Advertisement

ಅಟಲ್‌ ಮೊದಲ ಪುಣ್ಯತಿಥಿ: ಸದೇವ್‌ ಅಟಲ್ ಗೆ ರಾಷ್ಟ್ರಪತಿ, ಪ್ರಧಾನಿ ಭೇಟಿ

09:10 AM Aug 17, 2019 | keerthan |

ಹೊಸದಿಲ್ಲಿ: ಮಾಜಿ ಪ್ರಧಾನ ಮಂತ್ರಿ, ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರು ಅಗಲಿ ಇಂದಿಗೆ ಒಂದು ವರ್ಷ. ರಾಜ್‌ ಘಾಟ್‌ ನಲ್ಲಿರುವ ಅಟಲ್‌ ಸ್ಮಾರಕ ಸದೇವ್‌ ಅಟಲ್ ಗೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಹಿರಿಯ ನಾಯಕನ್ನು ನೆನೆದು ಗೌರವ ಸಲ್ಲಿಸಿದರು.

Advertisement

ಬಿಜೆಪಿ ಸಂಸ್ಥಾಪಕನ ಮೊದಲ ಪುಣ್ಯತಿಥಿಯ ಪ್ರಯುಕ್ತ ಸದೇವ್‌ ಅಟಲ್‌ ಗೆ ಅಗಮಿಸಿದ ಅಟಲ್‌ ಬಿಹಾರಿ ವಾಜಪೇಯಿಯವರ ಪುತ್ರಿ ನಮಿತಾ ಕೌಲ್‌ ಭಟ್ಟಾಚಾರ್ಯ, ಮೊಮ್ಮಗಳು ನಿಹಾರಿಕಾ ಸೇರಿದಂತೆ ಬಿಜೆಪಿ ನಾಯಕರು ನಮನ ಸಲ್ಲಿಸಿದರು.

ಪ್ರತೀ ಜಿಲ್ಲೆಯ ಬಿಜೆಪಿ ಕಚೇರಿಗಳಲ್ಲೂ ಇಂದು ಅಟಲ್‌ ಜಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next