Advertisement
15ಹುದ್ದೆಗಳಲ್ಲಿ 10 ಖಾಲಿ : ಸದ್ಯ ಶಿರೋಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಟ್ಟು 15ಹುದ್ದೆಗಳಿವೆ. ಅವುಗಳಲ್ಲಿ ಮುಖ್ಯ ವೈದ್ಯಾಧಿಕಾರಿ, ಸ್ಟಾಫ್ ನರ್ಸ್, ಎಫ್ಡಿಸಿ ಹಾಗೂ ಗ್ರುಪ್ ಡಿ ಹುದ್ದೆ ಸೇರಿ ಕೇವಲ ಐದು ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.
Related Articles
Advertisement
ಶಿರೋಳ ದೊಡ್ಡ ಗ್ರಾಮ : ಮುಧೋಳ ತಾಲೂಕಿನಲ್ಲಿ ತನ್ನದೇಯಾದ ಗತ್ತು ಗಾಂಭೀರ್ಯ ಹೊಂದಿರುವ ಶಿರೋಳ ಗ್ರಾಮ ಹೋರಾಟಗಾರರ ನೆಲೆ ಎಂದು ಪ್ರಖ್ಯಾತಿ ಪಡೆದಿದೆ. ಒಟ್ಟು 31 ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಂದಾಜು 18257 ಜನಸಂಖ್ಯೆಯನ್ನು ಗ್ರಾಮ ಒಳಗೊಂಡಿದೆ. ಇಷ್ಟೊಂದು ವಿಸ್ತಾರ ಹೊಂದಿರುವ ಗ್ರಾಮಕ್ಕೆ ಸಿಬ್ಬಂದಿಕೊರತೆ ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ.
ಸಿಬ್ಬಂದಿಗೆ ಬಿಡುವಿಲ್ಲದ ಕೆಲಸ : ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇವಲ 5ಜನ ಸಿಬ್ಬಂದಿ ಇದ್ದರೂ ನಿರಂತರವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ. ವೆಳಗ್ಗೆಯಿಂದ ಸಂಜೆವರೆಗೆ ನಿರಂತರ ಹೊರರೋಗಿಗಳನ್ನು ತಪಾಸಣೆ ಮಾಡುವ ಸಿಬ್ಬಂದಿ ಪ್ರತಿದಿನ ಒತ್ತಡದಲ್ಲಿಯೇ ಕಾರ್ಯನಿರ್ವಹಿಸಬೇಕಾಗಿದೆ. ಬಡಜನರೇ ಹೆಚ್ಚಾಗಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲಸೌಕರ್ಯ ಕೊರತೆಯ ನಡುವೆಯೇ ಇಲ್ಲಿನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
24*7ಆಸ್ಪತ್ರೆಯಾಗಲಿ : ಶಿರೋಳ ಗ್ರಾಮದಲ್ಲಿನ ಆಸ್ಪತ್ರೆಯನ್ನು 24*7 ಆಸ್ಪತ್ರೆಯನ್ನಾಗಿಸಿ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು ಎಂಬುದಜ ಗ್ರಾಮಸ್ಥರ ಆಗ್ರಹವಾಗಿದೆ. ಸಿಬ್ಬಂದಿ ಕೊರತೆ ಬೇಗ ನೀಗಿಸಿ ಗ್ರಾಮಸ್ಥರಿಗೆ ಸೂಕ್ತ ಸಮಯದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರೀಕರು ಒತ್ತಾಯಿಸಿದ್ದಾರೆ.**
ಬಾಗಲಕೋಟೆ ಜಿಲ್ಲೆಯಾದ್ಯಂತ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇದಕ್ಕೆ ಶಿರೋಳ ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತಲ್ಲ. ಮುಂದಿನ ದಿನದಲ್ಲಿ ಸಿಬ್ಬಂದಿ ನನಿಯೋಜನೆಗೆ ಕ್ರಮ ಕೈಗೊಳ್ಳಲಾಗುವುದು.
– ಸುವರ್ಣ ಕುಲಕರ್ಣಿ ಡಿಎಚ್ಒ ಬಾಗಲಕೋಟೆ
**
ಶಿರೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಲೇಂದ್ರದಲ್ಲಿ ಸಿಬ್ಬಂದಿ ಕೊರತೆ ಹೆಚ್ಚಿದೆ. ಕೂಡಲೇ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ. ಆರೋಗ್ಯ ಕೇಂದ್ರವನ್ನು 24*7 ಕೃಂದ್ರವನ್ಮಾಗಿ ಮೇಲ್ದರ್ಜೆಗೇರಿಸಬೇಕು.
– ವೆಂಕಣ್ಣ ಮಳಲಿ ಶಿರೋಳ ಗ್ರಾಮಸ್ಥ – ಗೋವಿಂದಪ್ಪ ತಳವಾರ ಮುಧೋಳ