Advertisement

ಪ್ರಧಾನಿ Modi ಸಂಚಾರ; ಬಂದ್ ಆಗಿದ್ದ ಮೈಸೂರಿನ ಪ್ರಮುಖ ರಸ್ತೆಗಳು

05:05 PM Apr 09, 2023 | Team Udayavani |

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ನಗರ ಸಂಚಾರದಿಂದ ನಗರದ ಹೃದಯ ಭಾಗ ಸೇರಿದಂತೆ ಪ್ರಮುಖ ರಸ್ತೆಗಳು ಬಂದ್ ಆಗಿದ್ದವು. ಸತತ ಆರು ಗಂಟೆಗಳ ಕಾಲ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಕೂಡ ಬಂದ್ ಆಗಿದ್ದು, ವಾಹನ ಸವಾರರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವ ಮೂಲಕ ಪರದಾಡುವಂತಾಯಿತು. ಭಾನುವಾರವಾಗಿದ್ದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿನತ್ತ ಆಗಮಿಸಿದ್ದು, ಬದಲಿ ಮಾರ್ಗದಲ್ಲಿ ಸಂಚರಿಸಲು ಪರದಾಡುವಂತಾಯಿತು.

Advertisement

ಮುಂಜಾನೆ 6 ಗಂಟೆಯಿಂದ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ ಪೊಲಿಸರು, ಹುಣಸೂರು ಮಾರ್ಗವಾಗಿ ಮೈಸೂರು ನಗರದ ಕಡೆ ಬರುವ ವಾಹನಗಳಿಗೆ ನಿರ್ಬಂಧ ವಿಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸುವ ವ್ಯವಸ್ಥೆ ಮಾಡಿದ್ದರು.ವೇದಿಕೆ ಕಾರ್ಯಕ್ರಮ ವಿದ್ದ ಮುಕ್ತ ವಿವಿಯ ಘಟಿಕೋತ್ಸವ ಭವನ ಸಂಪರ್ಕಿಸುವ ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಇತ್ತ ಪ್ರಧಾನಿ ಮೋದಿ ಅವರು ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ನಗರದ ಒವೆಲ್ ಮೈದಾನದಲ್ಲಿ ಸುತ್ತಲಿನ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಮೆಟ್ರೋಪೋಲ್ ವೃತ್ತ, ಡಿಸಿ ಕಚೇರಿ, ಕೌಟಿಲ್ಯ ವೃತ್ತ ಮುಡಾ ಜಂಕ್ಷನ್, ರಾಮ ಸ್ವಾಮಿ ವೃತ್ತ ವ್ಯಾಪ್ತಿಯಲ್ಲಿನ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಸಾರ್ವಜನಿಕ ವೀಕ್ಷಣೆಗೆ ಅವಕಾಶ

ಹೆಲಿಕಾಪ್ಟರ್ ಮೂಲಕ ಒವೆಲ್ ಮೈದಾನಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ನೋಡಲು ಜಿಲ್ಲಾಧಿಕಾರಿ ಕಚೇರಿ ಬಳಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ಬಳಿ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳು ನೆರೆದಿದ್ದದ್ದು ಕಂಡು ಬಂತು. ಅಲ್ಲದೇ ಘಟಿಕೋತ್ಸವ ಭವನದ ಎದುರಿನ ಹುಣಸೂರು ರಸ್ತೆ ಬಳಿಕ ಕೂಡ ಜನ ನೆರೆದಿದ್ದು, ಮೋದಿ ಅವರು ಕಾರಿನಲ್ಲಿ ಸಂಚರಿಸಿದ್ದನ್ನು ಕಣ್ತುಂಬಿ ಕೊಂಡು ಸಂತಸ ಪಟ್ಟರು.

Advertisement

ನೀತಿ ಸಂಹಿತೆ ಎಫೆಕ್ಟ್
ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ವೇಳೆ ಬಿಜೆಪಿಯ ನಾಯಕರು ಮತ್ತು ಮುಖಂಡರು ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಶನಿವಾರ ರಾತ್ರಿ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಆಗಮಿಸಿದ ಪ್ರದಾನಿ ಅವರನ್ನು ಸ್ವಾಗತಿಸಲು ಮೇಯರ್ ಶಿವಕುಮಾರ್ ಅನುಮತಿ ಕೇಳಿದರೂ ಜಿಲ್ಲಾಡಳಿತ ನೀತಿ ಸಂಹಿತೆ ಹಿನ್ನಲೆಯಲ್ಲಿ ನಿರಾಕರಿಸಿದೆ.

ಪ್ರಧಾನಿ ಆಗಮನದ ಹಿನ್ನಲೆಯಲ್ಲಿ ಎಲ್ಲಿಯೂ ಬಿಜೆಪಿ ಪಕ್ಷದ ಬಾವುಟಗಳು ಹಾರಾಡಲಿಲ್ಲ.ನಗರದ ರಸ್ತೆಗಳೇಲ್ಲಾ ಫ್ಲೆಕ್ಸ್ ಮತ್ತು ಕಟೌಟ್ ಮುಕ್ತವಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next