Advertisement

BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ

01:09 AM Nov 28, 2024 | Team Udayavani |

ಬೆಂಗಳೂರು: ಬೆಳಗಾವಿಯಲ್ಲಿ ಡಿಸೆಂಬರ್‌ 9ರಿಂದ ನಡೆಯುವ ವಿಧಾನ ಮಂಡಲದ ಅಧಿವೇಶನದಲ್ಲಿ ರಾಜ್ಯ ಸರಕಾರವು ಬೆಂಗಳೂರನ್ನು 4 ಭಾಗವಾಗಿ ವಿಭಜಿಸಿ ಗ್ರೇಟರ್‌ ಬೆಂಗಳೂರಾಗಿ ರೂಪಿಸುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಸೂದೆ ಸೇರಿದಂತೆ ಒಟ್ಟು 11 ಮಸೂದೆಗಳನ್ನು ಮಂಡಿಸಲು ನಿರ್ಧರಿಸಿದೆ.

Advertisement

ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕೆಲವು ವಿಧೇಯಕಗಳ ಮಂಡನೆಗೆ ಒಪ್ಪಿಗೆಯನ್ನೂ ಪಡೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಇದು ಮಂಡನೆಯಾಗಿತ್ತು. ಆದರೆ ಪರಿಷತ್‌ನಲ್ಲಿ ಅಂಗೀಕಾರ ಸಿಗದ ಹಿನ್ನೆಲೆಯಲ್ಲಿ ಅಧ್ಯಾದೇಶದ ಮೂಲಕ ಜಾರಿಗೆ ತರಲಾಗಿತ್ತು. ತೆರಿಗೆ ಪರಿಹಾರಕ್ಕೆ ಸಂಬಂಧಪಟ್ಟ ಜಿಎಸ್‌ಟಿ ಕಾಯ್ದೆಗೆ ಚಿಕ್ಕ ತಿದ್ದುಪಡಿ ಮೂಲಕ ಅಧ್ಯಾದೇಶ ಹೊರಡಿಸಲಾಗಿತ್ತು. ಇವೆರಡನ್ನೂ ಮತ್ತೆ ಮಸೂದೆ ರೂಪದಲ್ಲಿ ಮಂಡಿಸಲಾಗುತ್ತದೆ.

ಇತರ ಮಸೂದೆಗಳು
-ಕರ್ನಾಟಕ ಪ್ರವಾಸೋದ್ಯಮ – ರೋಪ್‌ವೇ ಮಸೂದೆ
-ಠೇವಣಿದಾರರ ಹಿತಾಸಕ್ತಿ ರಕ್ಷಣೆ ಮಸೂದೆ
-ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮಸೂದೆ
-ಬಸವಣ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಮಸೂದೆ
-ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ಮಸೂದೆ
-ಚಾಣಕ್ಯ ವಿವಿ ತಿದ್ದುಪಡಿ ಮಸೂದೆ
-ಅಲೆಯನ್ಸ್‌ ವಿ.ವಿ. ತಿದ್ದುಪಡಿ ಮಸೂದೆ
-ಅಜೀಮ್‌ ಪ್ರೇಮ್‌ಜಿ ವಿ.ವಿ. ತಿದ್ದುಪಡಿ ಮಸೂದೆ
-ಕರ್ನಾಟಕ ಅಂತರ್ಜಲ ನಿಯಂತ್ರಣ ಮತ್ತು ನಿರ್ವಹಣೆ ತಿದ್ದುಪಡಿ ಮಸೂದೆ
-ಜಿಎಸ್‌ಟಿ ಕಾಯ್ದೆ ತಿದ್ದುಪಡಿ ಮಸೂದೆ

Advertisement

Udayavani is now on Telegram. Click here to join our channel and stay updated with the latest news.

Next