ಹೊಸದಿಲ್ಲಿ: ಸಶಸ್ತ್ರ ಸೇನಾಪಡೆಯಲ್ಲಿ ಸಾಹಸ ಮೆರೆದ ಯೋಧರಿಗೆ ಘೋಷಿಸಲಾದ ಕೀರ್ತಿ ಚಕ್ರ ಹಾಗೂ ಶೌರ್ಯ ಚಕ್ರ ಪುರಸ್ಕಾರಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಪ್ರದಾನ ಮಾಡಿದರು. ಸೇನಾ ಮುಖ್ಯಸ್ಥ ಬಿಪಿನ್ ರಾವತ್‌ರಿಗೂ ಪರಮ ವಿಶಿಷ್ಟ ಸೇವಾ ಪದಕವನ್ನು ಪ್ರದಾನ ಮಾಡಲಾಯಿತು. ಸಿಪಾಯಿ ಬ್ರಹ್ಮಪಾಲ್ ಸಿಂಗ್ ಹಾಗೂ ರಾಜೇಂದ್ರ ಕುಮಾರ್ ನಯನ್‌ರಿಗೆ ಕೀರ್ತಿ ಚಕ್ರ ಪ್ರದಾನ ಮಾಡಲಾಗಿದ್ದು, 15 ಯೋಧರಿಗೆ ಶೌರ್ಯ ಚಕ್ರ ಪುರಸ್ಕರಿಸಲಾಗಿದೆ. ಸಶಸ್ತ್ರ ಸೇನಾ ಪಡೆಯ ಸುಪ್ರೀಂ ಕಮಾಂಡರ್ ಆಗಿದ್ದ ರವೀಂದ್ರ ಧನವಡೆ ಅವರಿಗೆ ಮರಣೋತ್ತರ ಶೌರ್ಯ ಚಕ್ರ ಪುರಸ್ಕರಿಸಲಾಗಿದ್ದು, ಕುಟುಂಬ ಸದಸ್ಯರು ಸ್ವೀಕರಿಸಿದ್ದಾರೆ. ರಾವತ್‌ಅಲ್ಲದೆ ಇತರ 14 ಹಿರಿಯ ಅಧಿಕಾರಿಗಳಿಗೆ ಪರಮ ವಿಶಿಷ್ಟ ಸೇವಾ ಪುರಸ್ಕಾರ ನೀಡಲಾಗಿದೆ. 25 ಉನ್ನತ ಅಧಿಕಾರಿಗಳಿಗೆ ಅತಿ ವಿಶಿಷ್ಟ ಸೇವಾ ಪದಕ ಪುರಸ್ಕರಿಸಲಾಗಿದೆ.