Advertisement

Russia: ಡಾಗೆಸ್ತಾನ್‌ನಲ್ಲಿ ಭಯೋತ್ಪಾದಕರ ದಾಳಿ, ಪಾದ್ರಿ, ಪೊಲೀಸರು ಸೇರಿ 15 ಮಂದಿ ಮೃತ್ಯು

08:47 AM Jun 24, 2024 | Team Udayavani |

ರಷ್ಯಾ: ರಷ್ಯಾದ ಡಾಗೆಸ್ತಾನ್ ಪ್ರಾಂತ್ಯದಲ್ಲಿ ಪೊಲೀಸ್ ಪೋಸ್ಟ್, ಚರ್ಚ್ ಮತ್ತು ಯಹೂದಿಗಳ ಪೂಜಾ ಸ್ಥಳವನ್ನು ಗುರಿಯಾಗಿಸಿಕೊಂಡು ಪ್ರತ್ಯೇಕ ಸ್ಥಳಗಳಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಚರ್ಚ್ ಪಾದ್ರಿ, ಪೊಲೀಸರು ಸೇರಿದಂತೆ ಹದಿನೈದು ಮಾಡಿ ಮೃತಪಟ್ಟಿದ್ದು ಜೊತೆಗೆ ಹಲವಾರು ಮಂದಿ ಗಾಯಗೊಂಡಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

Advertisement

ಭಯೋತ್ಪಾದಕ ದಾಳಿಯ ವೇಳೆ ಆರು ಭಯೋತ್ಪಾದಕರು ಮೃತಪಟ್ಟಿರುವುದಾಗಿ ಅಧಿಕಾರಿಗಳು ದೃಢ ಪಡಿಸಿದ್ದಾರೆ.

ದಾಗೆಸ್ತಾನ್‌ನ ಅತಿದೊಡ್ಡ ನಗರವಾದ ಮಖಚ್ಕಲಾ ಮತ್ತು ಕರಾವಳಿ ನಗರವಾದ ಡರ್ಬೆಂಟ್‌ನಲ್ಲಿ ಏಕಕಾಲದಲ್ಲಿ ಗುಂಡಿನ ದಾಳಿಗಳು ನಡೆದಿದ್ದು ಗವರ್ನರ್ ಸೆರ್ಗೆಯ್ ಮೆಲಿಕೋವ್ ಇದನ್ನು “ಭಯೋತ್ಪಾದಕ ದಾಳಿ” ಎಂದು ಹೇಳಿದ್ದಾರೆ.

ಅಧಿಕಾರಿಗಳ ಮಾಹಿತಿಯಂತೆ ಮಖಚ್ಕಲಾದಲ್ಲಿ ನಾಲ್ವರು ಮತ್ತು ಡರ್ಬೆಂಟ್‌ನಲ್ಲಿ ಇಬ್ಬರು ಬಂದೂಕುಧಾರಿಗಳನ್ನು ಪೊಲೀಸ್ ಸಿಬ್ಬಂದಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ ಪೊಲೀಸ್ ಅಧಿಕಾರಿಗಳು, ನಾಗರಿಕರು ಸೇರಿದಂತೆ ಡರ್ಬೆಂಟ್‌ನಲ್ಲಿ 40 ವರ್ಷಗಳಿಗಳಿಗೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ ಆರ್ಥೊಡಾಕ್ಸ್ ಪಾದ್ರಿ ಕೂಡ ಸೇರಿದ್ದಾರೆ ಎಂದು ಮೆಲಿಕೋವ್ ಹೇಳಿದರು.

Advertisement

ಘಾತಯೇ ಕುರಿತು ಟೆಲಿಗ್ರಾಮ್ ಮಾಹಿತಿ ಹಂಚಿಕೊಂಡ ಮೆಲಿಕೋವ್ ಭಾನುವಾರ ಸಂಜೆ ದಾಳಿಕೋರರ ತಂಡ ಡರ್ಬೆಂಟ್ ಮತ್ತು ಮಖಚ್ಕಲಾದಲ್ಲಿ ಗುಂಡಿನ ದಾಳಿ ನಡೆಸುವ ಮೂಲಕ ಇಲ್ಲಿನ ಪರಿಸ್ಥಿತಿಯನ್ನು ಅಸ್ಥಿರಗೊಳಿಸಲು ಯತ್ನಿಸಲಾಗಿದೆ, ಈ ಭಯೋತ್ಪಾದಕ ದಾಳಿಯ ಹಿಂದೆ ಯಾರಿದ್ದಾರೆ ಮತ್ತು ಅವರು ಯಾವ ಉದ್ದೇಶವನ್ನು ಇಟ್ಟುಕೊಂಡು ಈ ದಾಳಿ ನಡೆಸಿದ್ದಾರೆ ಎಂಬುದು ನಮಗೆ ಚೆನ್ನಾಗಿ ಅರಿತಿದೆ, ಇದು ಯುದ್ಧದ ಮುನ್ಸೂಚನೆಯೂ ಆಗಿರಬಹುದು ಯಾವುದಕ್ಕೂ ನಾವು ಸಿದ್ದರಿದ್ದೇವೆ ಎಂದು ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದ ವಿಚಾರವನ್ನು ಮುಂದಿಟ್ಟುಕೊಂಡು ವಿಚಾರ ಪ್ರಸ್ತಾಪಿಸಿದ್ದಾರೆ.

ಡರ್ಬೆಂಟ್ ಮತ್ತು ಮಖಚ್ಕಲಾದಲ್ಲಿ ನಮ್ಮ ತಂಡ ಕಾರ್ಯಾಚರಣೆ ನಡೆಸಿ ಆರು ಭಯೋತ್ಪಾದಕರನ್ನು ಮಟ್ಟ ಹಾಕಿದೆ ಅಲ್ಲದೆ ಭಯೋತ್ಪಾದಕರ ದಮನಕ್ಕೆ ಕಾರ್ಯಾಚರಣೆ ಕೂಡ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Daily Horoscope: ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಸೂಕ್ತ ಮಾರ್ಗದರ್ಶನ ಲಭ್ಯ

Advertisement

Udayavani is now on Telegram. Click here to join our channel and stay updated with the latest news.

Next