ಹೊಸದಿಲ್ಲಿ: ತೆಲಂಗಾಣ ಮುಖ್ಯಮಂತ್ರಿ ಅವರ ಪುತ್ರಿ ಕೆ.ಕವಿತಾ ಅವರು ಶನಿವಾರ ರಾಜ್ಯಕ್ಕೆ ಪ್ರಧಾನಿ ಮೋದಿ ಅವರ ಭೇಟಿಯನ್ನು ಕಟುವಾಗಿ ಟೀಕಿಸಿದ್ದು, ಪ್ರಧಾನಿ ಖಾಲಿ ಕೈಗಳೊಂದಿಗೆ ಆಗಮಿಸಿದ್ದಾರೆ ಎಂದು ಹೇಳಿದ್ದಾರೆ.
ಟಿಆರ್‌ಎಸ್ ಎಂಎಲ್‌ಸಿ ಆಗಿರುವ ಕವಿತಾ ಜಗ್ತಿಯಾಲ್ ಜಿಲ್ಲೆಯ ರಾಯ್ಕಲ್ ನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಶನಿವಾರ, ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಭೇಟಿ ನೀಡಿದ್ದರು.
ಎರಡು ದಿನಗಳ ದಕ್ಷಿಣ ರಾಜ್ಯಗಳ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ರಾಮಗುಂಡಂ ಫರ್ಟಿಲೈಸರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್ (ಆರ್‌ಎಫ್‌ಸಿಎಲ್) ಸ್ಥಾವರ ಮತ್ತು ಭದ್ರಾಚಲಂ ರಸ್ತೆ-ಸತ್ತುಪಲ್ಲಿ ರೈಲು ಮಾರ್ಗ ಸೇರಿದಂತೆ ಸುಮಾರು 10,000 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದರು.
ಇದನ್ನೂ ಓದಿ:ಲೋಕ ಅದಾಲತ್ ಬಗ್ಗೆ ಕಕ್ಷಿದಾರರಲ್ಲಿ ತಿಳುವಳಿಕೆ ಅಗತ್ಯ: ಸಿವಿಲ್ ನ್ಯಾಯಾಧೀಶ ಕಿರಣ ಕುಮಾರ
“ಇಂದು ಪ್ರಧಾನಿ ಮೋದಿ ತೆಲಂಗಾಣಕ್ಕೆ ಭೇಟಿ ನೀಡಿದ್ದರು, ಅವರು ರಾಜ್ಯಕ್ಕೆ ಏನನ್ನೂ ತಂದಿಲ್ಲ. ಅವರು ಬರುವಾಗ ಬರಿಗೈಯಲ್ಲಿ ಬಂದಿದ್ದಾರೆ. ಇಲ್ಲಿ ಬಂದು ಕೆಲ ಬೆಲೆ ಇರದ ಹೇಳಿಕೆಗಳನ್ನು ನೀಡುತ್ತಾರೆ. ನಮಗಾಗಿ ಏನನ್ನೂ ಮಾಡುವುದಿಲ್ಲ” ಎಂದು ಕವಿತಾ ಟೀಕಿಸಿದ್ದಾರೆ.