Advertisement

ಬೆಲೆ ಏರಿಕೆ: ಮದ್ಯ ಮಾರಾಟ ಕುಸಿತ

06:37 PM May 08, 2020 | Suhan S |

ಹೊಸಕೋಟೆ: ರಾಜ್ಯ ಸರಕಾರ ಮೇ 7ರಿಂದ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಿದ ಕಾರಣ ಗ್ರಾಹಕರು ಕಡಿಮೆಯಾಗಿ ಮಾರಾಟ ಕುಸಿತಗೊಂಡಿದ್ದು ಕಂಡುಬಂದಿತು.

Advertisement

ಮಾ.24ರಿಂದ ಲಾಕ್‌ಡೌನ್‌ ಘೋಷಣೆ ನಂತರ ಮದ್ಯ ಮಾರಾಟ ನಿಷೇಧಿಸಿ, ಮೇ4ರಿಂದ ಪುನರಾರಂಭ ಮಾಡಲಾಗಿತ್ತು. ತಾಲೂಕಿನಲ್ಲಿ ಸಿಎಲ್‌ -2 ಪರವಾನಗಿ ಹೊಂದಿರುವ 14 ಅಂಗಡಿಗಳಲ್ಲಿ, ಎಂಎಸ್‌ಐಎಲ್‌ನ 3 ಮಳಿಗೆ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಮೊದಲ ದಿನ ಭಾರೀ ಪ್ರಮಾಣದಲ್ಲಿ, 9418 ಲೀ. ಮದ್ಯ, 3968 ಲೀ. ಬಿಯರ್‌, ಮೇ 5ರಂದು 10 070 ಲೀ.ಮದ್ಯ, 3385 ಲೀ. ಬಿಯರ್‌,  ಮೇ6ರಂದು 11813 ಲೀ. ಮದ್ಯ, 3402 ಲೀ. ಬಿಯರ್‌ ಮಾರಾಟವಾಗಿತ್ತು. ಬೆಲೆ ಏರಿಕೆ ಪರಿಣಾಮವಾಗಿ ಗ್ರಾಹಕರ ನಿರುತ್ಸಾಹದಿಂದಾಗಿ ಜನಸಂದಣಿಯಿಲ್ಲದೆ ಸಾಮಾನ್ಯ ವಹಿವಾಟು ನಡೆದಿದೆ. ಮೇ 7ರಂದು 3766 ಲೀ. ಮದ್ಯ, 1587 ಲೀ. ಬಿಯರ್‌ ಮಾತ್ರ ಮಾರಾಟ ವಾಗಿದೆಯೆಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next