Advertisement

Panambur ನವಮಂಗಳೂರು ಬಂದರು ಅಭಿವೃದ್ಧಿಗೆ ಪ್ರಧಾನಿ ಮೋದಿ ಚಾಲನೆ

12:19 AM Feb 29, 2024 | Team Udayavani |

ಪಣಂಬೂರು: ದೇಶದ ಬಂದರುಗಳ ಸಮಗ್ರ ಅಭಿವೃದ್ಧಿ ,ಸಾರಿಗೆ ವ್ಯವಸ್ಥೆಯ ಉನ್ನತೀಕರಣಕ್ಕೆ ಪ್ರಧಾನಿ ಮೋದಿ ಸುಮಾರು 17 ಸಾವಿರ ಕೋಟಿ ರೂ.ಯೋಜನೆಗೆ ಚೆನ್ನೈಯ ಟೂಟಿಕೊರಿನ್‌ನ ಚಿದಂಬರನಾರ್‌ ಬಂದರಿನಲ್ಲಿ ಚಾಲನೆ ನೀಡಿದರು. ನವಮಂಗಳೂರು ಬಂದರಿನ ರಸ್ತೆ ಅಭಿವೃದ್ಧಿಗೂ ಪ್ರಧಾನಿ ಈ ಸಂದರ್ಭ ಚಾಲನೆ ನೀಡಿದರು.

Advertisement

ತೈಲ ಸಂಗ್ರಹ ಟ್ಯಾಂಕ್‌ ನಡುವೆ ಟ್ರಕ್‌ ಓಡಾಟಕ್ಕೆ ಸುರಕ್ಷಿತ ರಸ್ತೆಯ ನಿರ್ಮಾಣವಾಗಲಿದ್ದು, 5 .04 ಕೋಟಿ ರೂ. ವೆಚ್ಚದಲ್ಲಿ ತಣ್ಣೀರುಬಾವಿಯಿಂದ ಎಂ.ಕೆ ಅಗ್ರೋ ಟೆಕ್‌ವರೆಗೆ ಕಾಂಕ್ರಿಟ್‌ ರಸ್ತೆ ನಿರ್ಮಾಣವಾಗಲಿದೆ.ಈ ರಸ್ತೆ 14 ಮೀಟರ್‌ ಅಗಲ, 775 ಮೀಟರ್‌ ಉದ್ದವಿರಲಿದೆ.

ಬಂದರಿನಲ್ಲಿ ಎರಡು ಸಂಗ್ರಹ ಕೇಂದ್ರವನ್ನು 23.78 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸರಕಾರಿ, ಖಾಸಗೀ ಸಹಭಾಗಿತ್ವದಲ್ಲಿ 150 ಬೆಡ್‌ ಆಸ್ಪತ್ರೆಯನ್ನು 107 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಆದ್ಯತೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next