Advertisement

ಪ್ರಧಾನಿಯಿಂದ ದೇಶಕ್ಕೆ ವಿಶ್ವಮಾನ್ಯತೆ

03:56 PM Sep 18, 2020 | Suhan S |

ಶ್ರೀರಂಗಪಟ್ಟಣ: ಪ್ರಧಾನಿ ಮೋದಿ ಭಾರತ ದೇಶಕ್ಕೆ ರಾಜಕೀಯವಾಗಿ ವಿಶ್ವಮಾನ್ಯತೆ ತಂದುಕೊಟ್ಟಿದ್ದಾರೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್‌.ನಂಜುಂಡೇಗೌಡ ಹೇಳಿದರು.

Advertisement

ಪ್ರಧಾನಿ ಮೋದಿ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿ ಕಾರ್ಯಕರ್ತರು, ಶ್ರೀರಂಗನಾಥ ದೇವಾಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಸಿಹಿ ವಿತರಿಸಿ ಮಾತನಾಡಿ, ಸಾಮಾಜಿಕ, ಆರ್ಥಿಕ ಮಟ್ಟದಲ್ಲಿ ಮುಂದುವರಿದ ದೇಶವನ್ನಾಗಿ ಮಾಡಲು ಪ್ರಧಾನಿ ಮೋದಿ ಅವರು ಅಗತ್ಯ ಎಂದರು. ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀಧರ್‌, ಜಿಲ್ಲಾ ಬಿಜೆಪಿ ಮಹಿಳಾ ಪ್ರಧಾನ ಕಾರ್ಯದರ್ಶಿ ವಿದ್ಯಾ ಉಮೇಶ್‌, ಸಂತೊಷ್‌ ಕುಮಾರ್‌ ಹಾಜರಿದ್ದರು.

ಮೋದಿ ದೇಶ ಕಂಡ ಅತ್ಯುತ್ತಮ ಪ್ರಧಾನಿ : ಶ್ರೀರಂಗಪಟ್ಟಣ: ಭಾರತದ ಪ್ರಧಾನಿ ನರೆಂದ್ರ ಮೋದಿ ಅವರ 70ನೇ ವರ್ಷದ ಹುಟ್ಟುಹಬ್ಬವನ್ನು ಪಟ್ಟಣದ ಬಸ್‌ ನಿಲ್ದಾಣದ ಬಳಿ ಆಚರಿಸಲಾಯಿತು.ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಮೋದಿ ಗೆಳೆಯರ ಬಳಗದ ಯುವ ಮುಖಂಡ ವಿಜಯ್‌ ನೇತೃತ್ವದಲ್ಲಿ ಮೋದಿ ಭಾವಚಿತ್ರದ ಮುಂದೆ ಕೇಕ್‌ ಕತ್ತರಿಸಿ, ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿದರು.ಸರಳ- ಸಜ್ಜನಿಕೆಯ ದೇಶ ಕಂಡ ಅತ್ಯುತ್ತಮ ಪ್ರಧಾನಿ ನರೇಂದ್ರ ಮೋದಿ. ಕಳೆದ 7

ವರ್ಷಗಳಿಂದ ವಿಶ್ವ ಮಟ್ಟದಲ್ಲಿ ದೇಶವನ್ನು ಮುನ್ನೆಡೆಸುವ ಸಾರಥಿಯಾಗಿರುವುದು ದೇಶಕ್ಕೆ ಒಳಿತು ತಂದಿದೆ ಎಂದರು.ಪುರಸಭೆ ಮಾಜಿ ಸದಸ್ಯ ಜಯರಾಮ್‌, ಮುರುಳಿ, ಸೋಮಣ್ಣ, ಆಟೋ ಶೇಷಾ, ಕಿಟ್ಟಿ, ವಿನಯ್‌, ಕಬಾಬ್‌ ಉಮೇಶ್‌, ಟಿ.ರವಿ ಮಂಜು, ಮಹೇಶ್‌ ಹಾಜರಿದ್ದರು.

ಎಲ್ಲಾ ವರ್ಗದ ಅಭಿವೃದ್ಧಿ ಗೆ ಶ್ರಮ :  ಮದ್ದೂರು: ಪ್ರಧಾನಿ ಮೋದಿ ಅವರ70ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಗೆಜ್ಜಲಗೆರೆಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು, ಹುತಾತ್ಮ ವೀರಯೋಧ ಸುಮಂತ್‌ ಅವರ ಸಮಾಧಿ ಬಳಿ ಗಿಡ ನೆಡುವಮೂಲಕ ಹುಟ್ಟುಹಬ್ಬ ಆಚರಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

Advertisement

ಬಿಜೆಪಿ ಮುಖಂಡ ಯೋಗೇಶ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಬಂದ ದಿನದಿಂದಲೂ ಎಲ್ಲಾವರ್ಗದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ರೈತರು, ಕಾರ್ಮಿಕರು, ಮಹಿಳೆಯರ ಹಾಗೂ ಹಿಂದುಳಿದ ವರ್ಗದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ವಿಶ್ವವೇ ಮೆಚ್ಚಿದ ಪ್ರಧಾನಿಯಾಗಿ ಇತರೆ ದೇಶಗಳು ಭಾರತದತ್ತ ಮುಖಮಾಡುತ್ತಿರುವುದು ನರೇಂದ್ರಮೋದಿ ಆಡಳಿತ ಕಾರ್ಯ ವೈಖರಿಗೆ ಕೈಗನ್ನಡಿಯಾಗಿದೆ. ಪ್ರಧಾನಿಯಾಗಿ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡು ದೇಶವೇ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ಮುಖಂಡ ರಾದ ಮ.ನ. ಪ್ರಸನ್ನಕುಮಾರ್‌, ರಾಮಲಿಂಗಯ್ಯ, ಶಿವರಾಮು, ರಮೇಶ್‌, ಕಿರಣ, ರಾಜೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next