Advertisement
ಬ್ರಿಕ್ಸ್ 16ನೇ ಶೃಂಗಸಭೆ ಹಿನ್ನೆಲೆಯಲ್ಲಿ ರಷ್ಯಾದ ಕಜಾನ್‌ಗೆ ಭೇಟಿ ನೀಡಿರುವ ಅವರು, ಪುತಿನ್ ಜತೆಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಮಾತನಾಡಿ “ಕಳೆದ 3 ತಿಂಗಳಲ್ಲಿ 2ನೇ ಬಾರಿ ರಷ್ಯಾಗೆ ಭೇಟಿ ನೀಡಿದ್ದೇನೆ. ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಬೇಕೆಂಬ ನಮ್ಮ ನಿಲುವನ್ನು ಮತ್ತೆ ಪ್ರತಿಪಾದಿಸುತ್ತೇನೆ’ ಎಂದರು. ರಷ್ಯಾ-ಉಕ್ರೇನ್ ನಡುವೆ ಶಾಂತಿ, ಸ್ಥಿರತೆ ತರಲು ಅಗತ್ಯವಿರುವ ಸಹಕಾರ ನೀಡಲು ನಾವು ಬದ್ಧ. ನಮ್ಮ ಪ್ರಯತ್ನ ಮಾನವೀಯತೆಯ ಪರವಾಗಿ ಇರಲಿದೆ’ ಎಂದಿದ್ದಾರೆ. ಇದೇ ವೇಳೆ ರಷ್ಯಾಗೆ ಆಗಮಿಸಿದ್ದಕ್ಕೆ ಮೋದಿಗೆ ಪುಟಿನ್ ಧನ್ಯವಾದ ಹೇಳಿದ್ದಾರೆ. ಕಜಾನ್‌ನಲ್ಲಿ ಭಾರತದ ರಾಯಭಾರಿ ಕಚೇರಿ ತೆರೆಯುವ ಪ್ರಸ್ತಾವ ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಡಿ.12ರಂದು ದಿಲ್ಲಿಯಲ್ಲಿ ಉಭಯ ಸರಕಾರಗಳ ಸಹಕಾರ ವೃದ್ಧಿ ಸಭೆ ಯು 2 ರಾಷ್ಟ್ರಕ್ಕೆ ಸಹಕಾರಿ ಎಂದು ಪುತಿನ್ ಹೇಳಿದ್ದಾರೆ.
Related Articles
Advertisement
ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ 16 ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಗಲ್ವಾನ್‌ನಲ್ಲಿ ಪರಿಸ್ಥಿತಿ ತಿಳಿಗೊಳಿಸಲು 2 ರಾಷ್ಟ್ರಗಳು ಒಪ್ಪಿಕೊಂಡು, ಜಂಟಿ ಗಸ್ತು ತಿರುಗಲು ಸಮ್ಮತಿ ಸೂಚಿಸಿರು ವಂತೆಯೇ ಈ ಸಭೆ ಮಹತ್ವ ಪಡೆದಿದೆ.
ಇರಾನ್ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಭೇಟಿ
ಪ್ರಧಾನಿ ಮೋದಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜತೆ ಕಜಾನ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಇಸ್ರೇಲ್ ಜತೆಗಿನ ಜಗಳ ತಾರಕಕ್ಕೆ ಏರಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಭಾರತ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಉಭಯ ನಾಯಕರ ಈ ಸಭೆ ನಡೆದಿದೆ.