Advertisement
ಕೇಶವ ಸ್ಮತಿ ಸಂವರ್ಧನ ಸಮಿತಿ ವತಿಯಿಂದ ನಗರದ ಸಂಘ ನಿಕೇತನ ದಲ್ಲಿ ಆಯೋಜಿಸಿರುವ ಎರಡು ದಿನಗಳ “ಕನ್ನಡ ಶಾಲಾ ಮಕ್ಕಳ ಹಬ್ಬ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ ಅಡ್ಡಿಯಿಲ್ಲ
ಯುಪಿಎಸ್‌ಸಿಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ವಿಜೇತೆ ಐಎಎಸ್ ಅಧಿಕಾರಿ ನಂದಿನಿ ಕೆ.ಆರ್. ಮಾತನಾಡಿ, ಮೊದಲು ನಮಗೆ ನಮ್ಮ ಭಾಷೆಯ ಮೇಲೆ ಅಭಿಮಾನ ಇರಬೇಕು. ಐಎಎಸ್ ಅಥವಾ ಐಪಿಎಸ್‌ಗೆ ಭಾಷೆ ಅಥವಾ ನಾವು ಕಲಿಯುವ ಮಾಧ್ಯಮ ಎಂದೂ ಅಡ್ಡಿಯಾಗದು. ನಮ್ಮಲ್ಲಿರುವ ಶಕ್ತಿ ಏನೆಂಬುದನ್ನು ಮೊದಲು ಅರಿತು ಕೀಳರಿಮೆ ತೊಡೆದುಹಾಕಬೇಕು ಎಂದರು.
Related Articles
ಕೇಶವ ಸ್ಮೃತಿ ಸಂವರ್ಧನ ಸಮಿತಿ ಅಧ್ಯಕ್ಷ ಡಾ| ವಾಮನ ಶೆಣೈ, ಕನ್ನಡ ಶಾಲಾ ಮಕ್ಕಳ ಹಬ್ಬ ಸ್ವಾಗತ ಸಮಿತಿ ಉಪಾಧ್ಯಕ್ಷ ಡಾ| ಕೆ.ಸಿ. ನಾೖಕ್ ಉಪಸ್ಥಿತರಿದ್ದರು.
Advertisement
ಮಂಗಳೂರು ವಿ.ವಿ. ಅಧ್ಯಯನ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಆಶಯ ಭಾಷಣ ಮಾಡಿದರು. ಸ್ವಾಗತ ಸಮಿತಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಸಹ ಕಾರ್ಯದರ್ಶಿ ರಮೇಶ್ ಕೆ. ವಂದಿಸಿದರು.
ಖಾಸಗಿಯವರಿಂದ ಕನ್ನಡ ಶಾಲೆ ಆಗಲಿಅಧ್ಯಕ್ಷತೆ ವಹಿಸಿದ್ದ ಕನ್ನಡ ಶಾಲಾ ಮಕ್ಕಳ ಹಬ್ಬ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ| ಎಂ. ಮೋಹನ ಆಳ್ವ ಮಾತನಾಡಿ, ಬೇಕಾದಷ್ಟು ಕನ್ನಡ ಶಾಲೆಗಳು ಹುಟ್ಟಿದ್ದರೂ ಅವುಗಳನ್ನು ಮೇಲ್ದರ್ಜೆಗೇರಿಸುವಲ್ಲಿ ನಾವು ಸೋತಿದ್ದೇವೆ. ಎಲ್ಲವನ್ನೂ ಸರಕಾರ ಮಾಡಲಿ ಎಂದು ಯೋಚಿಸುವ ಬದಲು ಸಿಬಿಎಸ್‌ಸಿ/ಆಂಗ್ಲಮಾಧ್ಯಮದ ಸ್ವರೂಪದಲ್ಲಿ ಆದರ್ಶಯುತ ಕನ್ನಡ ಶಾಲೆಗಳನ್ನು ಕಟ್ಟಲು ಖಾಸಗಿ ಪ್ರಮುಖರು ಮನಸ್ಸು ಮಾಡಬೇಕು. ಸರಕಾರ ಇದಕ್ಕೆ ಪ್ರೋತ್ಸಾಹ ನೀಡಬೇಕು. ಕನ್ನಡ ಶಾಲೆಗೆ ಸೋಲು ಆದರೆ ಅದು ನಮ್ಮ ಭಾಷೆ, ಸಂಸ್ಕೃತಿ, ಹಳ್ಳಿಯ ಸೋಲು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಹಾಗಾಗಿ ಕನ್ನಡ ಶಾಲೆಗಳು ಎಂದೂ ಸೋಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.