Advertisement

ಮಹಾಮಾರಿ ಕೋವಿಡ್ ತಡೆಯಲು 52 ವರ್ಷದ ವ್ಯಕ್ತಿಯ ನರಬಲಿ ಕೊಟ್ಟ ಅರ್ಚಕ!

01:29 PM May 29, 2020 | Nagendra Trasi |

ಒಡಿಶಾ(ಕಟಕ್):ದೇವಿಯನ್ನು ಸಂತುಗೊಳಿಸಿ ಕೋವಿಡ್ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಂಧಾಹುಡಾ ದೇವಾಲಯದೊಳಗೆ ಅರ್ಚಕನೊಬ್ಬ 52 ವರ್ಷದ ವ್ಯಕ್ತಿಯ ಶಿರಚ್ಚೇದಗೈದು ನರಬಲಿ ಕೊಟ್ಟ ಘಟನೆ ಒಡಿಶಾದ ಕಟಕ್ ಜಿಲ್ಲೆಯಲ್ಲಿ ನಡೆದಿದೆ.

Advertisement

ಪೊಲೀಸ್ ಮೂಲಗಳ ಪ್ರಕಾರ, ಕೋವಿಡ್ ವೈರಸ್ ನ ಪರಿಣಾಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಸಾರಿ ಓಜಾ (70ವರ್ಷ) ಎಂಬ ಅರ್ಚಕ ಮಾ ಬ್ರಹ್ಮನಿಧಿ ದೇವಾಲಯದ ಆವರಣದೊಳಗೆ ಬುಧವಾರ ರಾತ್ರಿ ಸರೋಜ್ ಪ್ರಧಾನ್ (52ವರ್ಷ) ಎಂಬ ವ್ಯಕ್ತಿಯ ಶಿರಚ್ಛೇದ ಮಾಡಿರುವುದಾಗಿ ತಿಳಿಸಿದೆ.

ದೇವಾಲಯದ ಸಮೀಪವೇ ಕೃಷಿ ಭೂಮಿಯನ್ನು ಹೊಂದಿದ್ದ, ಕೆಲಸದ ನಂತರ ಸರೋಜ್ ಪ್ರಧಾನ್ ದೇವಾಲಯದ ಆವರಣದೊಳಗೆ ವಿಶ್ರಾಂತಿ ಪಡೆಯುತ್ತಿದ್ದ. ಈ ಸಂದರ್ಭದಲ್ಲಿ ಹೊರಗಡೆಯಿಂದ ವಿಶ್ರಾಂತಿ ಕೋಣೆಯ ಬಾಗಿಲನ್ನು ಅರ್ಚಕ ಹಾಕಿರುವುದಾಗಿ ವರದಿ ತಿಳಿಸಿದೆ. ನಂತರ ದೇವಿಯನ್ನು ಸಂತುಷ್ಟಗೊಳಿಸಲು ಕೊಡಲಿಯಿಂದ ಪ್ರಧಾನ್ ತಲೆಕಡಿದಿದ್ದ. ನಂತರ ಮಧ್ಯರಾತ್ರಿ ನರಸಿಂಗ್ ಪುರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ ಎಂದು ಪೊಲೀಸ್ ಠಾಣಾಧಿಕಾರಿ ಅಲೋಕ್ ರಂಜನ್ ರೇ ತಿಳಿಸಿದ್ದಾರೆ.

ದೇವಿಯೇ ತನಗೆ ನಾಲ್ಕು ದಿನಗಳ ಹಿಂದೆ ಕನಸಿನಲ್ಲಿ ಬಂದು ಕೋವಿಡ್ 19 ವೈರಸ್ ಹೊಡೆದೋಡಿಸಲು ತನಗೆ ನರಬಲಿ ಕೊಡಬೇಕು ಎಂದು ಆಜ್ಞಾಪಿಸಿರುವುದಾಗಿ ಅರ್ಚಕ ಓಜಾ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅರ್ಚಕ ವ್ಯಕ್ತಿಯ ಶಿರಚ್ಛೇದ ಮಾಡಿರುವುದಾಗಿ ರೇ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next