ನಂಜನಗೂಡು: ಸರ್ಕಾರಿ ಆಸ್ಪತ್ರೆಗಳು 24 ಗಂಟೆಕಾಲ ಕಾರ್ಯನಿರ್ವಹಿಸಬೇಕಾಗಿದೆ. ಕೊರೊನಾಬಿಕ್ಕಟ್ಟಿನ ಸಂದರ್ಭದಲ್ಲಿ ಇನ್ನೂ ನಿಗಾವಹಿಸಬೇಕಾಗಿದೆ. ಆದರೆ, ತಾಲೂಕಿನ ದೊಡ್ಡ ಕವಲಂದೆಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರತಿಭಾನುವಾರವೂ ಬಂದ್ ಆಗಿರುತ್ತದೆ.
ಆಸ್ಪತ್ರೆ ಬಾಗಿಲು ಶನಿವಾರ ಮಧ್ಯಾಹ್ನ ಹಾಕಿದರೆಮತ್ತೆ ತೆರೆಯುವುದು ಸೋಮವಾರ ಬೆಳಗ್ಗೆ. ನರ್ಸ್‌ಸೇರಿದಂತೆ ಯಾವ ಸಿಬ್ಬಂದಿ ಕೂಡ ಇರುವುದಿಲ್ಲ.ಹೀಗಾಗಿ ಈ ಭಾಗದಲ್ಲಿ ಜನರು ತುರ್ತು ಚಿಕಿತ್ಸೆಪಡೆಯಲು ಪರದಾಡುವಂತಾಗಿದೆ.ಚಿಕ್ಕಕವಲಂದೆಗೆ ಬಂದ ಆಶಾ ಕಾರ್ಯಕರ್ತರುಭಾನುವಾರವೂ ಆಸ್ಪತ್ರೆ ತೆರೆದಿರುತ್ತೆ.
ಲಸಿಕೆ ಹಾಕಿಸಿಕೊಳ್ಳಿ ವೃದ್ಧರಿಗೆ ಮನವಿ ಮಾಡಿದ್ದರು. ಅದರಂತೆಹಲವಾರು ಮಂದಿ ಲಸಿಕೆ ಹಾಕಿಸಿಕೊಳ್ಳಲು ದೊಡ್ಡಕವಲಂದೆ ಆಸ್ಪತ್ರೆ ತೆರಳಿದಾಗ ಬಾಗಿಲು ಜಡಿರುವುದು ಕಂಡು ಬಂದಿದೆ. ಬಂದ ದಾರಿಗೆ ಸುಂಕವಿಲ್ಲಎಂಬಂತೆ ವಾಪಸ್ ಬಂದಿದ್ದಾರೆ. ಈ ಕುರಿತುಹಲವು ವೃದ್ಧರು ಅಳಲು ತೋಡಿಕೊಂಡಿದ್ದಾರೆ.ಈ ಆಸ್ಪತ್ರೆ ಪ್ರತಿ ಶನಿವಾರ ಮುಚ್ಚಿದರೆ ತೆರೆಯುವುದು ಸೋಮವಾರವೇ. ಆಸ್ಪತ್ರೆ ಸಿಬ್ಬಂದಿಗೆ ಸುಸಜ್ಜಿತವಾದ ವಸತಿ ಗೃಹ ನಿರ್ಮಿಸಿದ್ದರೂ ಖಾಲಿಬಿದಿದ್ದೆ. ಇಲ್ಲಿ ಯಾವಬ್ಬ ಸಿಬ್ಬಂದಿ ಕೂಡ ನೆಲಸಿಲ್ಲ.ಹೊರಗಿನಿಂದ ಬಂದು ಓಡಾಡುತ್ತಾರೆ.
