Advertisement

Bhatkal: ದೆಹಲಿಯಲ್ಲಿ ರಾಷ್ಟ್ರಪತಿಯವರನ್ನು ಭೇಟಿಯಾದ ಭಟ್ಕಳ ಸ್ನೇಹ ವಿಶೇಷ ಶಾಲೆಯ ತಂಡ

04:19 PM Nov 15, 2023 | |

ಭಟ್ಕಳ: ನಗರದ ಬಂದರು ರಸ್ತೆಯಲ್ಲಿರುವ ಸ್ನೇಹ ವಿಶೇಷ ಶಾಲೆಯ ಸ್ಕೌಟ್ಸ್ ಮತ್ತು ಗೌಡ್ಸ್ ವಿದ್ಯಾರ್ಥಿಗಳು ತಮ್ಮ ಶಿಕ್ಷಕರು ಹಾಗೂ ಶಾಲೆಯ ಹಿತೈಷಿಗಳೊಂದಿಗೆ ಮಕ್ಕಳ ದಿನಾಚರಣೆಯ ಅಂಗವಾಗಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರನ್ನು ಭೇಟಿಯಾಗಿದ್ದಾರೆ.

Advertisement

ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳನ್ನು ಭೇಟಿಯಾದ ತಂಡದಲ್ಲಿ ಸ್ನೇಹ ವಿಶೇಷ ಶಾಲೆಯ ವಿದ್ಯಾರ್ಥಿಗಳಾದ ಮನೋಹರ ಬಾಬು ನಾಯ್ಕ, ಉಕ್ಕಾಸ ಸುದೈಸ್, ಸಂಜಯ ಶಿವರಾಜ ಮೊಗೇರ, ವಿಜಯ ಕುಮಾರ್, ಶೈಜಾನ್, ಮೊಹಮ್ಮದ್ ಫೌಜಾನ್, ರಕ್ಷಿತಾ ಎಸ್. ಮೊಗೇರ, ಸುಧಾ ಎಂ. ನಾಯ್ಕ, ನಂದಿತಾ ಎನ್. ನಾಯ್ಕ, ಅರ್ಚನಾ ಜಿ. ನಾಯ್ಕ, ಯಾಸೀರ್ ಅರ್ಫಾತ್, ಅಫೀಫಾ ಅಹಮ್ಮದ್, ಚೈತ್ರಾ ನಾಯ್ಕ, ಜ್ಯೋತಿ ಎನ್. ದೇಸಾಯಿ, ಚಿನ್ಮಯಿ ಜಿ. ಲಿಂಗಾಯಿತ್ ಇದ್ದರು. ಶಾಲೆಯ ಆಡಳಿತಾಧಿಕಾರಿ ಹಾಗೂ ಪ್ರಾಂಶುಪಾಲೆ ಮಾಲತಿ ಉದ್ಯಾವರ್, ಲೆ.ಕ. ಜೆ.ಎ. ರಾಕ್, ಡಾ. ಮಧು ರಾಕ್, ಶಮಾ ಸುಲ್ತಾನ್, ಚಂದನ ನಾಯ್ಕ, ಸುರೇಶ ನಾಯ್ಕ, ಸೀಮಾ ಭಾರ್ಗವ, ದೇವಿ ನಾಯ್ಕ, ರಮೇಶ ನಾಯ್ಕ ಹಾಗೂ ರವಿ ಖಾರ್ವಿ ಇದ್ದರು.

ಭಟ್ಕಳದ ಸ್ನೇಹ ವಿಶೇಷ ಶಾಲಾ ವಿದ್ಯಾರ್ಥಿಗಳು ಈಗಾಗಲೇ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿಯೂ ಕೂಡಾ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದು, ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳನ್ನು ಭೇಟಿಯಾಗಿರುವುದು ಇನ್ನೊಂದು ಸಾಧನೆಯಾಗಿದೆ.

ಇದನ್ನೂ ಓದಿ: Semi-Final; ಭಾರತದ ಉತ್ತಮ ಆರಂಭ: 79 ರನ್ ಗಳಿಸಿದ್ದ ಗಿಲ್ ಗಾಯಾಳಾಗಿ ನಿವೃತ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next