Advertisement

ಜನಸಂಘ ಕಾಲದ ಉಡುಪಿ ನಗರಸಭೆಯನ್ನು ಕೊಂಡಾಡಿದ ಪ್ರಧಾನಿ ಮೋದಿ

04:50 PM Sep 20, 2022 | Team Udayavani |

ಉಡುಪಿ: 1960 ರ ದಶಕದಲ್ಲಿ ಕರ್ನಾಟಕದ  ಉಡುಪಿ ಪುರಸಭೆಯು ಜನಸಂಘ ಆಡಳಿತದಲ್ಲಿ ಗೆದ್ದು ಜನ ಮೆಚ್ಚುಗೆಯನ್ನು ಪಡೆದಿತ್ತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಇದನ್ನೂ ಓದಿ: ಪ್ರಾಜೆಕ್ಟ್ ಚೀತಾ… ಹುಲಿ ಮುಖದ ವಿಮಾನದ ಅಸಲಿ ಹಿನ್ನೆಲೆಯೇನು?

ಗುಜರಾತಿನಲ್ಲಿ ನಡೆಯುತ್ತಿರುವ ಮೇಯರ್ ಮತ್ತು ಉಪಮೇಯರ್ ಸಮ್ಮೇಳನದಲ್ಲಿ ಮಾತನಾಡಿದ ಅವರು, 1960ರ ದಶಕದಲ್ಲಿ ಉಡುಪಿಯ ಜನಸಂಘ ಆಡಳಿತದ ಪುರಸಭೆ ದೇಶದಲ್ಲೇ ನಿರಂತರವಾಗಿ ಪ್ರಥಮ ಸ್ಥಾನ ಪಡೆದು ಜನ ಮೆಚ್ಚುಗೆಯನ್ನು ಗಳಿಸಿತ್ತು. ಅದು ಪಕ್ಷದ ಮೇಲೆ ನಗರದ ಜನ ಇಟ್ಟಿರುವ ವಿಶ್ವಾಸ ಎಂದು ಬಣ್ಣಿಸಿದರು.

ಈ ಸಭೆಯಲ್ಲಿ ರಾಷ್ಟ್ರಾದ್ಯಂತ ಭಾರತೀಯ ಜನತಾ ಪಾರ್ಟಿ ನೇತೃತ್ವದ ಮೇಯರ್ ಉಪಮೇಯರ್ ಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next