Advertisement

ಜಮೀನು ಗಲಾಟೆ: ಅರ್ಚಕ, ಅರ್ಚಕರ ಪುತ್ರನ ಮೇಲೆ ಚಪ್ಪಲಿಯಿಂದ ಹಲ್ಲೆ

02:30 PM Jun 26, 2021 | Team Udayavani |

ಚಿಕ್ಕಮಗಳೂರು: ಜಮೀನು ವಿಚಾರದಲ್ಲಿ ಗಲಾಟೆಯಾಗಿ ಅರ್ಚಕ ಮತ್ತು ಅವರ ಪುತ್ರನ ಮೇಲೆ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಗಿಜೆಕಟ್ಟೆ ಗ್ರಾಮದಲ್ಲಿ ನಡೆದಿದೆ.

Advertisement

ಅರ್ಚಕ ಚೆನ್ನಕೇಶವಯ್ಯ ಮತ್ತು ಅವರ ಪುತ್ರ ರಂಗನಾಥ್ ಮೇಲೆ ಹಲ್ಲೆ ಮಾಡಲಾಗಿದೆ. ರಾಜಪ್ಪ, ಶೇಖರಪ್ಪ, ಬಸವರಾಜಪ್ಪ, ನವೀನ್, ಸಿದ್ದರಾಮೇಗೌಡ, ಕುಮಾರ್ ಎಂಬ ಆರೋಪಿಗಳು ಅರ್ಚಕರ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ:ಅಪಘಾತದಲ್ಲಿ ಗಾಯಗೊಂಡವರನ್ನು ಉಪಚರಿಸಿ ಮಾನವೀಯತೆ ಮೆರೆದ ಸಭಾಪತಿ ಹೊರಟ್ಟಿ

ಜಮೀನು ವಿಚಾರದಲ್ಲಿ ಈ ಗಲಾಟೆಯಾಗಿದ್ದು ವಿಎ ಶಿವಶಂಕರ್ ಸಮ್ಮುಖದಲ್ಲಿಯೇ ಆರೋಪಿಗಳು ಅರ್ಚಕರಿಗೆ ಮತ್ತು ಪುತ್ರನಿಗೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ.

ಈ ಬಗ್ಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next