕ್ರಮ ನಡೆಸಲಿದೆ. ಸೂರತ್‌ನ ಅಗ್ರಸೇನ ಭವನದಲ್ಲಿ ಮಹಿಳೆಯರು ಹಾಲನ್ನು ನೀಡಲಿದ್ದಾರೆ. ಇದನ್ನು ಸೆ¾„ಮರ್ ಎಂಬ ಆಸ್ಪತ್ರೆಗೆ ಕಳಿಸಿ ಕೊಡಲಾಗುತ್ತದೆ.
Related Articles
ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ 30 ಸಾವಿರ ವಿದ್ಯಾರ್ಥಿನಿಯರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯುವ ಬಗ್ಗೆ ಬಿಜೆಪಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಿದೆ.
Advertisement