Advertisement

President Droupadi Murmu ಅವರಿಗೆ ಟಿಮೋರ್-ಲೆಸ್ಟೆ ದೇಶದ ಅತ್ಯುನ್ನತ ಗೌರವ

06:26 PM Aug 10, 2024 | Team Udayavani |

ಡಿಲಿ: ಆಗ್ನೇಯ ಏಷ್ಯಾದ ರಾಷ್ಟ್ರ ಟಿಮೋರ್-ಲೆಸ್ಟೆ ಯ(Democratic Republic of Timor-Leste) ಅತ್ಯುನ್ನತ ಗೌರವ ಪ್ರಶಸ್ತಿ(‘Grand-Collar of the Order’) ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ (ಆಗಸ್ಟ್ 10 ) ರಂದು ಭಾಜನರಾಗಿದ್ದಾರೆ.

Advertisement

ಟಿಮೋರ್-ಲೆಸ್ಟೆ ಅಧ್ಯಕ್ಷ ಜೋಸ್ ರಾಮೋಸ್ ಹೊರ್ಟಾ ಅವರು ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದ್ರೌಪದಿ ಮುರ್ಮು ”ಈ  ವಿಶೇಷ ಸಂವಾದಾತ್ಮಕ ಅಧಿವೇಶನಕ್ಕಾಗಿ ಅಧ್ಯಕ್ಷ ಹೋರ್ಟಾ ಅವರಿಗೆ ನಾನು ಕೃತಜ್ಞಳಾಗಿದ್ದೇನೆ. ಇದು ಭಾರತ ಮತ್ತು ಭಾರತೀಯರ ಬಗ್ಗೆ ಅವರ ಪ್ರೀತಿ ಮತ್ತು ಗೌರವದ ಅಭಿವ್ಯಕ್ತಿಯಾಗಿದೆ. ‘ಗ್ರ್ಯಾಂಡ್ ಕೊಲಾರ್ ಆಫ್ ದಿ ಆರ್ಡರ್’ ಪ್ರಶಸ್ತಿ ನನಗೆ ನೀಡಿರುವುದು ಇದೇ ಭಾವನೆಯ ಪುರಾವೆ. ಟಿಮೋರ್-ಲೆಸ್ಟೆಯೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ಮೊದಲ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ಸಂಬಂಧಗಳು ಪ್ರಜಾಪ್ರಭುತ್ವದ ಹಂಚಿಕೆಯ ತತ್ವಗಳನ್ನು ಆಧರಿಸಿವೆ.ನಾವು ಶೀಘ್ರದಲ್ಲೇ ಟಿಮೋರ್-ಲೆಸ್ಟೆಯಲ್ಲಿ ರಾಯಭಾರ ಕಚೇರಿಯನ್ನು ತೆರೆಯುತ್ತೇವೆ. ಇದು ಭಾರತೀಯ ನಾಗರಿಕರು ಮತ್ತು ಭಾರತೀಯ ಬೇರುಗಳನ್ನು ಹೊಂದಿರುವ ಜನರಿಗೆ ಉತ್ತಮ ಕಾನ್ಸುಲರ್ ಸೇವೆಗಳನ್ನು ಖಚಿತಪಡಿಸುತ್ತದೆ’ ಎಂದರು.

“ಜಗತ್ತಿನಲ್ಲಿ ಸುಮಾರು 50% ಮಹಿಳೆಯರಿದ್ದಾರೆ. ಕುಟುಂಬ, ಸಮಾಜ ರಾಷ್ಟ್ರವಾಗಲಿ ಪ್ರಪಂಚವಾಗಲಿ ಪ್ರಗತಿಗೆ ಮಹಿಳೆಯರ ಪ್ರಗತಿ ಅಗತ್ಯ.ಪ್ರತಿಯೊಬ್ಬರ ಪರಿಸ್ಥಿತಿಯು ನಿಜವಾಗಿಯೂ ವಿಭಿನ್ನವಾಗಿದ್ದು ಸಮಾಜ ಈಗ ಆಧುನಿಕವಾಗಿದೆ. ಒಂದು ಕಾಲದಲ್ಲಿ ಮಹಿಳೆಯರು ತಮ್ಮ ಮನೆಯೊಳಗೆ ಇರುತ್ತಿದ್ದರು, ಆದರೆ ಈಗ ಎಲ್ಲರೂ ಅರ್ಥಮಾಡಿಕೊಂಡಿದ್ದು ಮುಂದೆ ಸಾಗಲು ಮತ್ತು ತಮ್ಮ ಕುಟುಂಬ, ಸಮಾಜ ಮತ್ತು ದೇಶವನ್ನು ಮುನ್ನಡೆಸಲು ಬಯಸುತ್ತಾರೆ” ಎಂದರು.

”ಭಾರತದಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಸ್ವಸಹಾಯ ಗುಂಪುಗಳನ್ನು ಮಾಡಿದ್ದೇವೆ.ನಾನು ಅನೇಕ ಸ್ಥಳಗಳಿಗೆ ಹೋಗಿ ಉದ್ಯಮಿಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಹಿಳೆಯರನ್ನು ನೋಡುತ್ತೇನೆ. ಭಾರತದಲ್ಲಿ ಮಹಿಳೆಯರನ್ನು ‘ಮಾತೃ ಶಕ್ತಿ’ ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರಿಗೆ ಸಾಕಷ್ಟು ಶಕ್ತಿಯಿದೆ ಮತ್ತು ನಾವು ಆ ಶಕ್ತಿಯನ್ನು ಹೊರತೆಗೆದು ಜಗತ್ತಿಗೆ ತೋರಿಸಬೇಕು”ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next