Advertisement
ಇದಕ್ಕಾಗಿ ಅನೇಕ ಸಲ ಮಕ್ಕಳು ನನ್ನ ಕೈಯಲ್ಲಿ ಬೈಸಿಕೊಂಡರೆ ಅವರನ್ನು ರಕ್ಷಿಸಲೆಂದೇ ಅಜ್ಜ-ಅಜ್ಜಿ ಧಾವಿಸುತ್ತಾರೆ. ಹಾಗಾಗಿ, ಅತಿಥಿಗಳು ತಂದ ತಿಂಡಿತಿನಿಸುಗಳನ್ನು ಅಂದಿನ ಸೂರ್ಯಾಸ್ತಮಾನಕ್ಕಿಂತ ಮುಂಚೆ ಮುಗಿಸುವುದೇ ಮಕ್ಕಳಿಗೆ ಆ ದಿನದ ಅವರ ಟಾರ್ಗೆಟ್ ಆಗಿ ಬಿಡುತ್ತದೆ.
Related Articles
Advertisement
ಪ್ರತಿಯೊಂದು ವಸ್ತುವಿಗೂ ಇಂತಿಷ್ಟು ರೂಪಾಯಿ ಅಂತ ನಿಗದಿ ಮಾಡಿ ಇಟ್ಟಿದ್ದೇವೆ. ಆದರೆ, ಆ ವಸ್ತು ಕೊಡುವ “ಆನಂದ’ಕ್ಕೆ ಬೆಲೆ ಕಟ್ಟಲು ಸಾಧ್ಯ ವೆ? ಮಕ್ಕಳ ಮುಗ್ಧ ಮನಸ್ಸಿನಲ್ಲಿ ಒಂದು ಚಾಕಲೇಟಿಗಿರುವ ಬೆಲೆ ಕೋಟಿ ರೂಪಾಯಿಗೆ ಇರುವುದಿಲ್ಲ. ಅವರು ಬೆಲೆ ಕೊಡುವುದು ಮುಂದಿರುವ ವಸ್ತುಗಳಲ್ಲಿ ತನಗೆ ಯಾವುದು “ಸುಖ’ ಕೊಡುತ್ತದೆಯೋ, ಅದಕ್ಕೆ.ಕೆಲವು ಬಂಧುಗಳು ಮಕ್ಕಳ ಕೈಯಲ್ಲಿ ದುಡ್ಡಿಟ್ಟು ಆಶೀರ್ವಾದ ಮಾಡುವ “ದುರಭ್ಯಾಸ’ ಇಟ್ಟುಕೊಂಡಿ¨ªಾರೆ. ಮಕ್ಕಳಿಗೆ ಆ ಕಾಗದದ ತುಂಡಿನ ಬೆಲೆ ತಿಳಿಯದೆ, ಸೋಫಾದ ಮೇಲೋ, ತಮ್ಮ ಸೈಕಲ್ ಮೇಲೋ ಇಟ್ಟು ಆಡಲು ಹೋಗುತ್ತಿದ್ದರು. ಆದರೆ, ಈಗ ಹಾಗಿಲ್ಲ , ನನ್ನವರ ಅಮ್ಮನವರು ಮಕ್ಕಳಿಗಾಗಿ ಒಂದು ಹುಂಡಿ ತರಿಸಿ ಅದರಲ್ಲಿ ಹಾಕಿಡುವ ಅಭ್ಯಾಸ ಮಾಡಿಸಿ¨ªಾರೆ. ನಾನು, ಆ ದುಡ್ಡು ಯಾಕೆ ಎಂದು ಕೇಳಿದರೆ, “ಚಾಕಲೇಟಿಗೆ, ರಿಮೋಟ್ ಕಾರಿಗೆ, ಹೊಸ ಸೈಕಲ್‌ಗೆ’ ಎನ್ನುತ್ತಾರೆ. ಮೊನ್ನೆ, “ಅಜ್ಜಿ ಹೊಸ ಸೀರೆಬೇಕು ಅಂತ ಕೇಳಿದರಲ್ಲವೆ, ಅದಕ್ಕೆ’ ಅವರ ಹುಂಡಿಯಿಂದಲೇ ನಮ್ಮ ಸಂಸಾರ ಸಾಗುತ್ತದೆಯೋ ಎಂಬಂತೆ ಮಾತನಾಡುತ್ತಾರೆ. ನನ್ನ ಪರ್ಸೊಳಗೆ ಸೇರುತ್ತಿದ್ದ ನೋಟುಗಳೆಲ್ಲ ಈಗ ಹುಂಡಿಯೊಳಗೆ ಸಾಗುತ್ತಿರುವುದನ್ನು ನೋಡಿದರೆ ನಗು ಬರುತ್ತದೆ. ಅಪರೂಪಕ್ಕೊಮ್ಮೆ ಚಿಲ್ಲರೆಗಾಗಿ ಆ ಹುಂಡಿಯೊಳಗೆ ಕೈ ಹಾಕಿದರೆ ಸಾಕು, ನಿಧಿಯನ್ನು ಕಾಪಾಡುವ ದೇವರಂತೆ ಎದುರಲ್ಲಿ ಬಂದು ಪ್ರತ್ಯಕ್ಷರಾಗಿ ಬಿಡುತ್ತಾರೆ ! ಆಗ ಕೊಂಚ ಭಯ ಆಗುತ್ತದೆ- ಇಷ್ಟು ಬೇಗ ಇವರಿಗೂ ಈ ದುಡ್ಡಿನ ಬೆಲೆ ಗೊತ್ತಾಗಿ ಬಿಟ್ಟಿತಾ ಎಂದು ! ತೆಗೆದ-ಹಾಕಿದ ಲೆಕ್ಕವನ್ನು ಮಕ್ಕಳಿಗೆ ಸರಿಯಾಗಿ ಒಪ್ಪಿಸದಿದ್ದರೆ ನನ್ನವರಿಗೂ ನನಗೂ ನೆಮ್ಮದಿ ಇಲ್ಲ. ನನ್ನ ಬಾಲ್ಯದಲ್ಲಿ ರಜೆಗೆ ಅಜ್ಜಿ ಮನೆಗೆ ಹೋಗುತ್ತಿ¨ªೆ. ಅಲ್ಲಿ ನನ್ನ ದೊಡ್ಡತ್ತೆಗೂ ನನ್ನ ದೊಡ್ಡಮ್ಮ ಚಿಕ್ಕಮ್ಮನ ಮಕ್ಕಳಾದ ನಾವೇ ಮಕ್ಕಳಾಗಿಬಿಡುತ್ತಿದ್ದೆವು. ಆಕೆ, ಹಲವು ಮಕ್ಕಳ ತಾಯಿಯಾಗಿ ಸಂಭ್ರಮಿಸುತ್ತಿದ್ದರು. “ನಾವೆಲ್ಲ ಬರುತ್ತೇವೆ’ ಎಂದು ತಿಳಿದ ತತ್‌ಕ್ಷಣ ಬಳೆಯ ಡಬ್ಬಗಳನ್ನೇ ತರಿಸಿಡುತ್ತಿದ್ದರು. ನಮಗೆಲ್ಲ ಕೈ ತುಂಬ ಬಳೆ ತೊಡಿಸಿ, ಆ ಬಳೆಯ ಗಿಜಿಗಿಜಿ ನಾದಕ್ಕೆ ಇಡೀ ಮನೆಯೇ ಸಂಭ್ರಮಿಸುವಂತೆ ಮಾಡುತ್ತಿದ್ದರು. ಒಂದೊಂದು ಸಲ ಅವರಿಗೆ ಕೆಲಸದ ಒತ್ತಡದಿಂದಾಗಿ ಬಳೆ ಕೊಡಿಸಲು ಸಾಧ್ಯವಾಗುತ್ತಿರಲಿಲ್ಲ. ಆಗೆಲ್ಲ ನಮ್ಮ ಕೈಗೆ ಹಣವನ್ನಿಟ್ಟು “ಇದರಲ್ಲಿ ಬಳೆ ಇಟ್ಟುಕೊಳ್ಳಿಯಮ್ಮ’ ಎಂದು ಪ್ರೀತಿಯಿಂದ ಕುಂಕುಮ ಹಚ್ಚಿ ಆಶೀರ್ವದಿಸುತ್ತಿದ್ದರು. ಆಗೆಲ್ಲ ನಮಗೆ ಬೇಜಾರು- ಕೈಯಲ್ಲಿ ಗಿಜಿಗಿಜಿ ಶಬ್ದವಿಲ್ಲ, ಕೈಚೀಲದೊಳಗೆ ನೋಟು ಇದ್ದರೂ ಇಲ್ಲದಂತೆ ಮೌನ. ನಾವು ಹಣದ ಬೆಲೆ ಅರಿಯುತ್ತ ಹೋದಂತೆ ಅದರÇÉೇ ಸುಖವನ್ನು ಅರಸುತ್ತ ಹೋಗುತ್ತೇವೆ. ಮತ್ತದೇ ಇತರ ವಸ್ತುಗಳು ಕೊಡುವ ಸುಖಕ್ಕೂ ಬೆಲೆ ಕಟ್ಟಿ ಬಿಡುತ್ತದೆ. ಮತ್ತದೇ ನಮ್ಮನ್ನು ಆಳುತ್ತದೆ. ರೊಕ್ಕ ಎರಡಕ್ಕೂ ದುಃಖ ಕಾಣಕ್ಕ ಎಂಬ ಪುರಂದರ ದಾಸರ ಕೀರ್ತನೆಯನ್ನು ನಮ್ಮ ಮಾನಸಿಕ ನೆಮ್ಮದಿಗಾಗಿ ಅರಿತು ಬಾಳುವ ಅಗತ್ಯತೆ ಇದೆ. ಮತ್ತೂಮ್ಮೆ ನಮ್ಮ ಮನಸ್ಸು ಮಗುವಾಗಲಿ! – ವಿಭಾ ಕೃಷ್ಣಪ್ರಕಾಶ