Advertisement

Narendra Modi: 3.5 ಗಂಟೆ ನಿದ್ರೆ, ಸಂಜೆ 6 ಗಂಟೆ ಬಳಿಕ ಊಟ ಮಾಡಲ್ಲ ಪ್ರಧಾನಿ ಮೋದಿ!

11:58 PM Feb 09, 2024 | Team Udayavani |

ಹೊಸದಿಲ್ಲಿ: “ಪ್ರಧಾನಿ ನರೇಂದ್ರ ಮೋದಿ ಅವರು ನಿತ್ಯವೂ ಬರೀ 3.5 ಗಂಟೆ ಮಾತ್ರವೇ ನಿದ್ರಿಸುತ್ತಾರೆ, ಸಂಜೆ 6 ಗಂಟೆ ಬಳಿಕ ಊಟ ಮಾಡುವುದಿಲ್ಲ” ಹೀಗೆಂದು ಬಿಜೆಪಿ ಸಂಸದ ಎಲ್‌ ಮುರುಗನ್‌ ಹೇಳಿದ್ದಾರೆ.

Advertisement

ಶುಕ್ರವಾರ ಸಂಸತ್ತಿನ 8 ಮಂದಿ ಸದಸ್ಯರಿಗೆ ಪ್ರಧಾನಿ ಮೋದಿ ಸರ್ಪ್ರೈಸ್‌ ನೀಡಿದ್ದಾರೆ. ಬಿಜೆಪಿ ಸಂಸದರಾದ ಹೀನಾ ಗವೈತ್‌, ಎಸ್‌.ಫಾಂಗ್ನಾನ್‌ ಕೋನ್ಯಾಕ್‌, ಜಮ್ಯಾಂಗ್‌ ತ್ಸೇರಿಂಗ್‌ ನಮ್ಗಾಲ್‌, ಎಲ್‌ ಮುರುಗನ್‌ ಹಾಗೂ ಟಿಡಿಪಿ ಸಂಸದ ರಾಮ ಮೋಹನ್‌ ರಾಯ್ಡು, ಬಿಎಸ್‌ಪಿ ಸಂಸದ ರಿತೇಶ್‌ ಪಾಂಡೆ, ಬಿಜೆಡಿ ಸಂಸದರಾದ ಸಸ್ಮಿತ್‌ ಪಾತ್ರಾ ಅವರಿಗೆ ಪ್ರಧಾನಿ ಕರೆ ಮಾಡಿ, ನಾನು ನಿಮ್ಮನ್ನು ಭೇಟಿಯಾಗಬೇಕೆಂದಿದ್ದಾರೆ. ಕುತೂಹಲದಲ್ಲೇ ಬಂದ ಸಂಸದರನ್ನು ನಡೆಯಿರಿ ನಿಮಗೆಲ್ಲ ಶಿಕ್ಷೆಯೊಂದನ್ನು ನೀಡಬೇಕಿದೆ ಎಂದು ಖುದ್ದು ಪ್ರಧಾನಿ ಅವರೇ ಸಂಸತ್ತಿನ ಕ್ಯಾಂಟೀನ್‌ಗೆ ಕರೆದೊಯ್ದಿದ್ದಾರೆ.

ಬಳಿಕ ಎಲ್ಲರೊಂದಿಗೂ ಮಾತನಾಡುತ್ತಾ ತಮಗೆ ಕಿಚಡಿ ಇಷ್ಟ, ವಿದೇಶ ಪ್ರವಾಸಗಳು, ಅವರ ದಿನಚರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ 3.5ಗಂಟೆ ನಿದ್ರೆ, 6ರ ಬಳಿಕ ಊಟ ಮಾಡುವುದಿಲ್ಲ ಎಂಬುದನ್ನೂ ಹೇಳಿದ್ದು, ಮೋದಿ ಅವರ ಸಾಕಷ್ಟು ವಿಚಾರಗಳು ತಮ್ಮನ್ನು ಪ್ರಭಾವಿತಗೊಳಿಸಿದವು ಎಂದು ಸಂಸದರು ಹರ್ಷ ವ್ಯಕ್ತ ಪಡಿಸಿದ್ದಾರೆ. ಪ್ರಧಾನಿ ಅವರು ಈ ಫೋಟೋಗಳನ್ನು ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next