Advertisement

ಅಕ್ರಮ ಮರಳುಗಾರಿಕೆ ತಡೆ : ಇಲಾಖೆಗಳ ನಡುವೆ ಸಮನ್ವಯ ಅಗತ್ಯ: ಐಜಿಪಿ

12:14 PM Apr 14, 2017 | Team Udayavani |

ಕುಂದಾಪುರ: ಗಣಿ ಮತ್ತು ಭೂ ವಿಜ್ಞಾನ ಮತ್ತು ಲೋಕೋಪಯೋಗಿ ಇಲಾಖೆಗಳು ಅಕ್ರಮ ಮರಳುಗಾರಿಕೆ ನಡೆಯುವ ಬಗ್ಗೆ ಅರಿವು ಹಾಗೂ ಮಾಹಿತಿ ಹೊಂದಿರುತ್ತದೆ. ಈ ಮಾಹಿತಿಯನ್ನು ಪೊಲೀಸ್‌ ಇಲಾಖೆಗೆ ನೀಡುವ ಹೊಣೆಗಾರಿಕೆ ಈ ಇಲಾಖೆಗಳದ್ದಾಗಿರುತ್ತದೆ. ಇದನ್ನು ಬಿಟ್ಟು ಎಲ್ಲದಕ್ಕೂ ಪೊಲೀಸ್‌ ಇಲಾಖೆಯನ್ನು ಬೆಟ್ಟು ಮಾಡಿ ತೋರಿಸುವುದು ತಪ್ಪಾಗುತ್ತದೆ. ಎಲ್ಲ ಇಲಾಖೆಗಳಲ್ಲಿ ಸಮನ್ವಯತೆ ಕಾಯ್ದುಕೊಂಡಲ್ಲಿ ಅಕ್ರಮ ತಡೆಯಬಹುದು ಎಂದು ಪಶ್ಚಿಮ ವಲಯ ಪೊಲೀಸ್‌ ಮಹಾನಿರ್ದೇಶಕ ಹರಿಶೇಖರನ್‌ ಹೇಳಿದರು.

Advertisement

ಅವರು ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮೇಲೆ ಹಲ್ಲೆ ನಡೆಸಲಾದ ಕಂಡೂÉರು ಹಾಗೂ ಹಳ್ನಾಡು ಮರಳುಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅನಂತರ ಕುಂದಾಪುರ ಡಿವೈಎಸ್‌ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರಭಾವಿಗಳ ತನಿಖೆ: ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಲ್ಲೆಗೆ ಸಂಬಂಧಪಟ್ಟಂತೆ ಈಗಾಗಲೇ 21 ಮಂದಿಯನ್ನು ಬಂಧಿಸಿದ್ದು, ಮರಳು ದಂಧೆಯಲ್ಲಿ ತೊಡಗಿಸಿಕೊಂಡಿರುವ ಹಾಗೂ ಇದರ ಹಿಂದೆ ಇರುವ ಪ್ರಭಾವಿ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಿ ಅವರನ್ನು ವಾರದೊಳಗೆ ಬಂಧಿಧಿಸಲಾಗುವುದು ಎಂದರು.

ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಾಲಕೃಷ್ಣ, ಎಡಿಷನಲ್‌ ಎಸ್ಪಿ ವಿಷ್ಣುವರ್ಧನ, ಡಿವೈಎಸ್‌ಪಿ ಪ್ರವೀಣ್‌ ನಾಯಕ್‌, ವೃತ್ತ ನಿರೀಕ್ಷಕ ಮಂಜಪ್ಪ ಉಪಸ್ಥಿತರಿದ್ದರು.

ಅಮಾಯಕರನ್ನು ಬಿಡುಗಡೆಗೊಳಿಸಿ: ಮಹಿಳೆಯರ ಮನವಿ
ಕಂಡೂÉರಿನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಂಡೂÉರಿಗೆ ಭೇಟಿ ನೀಡಿದ ಐಜಿ ಅವರಿಗೆ ಬಂಧನಕ್ಕೆ ಒಳಗಾದ ಯುವಕರ ಪೋಷಕ ಮಹಿಳೆಯರು ಮನವಿ ನೀಡಿ ಈ ಪ್ರಕರಣದಲ್ಲಿ ಅಮಾಯಕ ಯುವಕರನ್ನು ಬಂಧಿಸಲಾಗಿದ್ದು, ಅವರನ್ನು ಬಿಡುಗಡೆಗೊಳಿಸುವಂತೆ ಕೋರಿದರು. ದುಡಿಮೆಗಾಗಿ ವಿದೇಶಕ್ಕೆ ತರಳಿ ಮದುವೆ ಕಾರ್ಯಕ್ರಮಗಳಿಗೆ ಊರಿಗೆ ಬಂದಿದ್ದ ಯುವಕರನ್ನು ಬಂಧಿಸಿರುವುದು ನ್ಯಾಯಸಮ್ಮತವಲ್ಲ ಎಂದು ಅವರು ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next