ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯ ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ 4 ನೇ ಪಂದ್ಯವು ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ.
ಮಾರ್ಚ್ 9 ರಂದು ಆರಂಭಗೊಳ್ಳಲಿರುವ ಈ ಟೆಸ್ಟ್ ಪಂದ್ಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಲಿದ್ದಾರೆ.
ಮೂಲಗಳ ಪ್ರಕಾರ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಅಹಮದಾಬಾದ್ ಕ್ರೀಡಾಂಗಣಕ್ಕೆ ತಮ್ಮ ಹೆಸರಿಟ್ಟ ಬಳಿಕ ಪ್ರದಾನಿ ಮೋದಿ ಅವರು ಮೊದಲ ಬಾರಿಗೆ ಅಲ್ಲಿ ಪಂದ್ಯವೊಂದನ್ನು ವೀಕ್ಷಿಸಲಿದ್ದಾರೆ.
ಅದಲ್ಲದೇ ಈ ಪಂದ್ಯದ ವೀಕ್ಷಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಸ್ಟ್ರೇಲಿಯ ಪ್ರಧಾನಿ ಆಂಟೋನಿ ಅಲ್ಬನೀಸ್ ಸಾಥ್ ನೀಡಲಿದ್ದಾರೆ. ಈ ಇಬ್ಬರೂ ನಾಯಕರು ಮಾರ್ಚ್ 9 ರಂದು ನಡೆಯಲಿರುವ ಮೊದಲ ದಿನದ ಟೆಸ್ಟ್ ಪಂದ್ಯವನ್ನು ಜೊತೆಯಲ್ಲೇ ವೀಕ್ಷಿಸಲಿದ್ದಾರೆ.
ಈ ಪಂದ್ಯ ಆರಂಭಕ್ಕೆ ಇನ್ನೂ ಒಂದು ವಾರವಿದ್ದರೂ ರಕ್ಷಣಾ ಪಡೆಗಳು ಕ್ರೀಡಾಂಗಣದಲ್ಲಿ ಈಗಿಂದಲೇ ತೀವ್ರ ತಪಾಸಣೆ ನಡೆಸುತ್ತಿದೆ.
ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹೀನಾಯವಾಗಿ ಸೋಲುಣಿಸಿದ ಬಳಿಕ ಆಸ್ಟ್ರೇಲಿಯ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಆದರೆ ಭಾರತಕ್ಕೆ ಅಹಮದಾಬಾದ್ ಪಂದ್ಯ ಮಾಡು ಇಲ್ಲವೇ ಮಡಿ ಅನ್ನುವಂತಿದೆ.
ಇದನ್ನೂ ಓದಿ:
ಕೈಯಲ್ಲಿ ನಿತ್ಯಾನಂದನ ಟ್ಯಾಟೋ, ಮನದಲ್ಲಿ ನಿತ್ಯನ ಧ್ಯಾನ: ಯಾರು ಈಕೆ ವಿಜಯಪ್ರಿಯಾ?