ಇದುಸರ್ಕಾರಿ ಆಸ್ಪತ್ರೆಯ ಕಾರ್ಯವೈಖರಿಯಾಗಿದೆ ಎಂದುಇಲ್ಲಿನ ಅಸ್ಲಾಂ ಖಾನ್ ಅಸಹಾಯಕತೆವ್ಯಕ್ತಪಡಿಸುತ್ತಾರೆ.ಪ್ರಸ್ತುತ ತಾಲೂಕಿನ ಗ್ರಾಮೀಣ ಭಾಗದಲ್ಲಿಕೊರೊನಾ ಸೋಂಕು ಹರಡುತ್ತಿದೆ. ಹತ್ತಾರುಹಳ್ಳಿಗಳಿಗೆ ಒಂದರಂತೆ ಆಸ್ಪತ್ರೆ ಇದೆ. ಇರುವಆಸ್ಪತ್ರೆಗಳೇ ಹೀಗೆ ಎರಡು ದಿನ ಬಾಗಿಲುಮುಚ್ಚಿದರೆ ರೋಗಿಗಳು ಪರಿಸ್ಥಿತಿ ಏನಾಬೇಕು,ಲಸಿಕೆ ಪಡೆಯಲು ಸಾಕಷ್ಟು ಮಂದಿ ಆಗಮಿಸುತ್ತಿದ್ದಾರೆ.
ಜನರು ಜ್ವರ, ಕಾಯಿಲೆಗಳಿಂದ ತುರ್ತುಚಿಕಿತ್ಸೆಗೆ ಪರಿತಪಿಸುತ್ತಿದ್ದಾರೆ. ಹೀಗಾಗಿಮೇಲಧಿಕಾರಿಗಳು ಹಾಗೂ ಈ ಭಾಗದಜನಪ್ರತಿನಿಧಿಗಳು ಗಮನ ಹರಿಸಿ ದೊಡ್ಡಕವಲಂದೆಆಸ್ಪತ್ರೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆನೋಡಿಕೊಳ್ಳಬೇಕಿದೆ ಎಂದು ಸಾರ್ವಜನಿಕರುಆಗ್ರಹಿಸಿದ್ದಾರೆ.
ತಹಶೀಲ್ದಾರ್ ತುರ್ತು ನೋಟಿಸ್: ತಾಲೂಕುಆಡಳಿತ ಕೊರೋನಾ ನಿಯಂತ್ರಣಕ್ಕಾಗಿ ದಿನದ 24ಗಂಟೆ ಕೆಲಸ ಮಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗದೊಡ್ಡಕವಲಂದೆ ಸರ್ಕಾರಿ ಆಸ್ಪತ್ರೆ ಭಾನುವಾರಮುಚ್ಚಿರುವುದರ ಸಂಬಂಧ ಆಸ್ಪತ್ರೆ ವೈದ್ಯ ಸಂಪತ್‌ಅವರಿಗೆ ತುರ್ತು ನೋಟಿಸ್ ನೀಡಲಾಗುವುದುಎಂದು ನಂಜನಗೂಡು ತಹಶೀಲ್ದಾರ್‌ಮೋಹನಕುಮಾರಿ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಭಾನುವಾರ ಸರ್ಕಾರಿ ಆಸ್ಪತ್ರೆ ಬಾಗಿಲುಮುಚ್ಚುವಂತಿಲ್ಲ. ದಿನದ 24 ಗಂಟೆ ಕಾಲಕಾರ್ಯನಿರ್ವಹಿಸ ಬೇಕಾಗಿದೆ. ಆದರೆ, ಈ ಕುರಿತು ಲೋಪವೆಸಗಿದ ಅಲ್ಲಿನವೈದ್ಯರು ಹಾಗೂ ಸಿಬ್ಬಂದಿ ವಿರುದ್ಧಆರೋಗ್ಯ ಇಲಾಖೆ ಕ್ರಮ ಜರುಗಿಸುತ್ತದೆ.
●ಈಶ್ವರ್, ತಾಲೂಕು ವೈದ್ಯಾಧಿಕಾರಿ
ಶ್ರೀಧರ್ ಆರ್. ಭಟ್