ಬೆಂಗಳೂರು: ಕೋವಿಡ್-19 ತಡೆ ಜತೆಗೆ ನೋಡಲ್ ಅಧಿಕಾರಿಗಳ ಜವಾಬ್ದಾರಿಯೂ ಅಧಿಕಾರಿಗಳ ಹೆಗಲೇರಿದ್ದು, ಪಾಲಿಕೆಯಕೆಲವು ಆರೋಗ್ಯಾಧಿಕಾರಿಗಳು ತೀವ್ರ ಮಾನಸಿಕ ಒತ್ತಡ ಎದುರಿಸುವಂತಾಗಿದೆ.
ಪಾಲಿಕೆ ಸದಸ್ಯರ ಅಧಿಕಾರಾವಧಿ ಮುಗಿದ ಬಳಿಕ ಸಾರ್ವಜನಿಕ ಸಂಪರ್ಕ ಸಾಧಿಸಲು ಪಾಲಿಕೆಯ ಅಧಿಕಾರಿ ಗಳನ್ನು ವಾರ್ಡ್‌ನ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಹೀಗೆ ನೇಮಕವಾದವರಲ್ಲಿ ಪಾಲಿಕೆಯ ಜಂಟಿ ಆಯುಕ್ತರು, ವಿಶೇಷ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳೂ ಇದ್ದು, ಜವಾಬ್ದಾರಿ ಇಮ್ಮಡಿಯಾಗಿದೆ. ಕಚೇರಿ ಕೆಲಸಗಳಿಗೆ ಹಿನ್ನಡೆ: ವಾರ್ಡ್‌ನ ನೋಡಲ್ ಅಧಿಕಾರಿಯಾಗಿ ಜವಾಬ್ದಾರಿ ಹೊತ್ತವರು ವಾರ್ಡ್ ವ್ಯಾಪ್ತಿಯಲ್ಲಿ ಕಸ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವುದು, ಕಸ ನಿರ್ವಹಣೆ ಮೇಲುಸ್ತುವಾರಿ ಹಾಗೂ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು ಸೇರಿದಂತೆ ಹಲವು ಕಾರ್ಯ ನಿರ್ವಹಿಸಬೇಕಿದೆ.
ಕೆಲವು ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕವಾದ ಬಳಿಕ, ಕಚೇರಿಯ ಕೆಲಸಗಳಿಗೂ ಹಿನ್ನೆಡೆ ಉಂಟಾಗುತ್ತಿದೆ. ಮುಂದಿನ ವಾರದಿಂದ ನಿತ್ಯ ಕನಿಷ್ಠ 40 ಸಾವಿರ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಇದಕ್ಕೂ ಸಿದ್ಧತೆ ಮಾಡಿಕೊಳ್ಳಬೇಕು. ಸೋಂಕು ದೃಢಪಟ್ಟವರ ವ್ಯವಸ್ಥೆಯೂ ನೋಡಿಕೊಳ್ಳಬೇಕು. ಇವೆಲ್ಲವೂ ಮಾನಸಿಕ ಒತ್ತಡದ ವಾತಾವರಣ ಸೃಷ್ಟಿಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪಾಲಿಕೆ ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದರು.
ಕೆಲವರು ವಾರ್ಡ್‌ಗಳಿಗೆ ಭೇಟಿಯೇ ನೀಡುತ್ತಿಲ್ಲ ! : ಒಂದು ಕಡೆ ಕೆಲವು ಅಧಿಕಾರಿಗಳು ತೀವ್ರ ಕೆಲಸದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೂಂದು ಕಡೆ ಕೆಲವು ಅಧಿಕಾರಿಗಳು ವಾರ್ಡ್‌ಗಳಿಗೆ ಭೇಟಿ ನೀಡದೆ, ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಹೀಗಾಗಿ, ವಿಶೇಷ ಆಯುಕ್ತರು ಹಾಗೂ ಜಂಟಿ ಆಯುಕ್ತರನ್ನು ನೋಡಲ್ ಜವಾಬ್ದಾರಿಯಿಂದ ಮುಕ್ತಗೊಳಿಸಿ, ನೋಡಲ್ ಅಧಿಕಾರಿ ಗಳ ಮೇಲುಸ್ತುವಾರಿ ಜವಾಬ್ದಾರಿ ನೀಡುವುದು ಉತ್ತಮ. ಸದ್ಯ ಒಂದು ವಲಯದ ಜವಾಬ್ದಾರಿ, ಕೋವಿಡ್ ಕೆಲಸಗಳು ಜೊತೆಗೆ ಒಂದು ನಿರ್ದಿಷ್ಟ ವಾರ್ಡ್‌ನ ಜವಾಬ್ದಾರಿಯೂ ಇರುವುದು ತೀವ್ರ ಸಮಸ್ಯೆ ಆಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಜಂಟಿ ಆಯುಕ್ತರೊಬ್ಬರು ತಿಳಿಸಿದರು.
