Advertisement

ಶಿಕ್ಷಕರ ವಿಶೇಷ ಭತ್ಯೆ ವಸೂಲಿಗೆ ತಡೆ

06:20 AM Nov 14, 2017 | |

ಬೆಂಗಳೂರು : ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯಲ್ಲಿ 2008ರ ನಂತರ ನೇಮಕಗೊಂಡ ಶಿಕ್ಷಕ, ಉಪನ್ಯಾಸಕರಿಗೆ ನೀಡಿರುವ ವಿಶೇಷ ಭತ್ಯೆ ವಸೂಲಾತಿಗೆ ಹೊರಡಿಸಿರುವ ಆದೇಶವನ್ನು ತಡೆ ಹಿಡಿಯುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ನಿರ್ದೇಶಿಸಿದ್ದಾರೆ. 

Advertisement

2008 ಆಗಸ್ಟ್‌ 1ರ ನಂತರ ಇಲಾಖೆಯಲ್ಲಿ ನೇಮಕಗೊಂಡ 7242 ಶಿಕ್ಷಕ, ಉಪನ್ಯಾಸಕರಿಗೆ ನೀಡಿದ್ದ 8.33 ಕೋಟಿ ರೂ. ವಿಶೇಷ ಭತ್ಯೆಯನ್ನು ಮರು ವಸೂಲಿ ಮಾಡುವಂತೆ ನ.4ರಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ಇದನ್ನು ವಿರೋಧಿಸಿ, ಶಿಕ್ಷಕರ ಸಂಘ ಮತ್ತು ಮೇಲ್ಮನೆ ಸದಸ್ಯರು, ಸಚಿವ ತನ್ವೀರ್‌ ಸೇಠ್ ಗೆ ಮನವಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next