Advertisement

ರಾಜ್ಯದ ಭಡ್ತಿ ಮೀಸಲಾತಿ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

07:53 PM Jun 15, 2018 | Team Udayavani |

ಬೆಂಗಳೂರು : ಕರ್ನಾಟಕ ಸರಕಾರ ಸಲ್ಲಿಸಿದ್ದ ಭಡ್ತಿ ಮೀಸಲಾತಿ ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಅಂಕಿತ ಹಾಕಿರುವುದಾಗಿ ವರದಿಯಾಗಿದೆ.

Advertisement

ಮುಂಭಡ್ತಿ ಪಡೆದಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರಕಾರಿ ಅಧಿಕಾರಿಗಳಿಗೆ ಇದು ಅತ್ಯಂತ ಹಿತಾನುಭವದ ಸಿಹಿ ಸುದ್ದಿಯಾಗಿದೆ.

2017ರ ಡಿಸೆಂಬರ್‌ 16ರಂದು ರಾಜ್ಯ ಸರಕಾರ ರಾಷ್ಟ್ರಪತಿಗೆ ಎಸ್‌ಸಿ/ಎಸ್‌ಟಿ ನೌಕರರ ಭಡ್ತಿ ಮೀಸಲಾತಿ ವಿಧೇಯಕವನ್ನು ಕಳುಹಿಸಿಕೊಟ್ಟಿತ್ತು. ಈ ವಿಧೇಯಕವನ್ನು ಅಂದಿನ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರಕಾರ ಉಭಯ ಸದನಗಳಲ್ಲಿ ಅಂಗೀಕರಿಸಿತ್ತು. ಇದೀಗ ಅದಕ್ಕೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next