Advertisement

ಏಳು ಹಂತಗಳಲ್ಲಿ ‘ಲೋಕ ಸಮರ’ : ಮೇ 23ಕ್ಕೆ Final Result

11:48 AM Mar 10, 2019 | Team Udayavani |

ನವದೆಹಲಿ: 17ನೇ ಲೋಕಸಭಾ ಚುನಾವಣೆಗಳಿಗಾಗಿ ಚುನಾವಣಾ ದಿನಾಂಕಗಳನ್ನು ಕೇಂದ್ರ ಚುನಾವಣಾ ಆಯೋಗವು ಇಂದು ಘೋಷಿಸಿದೆ. ಈ ಬಾರಿ ದೇಶಾದ್ಯಂತ ಒಟ್ಟು 7 ಹಂತಗಳಲ್ಲಿ ಲೋಕ ಸಮರ ನಡೆಯಲಿದೆ. ಮೇ 23ಕ್ಕೆ ಏಕಕಾಲದಲ್ಲಿ ಮತ ಎಣಿಕೆ ನಡೆದು ಫ‌ಲಿತಾಂಶ ಹೊರಬೀಳಲಿದೆ. ವಿವಿಧ ಹಂತಗಳಲ್ಲಿ ನಡೆಯುವ ಚುನಾವಣಾ ದಿನಾಂಕಗಳು ಈ ಕೆಳಗಿನಂತಿವೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವದೆಹಲಿಯಲ್ಲಿ ಇಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರಾ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿ ಈ ಮಾಹಿತಿಯನ್ನು ನೀಡಿದರು. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿವೆ. ಮೊದಲ ಹಂತದ ಚುನಾವಣೆ ಎಪ್ರಿಲ್‌ 18ರಂದು ಮತ್ತು ಎರಡನೇ ಹಂತದಲ್ಲಿ ಎಪ್ರಿಲ್‌ 23ರಂದು ತಲಾ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

Advertisement

ಮೊದಲನೇ ಹಂತದ ಚುನಾವಣೆಯು 20 ರಾಜ್ಯಗಳ 91 ಕ್ಷೇತ್ರಗಳಿಗೆ ನಡೆಯಲಿದೆ. ಎಪ್ರಿಲ್‌ 11ರಂದು ಇಲ್ಲಿ ಚುನಾವಣೆಗಳು ನಡೆಯಲಿವೆ.

ಎರಡನೇ ಹಂತದ ಚುನಾವಣೆಗಳು ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 97 ಕ್ಷೇತ್ರಗಳಿಗೆ ನಡೆಯಲಿದೆ. ಇಲ್ಲಿ ಏಪ್ರಿಲ್‌ 18ರಂದು ಮತದಾನ ನಡೆಯಲಿದೆ.

ಮೂರನೇ ಹಂತದಲ್ಲಿ 14 ರಾಜ್ಯಗಳ 115 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಇಲ್ಲಿ ಎಪ್ರಿಲ್‌ 23ರಂದು ಚುನಾವಣೆ ನಡೆಯಲಿದೆ.

ನಾಲ್ಕನೇ ಹಂತದಲ್ಲಿ 9 ರಾಜ್ಯಗಳ 71 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಇಲ್ಲಿ ಎಪ್ರಿಲ್‌ 29ರಂದು ಚುನಾವಣೆ ನಡೆಯಲಿದೆ.

Advertisement

ಐದನೇ ಹಂತದಲ್ಲಿ 7 ರಾಜ್ಯಗಳ 51 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಇಲ್ಲಿ ಮೇ 6ರಂದು ಚುನಾವಣೆ ನಡೆಯಲಿದೆ.

ಆರನೇ ಹಂತದಲ್ಲಿ 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಇಲ್ಲಿ ಮೇ 12ರಂದು ಚುನಾವಣೆ ನಡೆಯಲಿದೆ.

