Advertisement

ಪ್ರಧಾನಿ ಭಾಷಣಕ್ಕೆ ಅಡ್ಡಿ: ಜಾವಡೇಕರ್‌ ಆಕ್ರೋಶ

06:55 AM Feb 10, 2018 | Team Udayavani |

ತುಮಕೂರು: ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಕಾಗ್ರೆಸಿಗರು ನಡೆದುಕೊಂಡ ರೀತಿ ಪ್ರಜಾಪ್ರಭುತ್ವಕ್ಕೆ ಮತ್ತು ಪ್ರಧಾನಿಯವರಿಗೆ ಮಾಡಿದ ಅಪಮಾನ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ  ಪ್ರಕಾಶ್‌ ಜಾವಡೇಕರ್‌ ಆರೋಪಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ತಿನ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಸತ್ತಿನಲ್ಲಿ ಪ್ರಧಾನಿಗಳ ಭಾಷಣಕ್ಕೆ ಕಾಂಗ್ರೆಸ್‌ ಸದಸ್ಯರು ಅಡ್ಡಿಪಡಿಸಿದ ಘಟನೆ ನಡೆದಿದೆ. ಸ್ವಾತಂತ್ರಾÂ ನಂತರ ಕಾಂಗ್ರೆಸ್‌ ನಡೆದುಕೊಂಡ ರೀತಿಯನ್ನು ಪ್ರಧಾನಿಗಳು ಸಂಸತ್ತಿನಲ್ಲಿ ಸವಿವರವಾಗಿ ವಿವರಿಸಿದ ನಂತರ ಕಾಂಗ್ರೆಸಿಗರ ಬಣ್ಣ ಜನರ ಮುಂದೆ ಬಯಲಾಗಿದ್ದು, ಇದರಿಂದ ಅವರು ಭಯಗೊಂಡಿದ್ದಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಅರಾಜಕತೆ: ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ. ಅರಾಜಕತೆಯ ಬಗ್ಗೆ   ವಿಧಾನಮಂಡಲದಲ್ಲಿ ವಿಪಕ್ಷಗಳು ಮಾಡುವ  ಆಕ್ಷೇಪಗಳಿಗೆ ಉತ್ತರ ನೀಡದ ಪರಿಸ್ಥಿತಿಯಲ್ಲಿ   ಮುಖ್ಯಮಂತ್ರಿಗಳಿದ್ದಾರೆ. ಮಠಗಳು ಮತ್ತು ಅವು ನಡೆಸುವ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ  ಹತೋಟಿ ಪಡೆಯಲು ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತರಲು ಹೋಗಿ ಜನರು ಮತ್ತು ಮಠಾಧೀಶರಿಂದ  ಛೀಮಾರಿಗೊಳಗಾಗಿದ್ದಾರೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಓವೈಸಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಹೇಳುವ ಮೂಲಕ ಗೃಹ ಸಚಿವರು ತಮ್ಮ ಬಾಲಿಶತನವನ್ನು ತೋರಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next