Advertisement

ಮಹಾತ್ಮಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ: ಗೌರವ ಸಲ್ಲಿಸಿದ ರಾಷ್ಟ್ರಪತಿ, ಪ್ರಧಾನಿ

01:20 PM Oct 02, 2020 | keerthan |

ಹೊಸದಿಲ್ಲಿ: ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 151 ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 116ನೇ ಜನ್ಮದಿನ. ಹೀಗಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು.

Advertisement

ಮಹಾತ್ಮ ಗಾಂಧಿ ಸ್ಮಾರಕ ರಾಜ್ ಘಾಟ್ ಮತ್ತು ಶಾಸ್ತ್ರೀ ಸ್ಮಾರಕವಿರುವ ವಿಜಯ್ ಘಾಟ್ ಗೆ ತೆರಳಿ ಗೌರವ ಸಲ್ಲಿಸಲಾಯಿತು.

ಗಾಂಧಿ ಜಯಂತಿಯಂದು ಪ್ರೀತಿಯ ಬಾಪುವಿಗೆ ನಮಸ್ಕರಿಸುತ್ತೇನೆ. ಅವರ ಜೀವನ ಮತ್ತು ಉದಾತ್ತ ಆಲೋಚನೆಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಸಮೃದ್ಧ ಮತ್ತು ಸಹಾನುಭೂತಿಯ ಭಾರತವನ್ನು ರಚಿಸಲು ಬಾಪು ಅವರ ಆದರ್ಶಗಳು ನಮಗೆ ಮಾರ್ಗದರ್ಶನ ನೀಡಲಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಶುಭ ಹಾರೈಸಿದ ಪ್ರಧಾನಿ ಮೋದಿ, ಲಾಲ್ ಬಹದ್ದೂರ್ ಶಾಸ್ತ್ರಿಯವರು ವಿನಮ್ರ ಮತ್ತು ದೃಢ ಮನಸ್ಸಿನವರಾಗಿದ್ದರು. ಅವರು ಸರಳತೆಯನ್ನು ನಿರೂಪಿಸಿದರು ಮತ್ತು ನಮ್ಮ ರಾಷ್ಟ್ರದ ಕಲ್ಯಾಣಕ್ಕಾಗಿ ಬದುಕಿದರು. ತುಂಬಾ ಕೃತಜ್ಞತೆಯೊಂದಿಗೆ ಅವರ ಜಯಂತಿಯಂದು ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ ಎಂದಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next