ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹಾಭಿಯೋಗದ ಔಪಚಾರಿಕ ವಿಚಾರಣೆ ಆರಂಭವನ್ನು ಡೆಮಾಕ್ರಾಟ್ ಪಕ್ಷದ ಪ್ರಮುಖ ನಾಯಕಿ ನ್ಯಾನ್ಸಿ ಪೆಲೋಸಿ ಆರಂಭಿಸಿರುವುದಾಗಿ ಪ್ರಕಟಿಸಿದ್ದಾರೆ. ಡೆಮಾಕ್ರಾಟಿಕ್ ಪಕ್ಷದ ಪ್ರತಿಸ್ಪರ್ಧಿ ಜೋಯ್ ಬಿಡೆನ್‌ರನ್ನು ಹಿಮ್ಮೆಟ್ಟಿಸಲು ವಿದೇಶಿ ನೆರವನ್ನು ಟ್ರಂಪ್ ಪಡೆಯುವ ಮೂಲಕ ಅವರು ನಿಯಮಗಳನ್ನು ಉಲ್ಲಂ ಸಿದ್ದಾರೆ ಎಂದು ಆರೋಪಿಸಲಾಗಿದೆ. ಅಧ್ಯಕ್ಷೀಯ ಚುನಾವಣೆಗೆ ಇನ್ನು 14 ತಿಂಗಳು ಬಾಕಿ ಇರುವಾಗ ಈ ಸಂಕೀರ್ಣ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಆದರೆ ಇದನ್ನು ದುರುದ್ದೇಶಪೂರಿತ ಪ್ರಕ್ರಿಯೆ ಎಂದು ಟ್ರಂಪ್ ಕರೆದಿದ್ದಾರೆ. ಟ್ರಂಪ್ ಕೃತ್ಯವು ದೇಶದ ಭದ್ರತೆಯನ್ನು ಅಪಾಯಕ್ಕೆ ಒಡ್ಡುವಂಥದ್ದು ಮತ್ತು ನಮ್ಮ ಚುನಾವಣೆ ಪ್ರಕ್ರಿಯೆಯನ್ನು ಉಲ್ಲಂ ಸಿದೆ. ಹೀಗಾಗಿ ನಾನು ಈ ವಿಚಾರಣೆ ಪ್ರಕ್ರಿಯೆಯನ್ನು ಪ್ರಸ್ತಾಪಿಸುತ್ತಿದ್ದೇನೆ ಎಂದು ವಾಷಿಂಗ್ಟನ್‌ನಲ್ಲಿ ಪೆಲೋಸಿ ವಿವರಿಸಿದ್ದಾರೆ. ಕಳೆದ ಕೆಲವು ತಿಂಗಳಿಂದಲೂ ಈ ಕುರಿತ ಸುದ್ದಿಗಳು ಹರಿದಾಡುತ್ತಿದ್ದವಾದರೂ, ಮುಂಬರುವ ಚುನಾವಣೆಯ ಮೇಲೆ ಗಮನ ಕೇಂದ್ರೀಕರಿಸುವ ನಿಟ್ಟಿನಲ್ಲಿ ಬಹುತೇಕ ಸಂಸದರು ಈ ವಿಚಾರವನ್ನು ಕೈಬಿಟ್ಟಿದ್ದರು.