ನೋಡಲ್ ಅಧಿಕಾರಿಗಳ ಜವಾಬ್ದಾರಿ ಏನು ? :
- ಪಾಲಿಕೆ ಸದಸ್ಯರು ನಡೆಸುತ್ತಿದ್ದ ವಾರ್ಡ್ ಕಮಿಟಿಗಳ ಸಭೆಯನ್ನು ನೋಡಲ್ ಅಧಿಕಾರಿಗಳು ನಡೆಸುತ್ತಿದ್ದಾರೆ. ಸಮಿತಿಗಳ ಸಭೆಗಳಲ್ಲಿ ಭಾಗವಹಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಬೇಕು. ಮೊದಲ, ಮೂರನೇ ಶನಿವಾರ ಸಭೆ ನಡೆಸಲು ಸೂಚಿಸಲಾಗಿದೆ.
- ವಾರಕ್ಕೆಕನಿಷ್ಠ 3 ಬಾರಿ ವಾರ್ಡ್‌ನಲ್ಲಿ ವಿವಿಧ ವಿಷಯಗಳ ಬಗ್ಗೆ ಪರಿಶೀಲನೆ ನಡೆಸುವುದು. ಕಾಮಗಾರಿ ಗುಣಮಟ್ಟ,ಕಸ, ರಸ್ತೆ ಗುಂಡಿ, ಸಾರ್ವಜನಿಕರಕುಂದು- ಕೊರತೆ ಆಲಿಸುವುದು
- ವಾರ್ಡ್‌ನ ಶುಚಿಮಿತ್ರ, ಸಂಘ-ಸಂಸ್ಥೆ ಮತ್ತು ಕ್ಷೇಮಾಭಿವೃದ್ಧಿ ಸಂಘದವರನ್ನು ವಾರಕ್ಕೆ ಒಮ್ಮೆ ಭೇಟಿ ನೀಡಿ ಕುಂದು-ಕೊರತೆ ಬಗ್ಗೆ ಚರ್ಚಿಸುವುದು.
- ಪೌರಕಾರ್ಮಿಕರಕಾರ್ಯವೈಖರಿ, ಅವರ ಆರೋಗ್ಯ ಜವಾಬ್ದಾರಿ ಹಾಗೂ ಆರೋಗ್ಯ ಶಿಬಿರ, ಸಾಮೂಹಿಕ ಸ್ವತ್ಛತಾಕಾರ್ಯಕ್ರಮ ತಯಾರಿ ಬಗ್ಗೆ ಪರಿಶೀಲಿಸಲು ನಿರ್ದೇಶನ ನೀಡಲಾಗಿದೆ.
ಪಾಲಿಕೆ ಸದಸ್ಯರ ಅಧಿಕಾರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಉದ್ದೇಶದಿಂದ ತಾತ್ಕಾಲಿಕವಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಧಿಕಾರಿಗಳು ವಾಸವಿರುವ ವಾರ್ಡ್‌ಗಳಲ್ಲೇ ಈ ಜವಾಬ್ದಾರಿ ನೀಡಲಾಗಿದೆ.
–ಜೆ. ಮಂಜುನಾಥ್, ಬಿಬಿಎಂಪಿ ವಿಶೇಷ ಆಯುಕ್ತ
ಹೊಸ ನೋಡಲ್ ಅಧಿಕಾರಿಗಳಿಂದ ಹೊಸ ವಾರ್ಡ್ ಕಮಿಟಿಗಳನ್ನು ರಚನೆ ಮಾಡುವ ಬದಲು, ಈಗಿರುವ ವಾರ್ಡ್ ಕಮಿಟಿಗಳನ್ನೇ ಪಾಲಿಕೆ ಸದಸ್ಯ ರನ್ನು ಹೊರತುಪಡಿಸಿ ಮುಂದುವರಿಸ ಬೇಕು. ಇವರಿಗೆ ವಾರ್ಡ್‌ನ ಸಮಸ್ಯೆಗಳ ಅರಿವಿದೆ.ಅಲ್ಲದೆ,ವಾರ್ಡ್‌ಮಟ್ಟದವಿಪತ್ತು ನಿರ್ವಹಣಾಕೋಶದ ಸಮಿತಿ,ಬೂತ್ ಮಟ್ಟದ ಸಮಿತಿಯಅಧಿಕಾರಿಗ ಳನ್ನು ಸೇರಿಸಿಕೊಳ್ಳಬೇಕು.ಹೊಸಕಮಿಟಿರಚನೆ ಮಾಡಿದರೆ ಸವಾಲುಎದುರಾಗಲಿದೆ.
–ಕಾತ್ಯಾಯಿನಿ ಚಾಮರಾಜ್, ಸಾಮಾಜಿಕ ಕಾರ್ಯಕರ್ತೆ
–ಹಿತೇಶ್ ವೈ