Advertisement

ಹಂಪಿಯ ಪ್ರಸಿದ್ಧ ಬಡವಿಲಿಂಗ ದೇವಸ್ಥಾನದ ಅರ್ಚಕ ಕೃಷ್ಣ ಭಟ್ ಇನ್ನಿಲ್ಲ

12:11 PM Apr 25, 2021 | Team Udayavani |

ಬಳ್ಳಾರಿ: ಹಂಪಿಯ ಪ್ರಸಿದ್ಧ ಬಡವಿ ಲಿಂಗ ದೇವಸ್ಥಾನದ ಅರ್ಚಕ ಕೃಷ್ಣ ಭಟ್ ಅವರು ಭಾನುವಾರ ನಿಧನ ಹೊಂದಿದರು. 87 ವರ್ಷ ಪ್ರಾಯದ ಅವರು ವಯೋಸಹಜ ಖಾಯಿಲೆಯಿಂದ ಇಂದು ಮನೆಯಲ್ಲಿ ಅಸುನೀಗಿದರು.

Advertisement

ಕೃಷ್ಣ ಭಟ್ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿಯವರು. 1979ರಲ್ಲಿ ಅವರು ಹಂಪಿಗೆ ಬಂದು ನೆಲೆಸಿದ್ದರು. ಅಂದಿನಿಂದ ಬಡವಿ ಲಿಂಗಕ್ಕೆ ಪೂಜೆ ಮಾಡುತ್ತಿದ್ದ ಅವರು ವಯೋ ಸಹಜ ಅನಾರೋಗ್ಯದ ಕಾರಣದಿಂದ 2020ರಲ್ಲಿ ಪೂಜೆ ನಿಲ್ಲಿಸಿದ್ದರು. ಬಳಿಕ ಅವರ ಮಗ ಪೂಜೆ ಕಾರ್ಯ ಮುಂದುವರಿಸಿದ್ದರು.

ಇದನ್ನೂ ಓದಿ:ಮಹಿಳೆಯರು ಋತುಚಕ್ರದ ಐದು ದಿನಗಳ ಮೊದಲು ಮತ್ತು ನಂತರ ಕೋವಿಡ್ ಲಸಿಕೆ ಪಡೆಯಬಹುದೆ?

ಹಂಪಿಯ ಬಡವಿ ಲಿಂಗ ಏಕಶಿಲಾ ಮೂರ್ತಿಯಾಗಿದ್ದು, ಭಾರಿ ಪ್ರಸಿದ್ದಿ ಪಡೆದಿದೆ.  ಸುಮಾರು ಮೂರು ಮೀಟರ್ ಎತ್ತರದ ಎತ್ತರದ ಈ ಮೂರ್ತಿಯನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕೆತ್ತಲಾಗಿದೆ ಎನ್ನಲಾಗುತ್ತದೆ .

Advertisement

ಅರ್ಚಕ ಕೃಷ್ಣ ಭಟ್ ಅವರು ಬಡವಿ ಲಿಂಗದ ಪೂಜೆ ಮಾಡುವುದನ್ನು ನೋಡಲು ಭಾರಿ ಸಂಖ್ಯೆಯ ಪ್ರವಾಸಿಗರು ಹಂಪಿಗೆ ಬರುತ್ತಿದ್ದರು. ಇದರ ಫೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ದಿ ಪಡೆದಿತ್ತು.

ಇದನ್ನೂ ಓದಿ: ಮೊಲವು ನೀರಿನಲ್ಲಿ ಈಜುವುದನ್ನು ನೋಡಿದ್ದೀರಾ? : ಇಲ್ಲಿದೆ ವಿಡಿಯೋ

Advertisement

Udayavani is now on Telegram. Click here to join our channel and stay updated with the latest news.

Next