ಉಳ್ಳವರಾಗಿದ್ದಾರೆ ಮಾತ್ರವಲ್ಲದೆ, ಅವರಲ್ಲಿ ಪರೋಪಕಾರಿ ಗುಣವಿದೆ ಎಂದು ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.
ಆಚಾರ್ಯ ಹೇಳಿದರು.
Advertisement
ಅವರು ಇಡ್ಕಿದು ಸೇವಾ ಸಹಕಾರಿ ಸಂಘ ಅಡ್ಯಾಲು ಕರೆ (ಕಬಕ) ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ನೆಹರೂನಗರ ಇದರ ವಿವೇಕಾನಂದ ಔಷಧ ಕೇಂದ್ರದ ಸಹ ಯೋಗದಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘ ಇದರ ಸಾರಥ್ಯದಲ್ಲಿ ಆರಂಭಗೊಂಡ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರವನ್ನು ಜ.12ರಂದು ಸಹಕಾರಿ ಸಂಘದ ಅಡ್ಯಾಲುಕರೆ ಶಾಖಾ ಪಂಚಾಮೃತ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಉಪಕಾರಿಯಾಗಿದೆ. ವಿದ್ಯೆ, ಉದ್ಯೋಗದ ಜೊತೆಗೆ ಆರೋಗ್ಯವೂ ಅತೀ ಅಗತ್ಯ. ಜನರಲ್ಲಿರುವ ತಪ್ಪು ಭಾವನೆಗಳನ್ನು ಹೋಗಲಾಡಿಸಲು ಇಂತಹ ಸಮಾಜಮುಖಿ ಕಾರ್ಯದಿಂದ ಮಾತ್ರ ಸಾಧ್ಯ. ಭಾರತ ಮಾತಾಕಿ ಜೈ ಎಂದು ಹೇಳುವ ಮೊದಲು ಭಾರತದ ಬಗೆಗಿನ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನಾ ಹಿರಿಯ ಮಾರುಕಟ್ಟೆ ಅಧಿಕಾರಿ ಡಾ| ಬಿ ಅನಿಲಾ ಅವರು ಮಾತನಾಡಿ, ಪ್ರಧಾನಿ ಅವರ ಜನೌಷಧ ಕೇಂದ್ರದಿಂದಾಗಿ ಹಲವರು ಪ್ರಯೋಜನ ಪಡೆದುಕೊಂಡಿದ್ದಾರೆ. ವಿವೇಕ ಔಷಧ ಕೇಂದ್ರದ ಸಹಯೋಗದಲ್ಲಿ ಆರಂಭಗೊಂಡ ಇದು ಮೂರನೇ ಶಾಖೆಯಾಗಿದೆ. ಜಿಲ್ಲೆಯಲ್ಲಿ ಇದು 9ನೇ
ಶಾಖೆಯಾಗಿದೆ. ಕರ್ನಾಟಕದಲ್ಲಿ 234ನೇ ಶಾಖೆಯಾಗಿದೆ. ದೇಶದಲ್ಲಿ 3,042ನೇ ಶಾಖೆಯಾಗಿದೆ. ಡಡಬ್ಲ್ಯೂ.ಎಚ್.ಒ.
ಸರ್ಟಿಫೈಡ್ ಕಂಪೆನಿಗಳಿಂದ ಮಾತ್ರ ನಾವು ಔಷಧಿಗಳನ್ನು ತರಿಸುತ್ತಿರುವುದರಿಂದ ನಮ್ಮಲ್ಲಿ ದೊರೆಯುವ ಔಷಧಿಗಳೆಲ್ಲ ಉತ್ತಮ ಗುಣಮಟ್ಟದ್ದೇ ಆಗಿವೆ ಎಂದರು.
Related Articles
Advertisement
ಜಿ.ಪಂ. ಸದಸ್ಯೆ ಮೀನಾಕ್ಷಿ ಶಾಂತಿಗೋಡು, ಇಡ್ಕಿದು ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, ಕಬಕ ಗ್ರಾ.ಪಂ. ಅಧ್ಯಕ್ಷೆ ಪ್ರೀತಾ ಡಿ., ಉಪಾಧ್ಯಕ್ಷ ಕೃಷ್ಣಪ್ಪ ಅಡ್ಯಾಲು, ನಿರ್ದೇಶಕರಾದ ಜಗದೀಶ್ ದೇವಸ್ಯ, ಚಂದ್ರಕಲಾ, ವನಜಾಕ್ಷಿ ಭಟ್, ಪ್ರವೀಣ್, ರಮೇಶ್ ಭಟ್, ನಾರಾಯಣ ನೇರ್ಲಾಜೆ, ಮೋಹನ್ ಶೆಟ್ಟಿ ಬಿ. ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾೖಕ್ ಎಸ್. ಸ್ವಾಗತಿಸಿದರು. ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿ ಅಧ್ಯಕ್ಷ ಪ್ರಸನ್ನ ಎನ್. ಭಟ್ ವಂದಿಸಿದರು. ಸಿಬಂದಿ ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.