Advertisement

ಪ್ರಧಾನಿ ನನ್ನ ಆರೋಗ್ಯ ವಿಚಾರಿಸಿದರು: ಮಾಜಿ ಪ್ರಧಾನಿ ದೇವೇಗೌಡ

10:28 AM Dec 06, 2022 | Team Udayavani |

ಬೆಂಗಳೂರು: ಜಿ20 ಅಧ್ಯಕ್ಷೀಯತೆ ಹಿನ್ನೆಲೆಯಲ್ಲಿ ನಡೆದ ಸರ್ವಪಕ್ಷ ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ನನ್ನ ಆರೋಗ್ಯ ವಿಚಾರಿಸಿದರು. ಇದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

Advertisement

ಪ್ರಧಾನಿ ಜತೆಗಿನ ಫೋಟೋ ಜತೆಗೆ ಭಾವಪೂರ್ಣ ಪತ್ರದೊಂದಿಗೆ ಟ್ವೀಟ್ ಮಾಡಿರುವ ಅವರು, “ವಸುದೈವ ಕುಟುಂಬಕಂ”ಎಂಬ ದೃಷ್ಟಿಕೋನದಿಂದ ಜಗತ್ತನ್ನು ನೋಡುವಲ್ಲಿ ಈ ಅವಕಾಶ ಮಹತ್ವದ್ದಾಗಿದೆ. ಜಿ20 ಒಕ್ಕೂಟವನ್ನು ಮುನ್ನಡೆಸುವ ಅವಕಾಶ ಲಭಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ಆರ್ಥಿಕತೆ, ತಂತ್ರಜ್ಞಾನ, ವಿಜ್ಞಾನ, ಸಾಮಾಜಿಕತೆ ಹಾಗೂ ಪರಿಸರ ಕ್ಷೇತ್ರವೂ ಸೇರಿದಂತೆ ವಿಶ್ವಕ್ಕೆ ಅಗಾಧವಾದ ಕೊಡುಗೆ ನೀಡುವುದಕ್ಕಾಗಿ ಈ ವೇದಿಕೆ ಭಾರತಕ್ಕೆ ಮಹತ್ವದ್ದಾಗಿದೆ. ಭಾರತ ಒಂದು ಯುವ ರಾಷ್ಟ್ರ. ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ಸೌಹಾರ್ದ ವಾತಾವರಣದಲ್ಲಿ ಈ ವೇದಿಕೆಯ ಅಧ್ಯಕ್ಷೆತಯನ್ನು ವಹಿಸಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಬಾಂಧವ್ಯ ವೃದ್ಧಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಹಾರ, ರಸಗೊಬ್ಬರ, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಜಾಗತಿಕ ಪೂರೈಕೆ ರಾಜಕಾರಣದಿಂದ ಹೊರತಾಗಿರಬೇಕು. ಭೌಗೋಳಿಕ ರಾಜಕಾರಣ ಈ ವಿಚಾರಕ್ಕೆ ಧಕ್ಕೆ ತರಬಾರದು ಎಂದು ಮೋದಿ ಪ್ರತಿಪಾದಿಸಿರುವುದು ಮಾನವೀಯ ಉದ್ದೇಶದಿಂದ ಕೂಡಿದೆ. ರಷ್ಯಾ-ಉಕ್ರೇನ್ ಉದ್ವಿಗ್ನ ಪರಿಸ್ಥಿತಿ ನಿರ್ವಹಣೆ ವಿಚಾರದಲ್ಲೂ ಅವರು ತೆಗೆದುಕೊಂಡ ನಿಲುವನ್ನು ನಾನು ಶ್ಲಾಘಿಸುತ್ತೇನೆ. ಇಂದು ನಡೆದ ಸಭೆ ಮಹತ್ವದ್ದಾಗಿದೆ. ಸಭೆ ಬಳಿಕ ನನ್ನ ಆರೋಗ್ಯ ವಿಚಾರಿಸಿದ ಪ್ರಧಾನಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next