ನವದೆಹಲಿ: ಪ್ರಧಾನಿ ಇಂದಿರಾ ಗಾಂಧಿ 1975ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದು, ಸಂವಿಧಾನದ ಮೇಲೆ ನಡೆಸಿದ ಅತಿ ದೊಡ್ಡ ಪ್ರಹಾರವಾಗಿದೆ ಎಂದು ತಿಳಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಇದು ದೇಶದ ಇತಿಹಾಸದಲ್ಲಿನ ಕಪ್ಪು ಅಧ್ಯಾಯವಾಗಿದೆ ಎಂದರು.
ಇದನ್ನೂ ಓದಿ:Rain: ಕುದುರೆಮುಖ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ.. ಮುಳುಗುವ ಹಂತದಲ್ಲಿ ಹೆಬ್ಬಾಳೆ ಸೇತುವೆ
ಅವರು ಗುರುವಾರ (ಜೂನ್ 27) ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ನಂತರ ರಚನೆಯಾದ ನೂತನ ಸರ್ಕಾರದ ಬಳಿಕ 18ನೇ ಲೋಕಸಭೆಯ ಮೊದಲ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇಶ ಅವ್ಯವಸ್ಥೆಯ ಆಗರದಲ್ಲಿ ಮುಳುಗಿತ್ತು, ಇದೊಂದು ಪ್ರಜಾಪ್ರಭುತ್ವದ ಮೇಲೆ ನಡೆದ ಕಳಂಕವಾಗಿದ್ದು, ಇದನ್ನು ಪ್ರತಿಯೊಬ್ಬರು ಖಂಡಿಸಲೇಬೇಕು ಎಂದು ಮುರ್ಮು ಹೇಳಿದರು.
ತುರ್ತುಪರಿಸ್ಥಿತಿ ಹೇರಿಕೆ ದೇಶದ ಸಂವಿಧಾನದ ಮೇಲೆ ನಡೆದ ಅತೀ ದೊಡ್ಡ ಹಾಗೂ ಕಳಂಕಿತ ಅಧ್ಯಾಯವಾಗಿದೆ. ಆದರೆ ದೇಶ ಇಂತಹ ಅಸಾಂವಿಧಾನಿಕ ಶಕ್ತಿಯ ವಿರುದ್ಧ ಜಯಗಳಿಸಿರುವುದಾಗಿ ಮುರ್ಮು ಜಂಟಿ ಅಧಿವೇಶನದಲ್ಲಿ ಹೇಳಿದ್ದು, ಇದನ್ನು ಬಿಜೆಪಿ ಸಂಸದರು ಸ್ವಾಗತಿಸಿದ್ದು, ವಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದರು.