Advertisement

ಬೆಲೆ ಕುಸಿತದಿಂದ ಹೂವಿನ ತೋಟ ನಾಶ

02:08 PM Mar 22, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಭಾವದಿಂದ ಲಾಕ್‌ಡೌನ್ ‌ಅವಧಿಯಲ್ಲಿ ಬೆಳೆದಿದ್ದ ಉತ್ಪನ್ನಗಳಿಗೆ ಬೆಲೆ ಸಿಗದೆ ಕೈ ಸುಟ್ಟಿಕೊಂಡಿರುವ ರೈತರು ಚೇತರಿಸಿಕೊಳ್ಳುವ ಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಮತ್ತೂಂದೆಡೆ ಮಾರುಕಟ್ಟೆಯಲ್ಲಿ ಚೆಂಡು ಹೂವಿನ ಬೆಲೆ ಕುಸಿತದಿಂದ ಬೇಸತ್ತ ರೈತರೊಬ್ಬರು ಚೆಂಡು ಹೂವಿನ ತೋಟವನ್ನೇ ನಾಶ ಮಾಡಿದ್ದಾನೆ.

Advertisement

ತಾಲೂಕಿನ ಅಂಗರೇಕನಹಳ್ಳಿ ಗ್ರಾಮದ ರೈತ ರವಿಕುಮಾರ್‌ ಅವರು ತಮ್ಮ 4 ಎಕರೆ ಜಮೀನಿನಲ್ಲಿ ಚೆಂಡು ಹೂವು ಬೆಳೆದಿದ್ದರು.ಹೂವುಗಳು ಸಹ ಸೊಂಪಾಗಿ ಬೆಳೆದಿದ್ದವು.ಆದರೆ, ಹೂವು ಕಟಾವು ಮಾಡಿ ಮಾರುಕಟ್ಟೆಗೆ ತಂದರೆ ಪ್ರತಿ ಕೆ.ಜಿ.ಗೆ 5 ರೂ.ಗೆಮಾರಾಟವಾಗಿದೆ. ಇದರಿಂದ ರೋಸಿಹೋದರವಿಕುಮಾರ್‌ ಅವರು, ಟ್ರ್ಯಾಕ್ಟರ್‌ ಮೂಲಕತೋಟವನ್ನು ಉಳುಮೆ ಮಾಡಿ, ಹೂವು ಗಿಡಗಳನ್ನು ನಾಶ ಮಾಡಿದ್ದಾರೆ.

ಕಾರ್ಮಿಕರ ಕೂಲಿ ಹಣವೂ ಸಿಕ್ಕಿಲ್ಲ: ಒಟ್ಟು 4 ಎಕರೆಗೆ ಸುಮಾರು 4 ಲಕ್ಷ ರೂ.ಗಳುಬಂಡವಾಳ ಹಾಕಿ ಬೆಳೆದಿದ್ದ ಚೆಂಡುಹೂವಿನಿಂದ ಕೇವಲ 40ರಿಂದ 50 ಸಾವಿರರೂ. ಸಿಕ್ಕಿದೆ. ಇದರಿಂದ ಹೂವು ಕಟಾವು ಮಾಡುವ ಕೂಲಿ ಕಾರ್ಮಿಕರಿಗೆ ನೀಡುವಷ್ಟುಹಣ ಕೂಡ ಸಿಗಲಿಲ್ಲ. ಅಲ್ಲದೆ, ಮುಂದೆ ಬೆಳೆಕಾಪಾಡಿಕೊಳ್ಳಲು ಕ್ರಿಮಿ ನಾಶಕಗಳನ್ನುಸಿಂಪಡಿಸಲು ಹಣ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ತೋಟ ನಾಶ ಮಾಡುತ್ತಿರುವುದಾಗಿ ರವಿಕುಮಾರ್‌ ತಿಳಿಸಿದ್ದಾರೆ.

ರೈತರು ಕಂಗಾಲು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತರಕಾರಿ, ದ್ರಾಕ್ಷಿಯ ಜೊತೆಗೆ ಹೂವು ಮತ್ತುಹಣ್ಣುಗಳನ್ನು ಉತ್ಪಾದನೆ ಮಾಡುವ ರೈತರುಯಾವುದೇ ಬೆಳೆಯಿಟ್ಟರೂ, ಅದಕ್ಕೆ ಸಮರ್ಪಕವಾಗಿ ಬೆಲೆ ಸಿಗದೆ ಕೈ ಸುಟ್ಟುಕೊಂಡು ಸಾಲಗಾರರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯವಾಗಿ 30ರಿಂದ 40 ರೂ. ಗಳಿಗೆ ಮಾರಾಟವಾಗುತ್ತಿದ್ದಚೆಂಡು ಹೂವಿನ ದರ 5ರಿಂದ 10 ರೂ. ಗಳಿಗೆಕುಸಿತ ಕಂಡಿದ್ದರಿಂದ ಸಹಜವಾಗಿ ರೈತರು ಕಂಗಾಲಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಡಿಸೆಂಬರ್‌ಗೆ ಹೋಲಿಕೆಮಾಡಿದರೆ ಮಾರ್ಚ್‌ ತಿಂಗಳಿನಲ್ಲಿಬೆಲೆ ಕುಸಿತ ಕಂಡಿದೆ. ಜೊತೆಗೆಕೋವಿಡ್ ಸೋಂಕು ಇರುವಕಾರಣ ಯಾವುದೇ ಶುಭ ಸಮಾರಂಭಗಳು ನಡೆಯುತ್ತಿಲ್ಲ. ಹಬ್ಬಗಳುಇಲ್ಲದಿರುವುದರಿಂದ ಹೂವಿನ ಬೆಲೆಕುಸಿದಿದೆ. ರೈತ ಬೆಳೆ ನಾಶಮಾಡಿರುವ ಕುರಿತು ತಮಗೆ ಮಾಹಿತಿ ಇಲ್ಲ. ಕೃಷ್ಣಮೂರ್ತಿ, ಉಪನಿರ್ದೇಶಕ,ತೋಟಗಾರಿಕೆ ಇಲಾಖೆ, ಚಿಕ್ಕಬಳ್ಳಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next