Advertisement

ಹಿಂದೆ ರೂಪಾಯಿ ಕೃಷಿ

12:07 AM Jul 05, 2019 | mahesh |

ಭಿನ್ನ ವಿಭಿನ್ನ ಟೈಟಲ್ ಮೂಲಕ ಹೊಸಬರು ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಈಗ ಹೊಸಬರ ತಂಡವೊಂದು ‘ರೂಪಾಯಿ’ ಎಂಬ ಸಿನಿಮಾ ಮಾಡಿದ್ದು ಈಗಾಗಲೇ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ವಿನೋದ್‌ನಾಗ್‌ ನಿರ್ದೇಶನದ ಈ ಚಿತ್ರದಲ್ಲಿ ಕೃಷಿ ತಾಪಂಡ ನಾಯಕಿ. ಮಂಜುನಾಥ್‌ ಎಂ. ನಿರ್ಮಾಪಕರು. ಚಿತ್ರದ ಟೈಟಲ್ ಹೇಳುವಂತೆ ಹಣದ ಕುರಿತಾದ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದ ಕಥೆಯನ್ನು ನಿಜ ಜೀವನಕ್ಕೆ ಹತ್ತಿರವಾಗಿ, ಸಾಂದರ್ಭಿಕ ಮನೋರಂಜನೆಯನ್ನೇ ಪ್ರಮುಖವಾಗಿಟ್ಟುಕೊಂಡು ಈ ಚಿತ್ರದ ಚಿತ್ರಕಥೆ ಹೆಣೆಯಲಾಗಿದೆ ಎಂಬುದು ನಿರ್ದೇಶಕರ ಮಾತು. ಈ ಚಿತ್ರಕ್ಕೆ ಆನಂದ್‌ ರಾಜ ವಿಕ್ರಮ್‌ ಅವರ ಸಂಗೀತವಿದೆ. ನಾಗಾರ್ಜುನ್‌ ಛಾಯಾಗ್ರಹಣ, ಶಿವರಾಜ ಮೇಹು ಸಂಕಲನವಿದೆ. ಚಿತ್ರದಲ್ಲಿ ವಿನೋದ್‌ ನಾಗ್‌, ಕೃಷಿ ತಾಪಂಡ, ಮೈತ್ರಿ ಜಗದೀಶ್‌, ರಾಮ್‌ ಚಂದನ್‌, ಚಂದನ ರಾಘವೇಂದ್ರ, ಅನಿಲ್ ಕುಮಾರ್‌, ಪ್ರಮೋದ್‌ ಶೆಟ್ಟಿ, ರಾಕ್‌ಲೈನ್‌ ಸುಧಾಕರ್‌ ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next