Advertisement

ಕಾಸರಗೋಡಿನಲ್ಲಿ ಕೊಳವೆ ಬಾವಿ ನಿರ್ಮಾಣಕ್ಕೆ ತಡೆ

12:15 AM Mar 26, 2019 | sudhir |

ಕಾಸರಗೋಡು: ಅಂತರ್ಜಲ ಮಟ್ಟ ಭಾರೀ ಪ್ರಮಾಣ ದಲ್ಲಿ ಕುಸಿದಿರುವ ಕಾಸರಗೋಡು, ಪಾಲಾ^ಟ್‌, ಆಲಪ್ಪುಳ ಮತ್ತು ಕಲ್ಲಿಕೋಟೆ ಜಿಲ್ಲೆಗಳಲ್ಲಿ ಕೊಳವೆ ಬಾವಿಗಳ ನಿರ್ಮಾಣಕ್ಕೆ ನೀಡಲಾಗುವ ಲೈಸನ್ಸ್‌ ನಿಲುಗಡೆಗೊಳಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.

Advertisement

ಜಲಪ್ರಾಧಿಕಾರ, ಕಂದಾಯ, ಸ್ಥಳೀಯಾಡಳಿಡತ ಸಂಸ್ಥೆಗಳು ಮತ್ತು ನೀರಾವರಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಈ ಜಿಲ್ಲೆಗಳಲ್ಲಿ ವಿಶೇಷ ನಿಗಾ ಇರಿಸಲಾಗುವುದು. ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅಧ್ಯಕ್ಷತೆ ವಹಿಸಿದ್ದ ಸಂಬಂಧಪಟ್ಟ ಇಲಾಖೆಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನೀರಿನ ಕ್ಷಾಮಕ್ಕೆ ಪರಿಹಾರ ಕಂಡುಕೊಳ್ಳಲು ಅಗತ್ಯದ ತುರ್ತು ಕ್ರಮ ಕೈಗೊಳ್ಳುವಂತೆ ಸರಕಾರ ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶ ನೀಡಿದೆ.

ನೀರಿನ ಕ್ಷಾಮ ಪರಿಹರಿಸಲು ಹೊಳೆಗಳಿಗೆ ತಾತ್ಕಾಲಿಕ ಕಿರು ಅಣೆಕಟ್ಟುಗಳನ್ನು ನಿರ್ಮಿಸಲಾಗು ವುದು. ಬಾವಿ, ಕೆರೆ ಸಹಿತ ಜಲ ಸಂಪನ್ಮೂಲಗಳಿಗೆ ಪುನರ್ಜೀವ ನೀಡಲಾಗುವುದು. ಜಲ ಸಮೃದ್ಧಿ ಪ್ರದೇಶಗಳಿಂದ ಕೊಳವೆ ಮೂಲಕ ನೀರಿನ ಕ್ಷಾಮ ಎದುರಿಸುವ ಪ್ರದೇಶಗಳಿಗೆ ನೀರು ಪೂರೈಸಲಾಗುವುದು. ಕುಡಿ ಯುವ ನೀರನ್ನು ದುರುಪಯೋಗ ಪಡಿಸುವಿಕೆ, ಕೆರೆ, ಬಾವಿ ಇತ್ಯಾದಿ ಜಲಸಂಪನ್ಮೂಲಗಳನ್ನು ಶುದ್ಧೀಕರಿಸಿ ಅವುಗಳ ನೀರನ್ನು ಬಳಸುವಿಕೆ ಇತ್ಯಾದಿ ಕೆಲಸಗಳನ್ನು ನಡೆಸಲಾಗುವುದು. ಟ್ಯಾಂಕರ್‌ನಲ್ಲಿ ನೀರು ಪೂರೈಸುವ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next