ಕಲಬುರಗಿ: ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನಾಚರಣೆಯಲ್ಲಿ ನಿರೀಕ್ಷೆಗೂ ಮೀರಿ ಜನ ಸೇರಿದ್ದರ ಹಿನ್ನೆಲೆಯಲ್ಲಿ ಬಿಜೆಪಿ ಆಗಿನಿಂದ ಪ್ರತಿ ಸಮಾವೇಶದ ಚಿಂತನೆ ನಡೆಸಿ ಈಗ ಕೊನೆಗೆ ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನಡೆಸಲು ನಿರ್ಧರಿಸಿದೆ.
ಅ.30ರಂದು ವಿಭಾಗೀಯ ಕೇಂದ್ರ ಹೊಂದಿರುವ ಕಲಬುರಗಿಯಲ್ಲಿ ಸಮಾವೇಶ ನಡೆಸಲು ನಿರ್ಧ ರಿಸಲಾಗಿದ್ದು, ಪೂರ್ವಸಿದ್ಧತಾ ಸಭೆಗಳು ನಡೆಯು ತ್ತಿವೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಾರದ ಹಿಂದೆ ಸಭೆಯೊಂದನ್ನು ನಡೆಸಿ ಹೋಗಿದ್ದಾರೆ.
ರವಿವಾರ ಬಿಜೆಪಿ ಸಂಘಟನ ಪ್ರಮುಖರು, ವಿಭಾಗೀಯ ಪ್ರಭಾರಿ ಮತ್ತು ರಾಜ್ಯ ವಕ್ತಾರರಾಗಿರುವ ರಾಜಕುಮಾರ್ ಪಾಟೀಲ್ ಸೇಡಂ ಸಮಾವೇಶ ನಡೆಸಲು ಉದ್ದೇಶಿಸಿರುವ ವಿಮಾನ ನಿಲ್ದಾಣ ರಸ್ತೆ, ಗುಲ್ಬರ್ಗ ವಿವಿ ಹಾಗೂ ಫರಹತಾ ಬಾದ್ ಬಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಐದು ಲಕ್ಷ ಜನ ಸೇರಿಸುವ ಗುರಿ
ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಐದು ಲಕ್ಷ ಜನ ಸೇರಿಸುವ ಗುರಿ ಹೊಂದಲಾಗಿದೆ. ಲಕ್ಷಾಂತರ ಜನ ಸೇರಿಸುವ ಮುಖಾಂತರ ಸಡ್ಡು ಹೊಡೆಯಲು ಮುಂದಾಗಿರುವುದು ಈ ಮೂಲಕ ಸ್ಪಷ್ಟವಾಗುತ್ತಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಒಂದು ವಾರ ಕಲಬುರಗಿಯಲ್ಲೇ ಠಿಕಾಣಿ ಹೂಡಿ ಕಾರ್ಯತಂತ್ರ ರೂಪಿಸಲಿದ್ದಾರೆ ಎನ್ನಲಾಗುತ್ತಿದೆ.
ಸಮಾವೇಶಕ್ಕೆ ಆಗಮಿಸುವಂತೆ ಪ್ರಧಾನಿಯವ ರನ್ನು ರಾಜ್ಯ ನಾಯಕರು ವಿನಂತಿಸಿದ್ದಾರೆ. ಪ್ರಧಾನಿ ಎ.23ರಂದು ಕಲಬುರಗಿಗೆ ಆಗಮಿಸುವ ಕಾರ್ಯ ಕ್ರಮವಿತ್ತು. ಆದರೆ ಕೊನೆ ಗಳಿಗೆಯಲ್ಲಿ ರದ್ದಾಗಿತ್ತು.