ಏಳನೇ ಹಂತದಲ್ಲಿ 8 ರಾಜ್ಯಗಳ 59 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಇಲ್ಲಿ ಮೇ 19ರಂದು ಚುನಾವಣೆ ನಡೆಯಲಿದೆ.

Main Points:
– ಲೋಕಸಭಾ ಚುನಾವಣೆಗಳಿಗಾಗಿ 10 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇನ್ನು ಪ್ರತೀ ಇ.ವಿ.ಎಂ.ಗಳಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಫೊಟೋಗಳಿರುತ್ತವೆ.

– ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಮತಗಟ್ಟೆಗಳಲ್ಲಿ ಕೇಂದ್ರೀಯ ಮೀಸಲು ಭದ್ರತಾ ಪಡೆಗಳನ್ನು (ಸಿ.ಆರ್‌.ಪಿ.ಎಫ್.) ನಿಯೋಜಿಸಲಾಗುವುದು.

– ನೀತಿ ಸಂಹಿತೆ ಜಾರಿಗೊಂಡ ಕ್ಷಣದಿಂದ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.

– ಚುನಾವಣೆಗೆ ಸ್ಪರ್ಧಿಸುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಈ ಬಾರಿ ಪಾನ್‌ ಕಾರ್ಡ್‌ ಹೊಂದಿರುವಿಕೆಯನ್ನು ಕಡ್ಡಾಯ ಮಾಡಲಾಗಿದೆ.

– ದೇಶದಲ್ಲಿ ಒಟ್ಟು 90 ಕೋಟಿ ಮತದಾರರಿದ್ದಾರೆ. ಈ ಬಾರಿ 8.4 ಕೋಟಿ ಹೊಸ ಮತದಾರರು ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

– ಲೋಕಸಭಾ ಚುನಾವಣೆಗಳಿಗಾಗಿ 10 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇನ್ನು ಪ್ರತೀ ಇ.ವಿ.ಎಂ.ಗಳಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಫೊಟೋಗಳಿರುತ್ತವೆ.

– 16ನೇ ಲೋಕಸಭಾ ಅವಧಿಯು ಜೂನ್‌ 3ಕ್ಕೆ ಮುಕ್ತಾಯಗೊಳ್ಳಲಿದೆ.

– ಈ ನಿಟ್ಟಿನಲ್ಲಿ ದೇಶದಲ್ಲಿ ಶಾಂತಿಯುತ ಮತ್ತು ಪಾರದರ್ಶಕ ಮಾದರಿಯ ಚುನಾವಣೆಯನ್ನು ನಡೆಸುವ ಉದ್ದೇಶದಿಂದ ಆಯೋಗವೂ ಹಲವು ತಿಂಗಳುಗಳಿಂದ ಪೂರ್ವತಯಾರಿಯನ್ನು ನಡೆಸಿದೆ.

– ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ, ಭದ್ರತಾ ವ್ಯವಸ್ಥೆಗಳ ಕುರಿತಾಗಿ ವಿವಿಧ ರಾಜ್ಯಗಳ ಪೊಲೀಸ್‌ ವರಿಷ್ಠರೊಂದಿಗೆ ಸಮಾಲೋಚನೆ, ವಿದ್ಯಾರ್ಥಿಗಳ ಪರೀಕ್ಷಾ ಸಮಯಗಳನ್ನು ಗಣನೆಗೆ ತೆಗೆದುಕೊಂಡಿದ್ದೇವೆ. ಮಾತ್ರವಲ್ಲದೆ ಬೆಳೆ ಕಟಾವು ಋತುಗಳು, ವಿವಿಧ ಧರ್ಮಗಳ ಪ್ರಮುಖ ಆಚರಣೆಗಳ ಅವಧಿಗಳನ್ನೂ ಪರಿಗಣಿಸಲಾಗಿದೆ. ಎಲ್ಲಾ ರಾಜ್ಯಗಳ ಚುನಾವಣಾ ಆಯುಕ್ತರ ಜೊತೆಗೂ ಸರಣಿ ಸಭೆಗಳನ್ನು ನಡೆಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next