ನೆಲಮಂಗಲ: ಒಂದು ಮುಕ್ಕಾಲು ವರ್ಷಗಳನಂತರ ಶಾಲೆಯ ಅಂಗಳಕ್ಕೆ ಬಂದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗೆಳೆಯರ ಜತೆ ಹಾಡಿಕುಣಿದಿದ್ದಾರೆ. ತಾಲೂಕಿನಲ್ಲಿ ಶೇ.74ರಷ್ಟು ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ.
ತಾಲೂಕಿನ ಸರಕಾರಿ 292 ಪ್ರಾಥಮಿಕ ಶಾಲೆಗಳು, 3 ಸರಕಾರಿ ಅನುದಾನಿತ, 42 ಅನುದಾನ ರಹಿತ ಶಾಲೆಗಳು ಸೇರಿದಂತೆ 337 ಶಾಲೆಗಳಲ್ಲಿ 16485 ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದು ಮೊದಲ ದಿನ ಸೋಮವಾರ 12324 ವಿದ್ಯಾರ್ಥಿಗಳು ಶಾಲೆಗಳಿಗೆ ಹಾಜರಾಗಿದ್ದಾರೆ. ಮೊದಲ ದಿನ ಮಕ್ಕಳಿಗೆ ಆಟದಜತೆ ಪಾಠ ಹೇಳಿದ್ದು ರಜಾ ದಿನದ ಸಮಯವನ್ನುಶಿಕ್ಷಕರು ಕೇಳುವಮೂಲ ಜಾಗೃತಿ ಯಿಂದ ಶಾಲೆಗೆ ಬರುವಂತೆ ಸಲಹೆ ನೀಡಿದ್ದಾರೆ.
ಅಧಿಕಾರಿಗಳ ಪರಿಶೀಲನೆ: ತಾಲೂಕಿನ 337ಪ್ರಾಥಮಿಕ ಶಾಲೆಗಳಲ್ಲಿ ಕೆಲವು ಪ್ರಮುಖ ಶಾಲೆಗಳಿಗೆಬಿಇಓ ರಮೇಶ್‌ಕೆ.ಸಿ ಭೇಟಿ ನೀಡಿ ಪರಿಶೀಲನೆ ಮಾಡಿದರೆ, ಉಳಿದ ಶಾಲೆಗಳಿಗೆ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಕೊರೊನಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದ್ದು ಕೊಠಡಿಗಳಿಗೆ ಸ್ಯಾನಿ ಟೈಸ್ ಮಾಡಿದ್ದು ವಿದ್ಯಾರ್ಥಿಗಳು ಮಾಸ್ಕ್ ಧರಿಸುವಂತೆ ಸೂಚಿಸಿದ್ದಾರೆ.
ಮಕ್ಕಳಿಗೆ ಭವ್ಯ ಸ್ವಾಗತ: 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳು ಇಂದಿನ ಶಾಲೆಗೆ ಆಗಮಿಸಿದ ಕಾರಣ ಕೆಲವು ಕಡೆ ಶಾಲಾ ಶಿಕ್ಷಕರು ಮಕ್ಕಳಿಗೆ ಗುಲಾಬಿ ನೀಡಿ, ತಮಟೆ ಬಾರಿಮೂಲಕ ಶಾಲೆಗೆ ಸ್ವಾಗತ ಮಾಡಿಕೊಂಡಿದ್ದಾರೆ. ಕೆಲವು ಕಡೆಗಳಲ್ಲಿ ಶಾಲೆಯನ್ನು ಅಲಂಕಾರಮಾಡಿ ಸಹಿ ನೀಡಿ ಸ್ವಾಗತ ಮಾಡಿದ್ದು ಗೆಳೆಯರ ಜತೆ ಕುಣಿಯುತ್ತಾ ಮೊದಲ ದಿನಶಾಲೆಗೆ ವಿದ್ಯಾರ್ಥಿಗಳು ಬಂದಿದ್ದಾರೆ.
ಶಿಕ್ಷಕರ ಕೊರತೆ: ಕೊಠಡಿಗೆ ಕೇವಲ 20ವಿದ್ಯಾರ್ಥಿಗಳು ಮಾತ್ರ ಕುಳಿತುಕೊಳ್ಳಲು ಅವಕಾಶವಿರುವುದರಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಬಹಳಷ್ಟು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದ್ದು ಕೆಲವು ಕಡೆ ಹುದ್ದೆಗಳು ಖಾಲಿ ಇದ್ದು ಭರ್ತಿ ಮಾಡಲು ಸೂಚಿಸಲಾಗಿದೆ ಎಂದು ಬಿಇಒ ತಿಳಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಕೆಸಿ ರಮೇಶ್ ಮಾತನಾಡಿ, ತಾಲೂಕಿನಲ್ಲಿ ಶೇ74ರಷ್ಟು ವಿದ್ಯಾರ್ಥಿಗಳು ಮೊದಲ ದಿನ ಶಾಲೆಗೆ ಬಂದಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲಿದ್ದಾರೆ, ಸರಕಾರದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಶಾಲೆ ಆರಂಭಿಸಿದೆ ಎಂದರು.
ಕೊಠಡಿ ಕೊರತೆ:
ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲು ಕೊಠಡಿಗೆ 20ವಿದ್ಯಾರ್ಥಿಗಳು ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ, ತಾಲೂಕಿನಲ್ಲಿ ಮೊದಲ ದಿನ ಶೇ74ರಷ್ಟು ವಿದ್ಯಾರ್ಥಿಗಳು ಹಾಜರಾತಿ ಪಡೆದಿದ್ದು ಅನೇಕ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಉಂಟಾಗಿದೆ, ಉಳಿದ ಶೇ26ರಷ್ಟು ಜನರು ಶಾಲೆಗೆ ಹಾಜರಾದರೆ ಬಹಳಷ್ಟು ಸಮಸ್ಯೆ ಎದುರಾಗಲಿದ್ದು ಪಾಳಿಯ ವ್ಯವಸ್ಥೆ ಅಥವಾ ಕೊಠಡಿ ಹೆಚ್ಚುಮಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗಿದೆ.